ಧಾರವಾಡ:ಜಿಲ್ಲಾ ಪಂಚಾಯಿತಿ ಸದಸ್ಯ ಯೋಗೇಶ್ ಗೌಡ ಹತ್ಯೆ ತನಿಖೆ ವಿಚಾರಕ್ಕೆ ಸಂಬಂಧಿಸಿದಂತೆ ಸಿಬಿಐ ಸಲ್ಲಿಸಿದ್ದ ಚಾರ್ಜ್‌ಶೀಟ್ ಪ್ರತಿ ಇದೀಗ ಲಭ್ಯವಾಗಿದೆ.
ವಿನಯ್ ಕುಲಕರ್ಣಿ ವಿರುದ್ಧ ಇತ್ತೀಚೆಗೆ ಸಿಬಿಐ ಸಲ್ಲಿಸಿದ್ದ ಸಂಪ್ಲಿಮೆಂಟರಿ ಚಾರ್ಜ್‌ಶೀಟ್ ಲಭ್ಯವಾಗಿದ್ದು, ಇದರಲ್ಲಿ ಕುಲಕರ್ಣಿ ವಿರುದ್ಧ ಆರೋಪಗಳ ಪಟ್ಟಿಯನ್ನು ಸಿಬಿಐ ಕೊಟ್ಟಿದೆ.ಸಿಬಿಐ ತನಿಖೆ ಆರಂಭದಲ್ಲಿ ಪೊಲೀಸ್ ತನಿಖೆಯಲ್ಲಿ ಓರ್ವನನ್ನು ಬಿಟ್ಟಿರುವುದು ಗಮನಕ್ಕೆ ಬಂದಿತ್ತು. ಸಿಬಿಐ ತನಿಖೆ ಆರಂಭದ ಬಳಿಕ ಮತ್ತಷ್ಟು ಜನರನ್ನು ಬಂದಿಸಿದ್ದೇವೆ. ವಿನಯ್ ಕುಲಕರ್ಣಿಯನ್ನು ನ. 5 ರ 2020 ರಂದು ಪ್ರಕರಣದ 15ನೇ ಆರೋಪಿಯಾಗಿ ಬಂಧಿಸಲಾಗಿತ್ತು.
ಸಿಬಿಐ ಸಲ್ಲಿಸಿದ್ದ ಚಾರ್ಜ್ ಶೀಟ್ ಪ್ರತಿ ಯೋಗೇಶ್ ಗೌಡ ಮತ್ತು ವಿನಯ್ ನಡುವೆ ವೈಯಕ್ತಿಕ ದ್ವೇಷ, ರಾಜಕೀಯ ಪೈಪೋಟಿ ನಡೆದಿತ್ತು. ಈ ನಡುವೆ ಯೋಗೇಶ್ಗೌಡ ಜಿಪಂ ಚುನಾವಣೆಗೆ ಸ್ಪರ್ಧಿಸಿದ್ದರು. ವಿಚಾರ ತಿಳಿದ ವಿನಯ್ ಕುಲಕರ್ಣಿ, ಚುನಾವಣೆಯಿಂದ ಹಿಂದೆ ಸರಿಯುವಂತೆ ಯೋಗೇಶ್ ಸಹೋದರ ಗುರುನಾಥನಿಗೆ ವಿನಯ್ ಕುಲಕರ್ಣಿ ಹೇಳಿದ್ದರು. ಆದರೂ ಯೋಗೇಶ್ ಚುನಾವಣೆಗೆ ಸ್ಪರ್ಧಿಸಿದ್ದರು. ಇದರಿಂದ ಕೋಪಗೊಂಡ ವಿನಯ್, ಅವರನ್ನು ಅರೆಸ್ಟ್ ಮಾಡಿಸಿದ್ದರು. ತದ ನಂತರ 23 ಏಪ್ರಿಲ್ 2016 ರಂದು ನಡೆದ ಜಿಪಂ ಸಭೆಯಲ್ಲಿ ಇಬ್ಬರ ಮಧ್ಯೆ ವಾದ-ವಾಗ್ವಾದ ನಡೆದಿತ್ತು ಎನ್ನಲಾಗುತ್ತಿದೆ.
ಇದೇ ದ್ವೇಷ ಮುಂದುವರೆಸಿದ ವಿನಯ್, ಯೋಗೇಶ್ ಗೌಡ ಕೊಲೆ ಮಾಡಿಸಿದ್ದರು. ಇದಕ್ಕೆ ಬಸವರಾಜ ಮುತ್ತಗಿ ಮತ್ತು ವಿನಯ್ ಸೋದರ ಮಾವ ಚಂದ್ರಶೇಖರ ಇಂಡಿ ಎಂಬುವವರನ್ನು ಬಳಿಸಿಕೊಂಡಿದ್ದರು. ಈ ನಡುವೆ 2016ರ ಮೇ 24ರಂದೇ ಜಮೀನು ವಿವಾದ ಮುಗಿದು ಹೋಗಿತ್ತು. ಆದರೂ ಮುತ್ತಗಿ ಮತ್ತು ನಾಗೇಂದ್ರ ತೋಡಕರ ಎಂಬುವವರ ಮಧ್ಯದ ವಿವಾದವನ್ನ ವಿಚಾರಣೆ ವೇಳೆ ಎಳೆದು ತರಲಾಗಿತ್ತು. ಇದು ಕೊಲೆ ಕೇಸ್ನ ದಿಕ್ಕು ಬದಲಿಸುವುದಕ್ಕೆ ಜಮೀನು ವಿವಾದವನ್ನ ವಿಚಾರಣೆ ಮಧ್ಯೆ ಎಳೆದು ತರಲಾಗಿತ್ತು ಎಂಬುದನ್ನು ಸಿಬಿಐ ಚಾರ್ಜ್ಶೀಟ್ನಲ್ಲಿ ದಾಖಲಿಸಿದೆ.
ಬಸವರಾಜ ಮುತ್ತಗಿ ಜೊತೆಗೆ ವಿನಯ್ ಕುಲಕರ್ಣಿ ನಿರಂತರವಾಗಿ ಫೋನ್ ಸಂಪರ್ಕದಲ್ಲಿದ್ದನು. ಹತ್ಯೆ ಸಂಬಂಧ ವಿನಯ್ ಮೊಬೈಲ್ ಸಂಖ್ಯೆ 9663406677ರಿಂದ ಮುತ್ತಗಿ ನಂ. 9538659906 ಜೊತೆ ನಿರಂತರ ಸಂಪರ್ಕದಲ್ಲಿದ್ದರು ಎಂಬುದು ತನಿಖೆ ವೇಳೆ ಬಯಲಾಗಿದೆ. 2016ರ ಜನವರಿಯಿಂದ ಜೂನ್ವರೆಗೆ ವಿನಯ್ ಕುಲಕರ್ಣಿ ಮುತ್ತಗಿಯೊಂದಿಗೆ ನಿರಂತರ ಫೋನ್ ಸಂಪರ್ಕದಲಿದ್ದರು. ಈ ಅವಧಿಯಲ್ಲಿ ಇಬ್ಬರು ಒಟ್ಟು 57 ಬಾರಿ ಮಾತುಕತೆ ನಡೆಸಿದ್ದಾರೆ. ಅಷ್ಟೇ ಅಲ್ಲದೆ ವಿನಯ್ ಕುಲಕರ್ಣಿ ಪತ್ನಿ ಮೊಬೈಲ್‌ನಲ್ಲಿಯೂ ಮಾತುಕತೆ ನಡೆದಿದ್ದು, ಯೋಗೇಶ್ನನ್ನು ಕೊಲೆಗೆ ಸಂಬಂಧಿಸಿದಂತೆ 2016ರ ಏಪ್ರಿಲ್ 23ರಿಂದ ಅದೇ ವರ್ಷದ ಮೇ 31ರವರೆಗೆ ವಿನಯ್ ಮುತ್ತಗಿಯನ್ನ ವಿನಯ್ ಅನೇಕ ಸಲ ಭೇಟಿ ಮಾಡಿದ್ದರು.
ಬೇರೆ ಬೇರೆ ಮೊಬೈಲ್ ಬಳಸಿ ಮುತ್ತಗಿ ಮತ್ತು ವಿನಯ್ ಮಾತುಕತೆ ಹತ್ಯೆ ಸ್ಕೇಚ್ಗೆ ಸಂಬಂಧಿಸಿದಂತೆ ಮಾತುಕತೆ ನಡೆಸಿದ್ದರು. ಯೋಗೇಶ್ ಗೌಡ ಕೊಲೆ ಮಾಡಲು 3 ಕಂಟ್ರಿ ಪಿಸ್ತೂಲ್ಗಳ ವ್ಯವಸ್ಥೆಯನ್ನು ವಿನಯ್ ಸೋದರ ಮಾವ ಚಂದ್ರಶೇಖರ ಇಂಡಿ ಮಾಡಿದ್ದರು. ಬಸವರಾಜ ಮುತ್ತಗಿಗೆ ಕಂಟ್ರಿ ಪಿಸ್ತೂಲ್ ಹಸ್ತಾಂತರ ಮಾಡಿ ಕೊಲೆಗೆ ಮಾರಕಾಸ್ತ್ರಗಳನ್ನೂ ಸಹ ನೀಡಿದ್ದರು.
ಶಿವಾನಂದ ಬಿರಾದಾರ ಮೂಲಕ ಹಂತಕರು ಕಂಟ್ರಿ ಪಿಸ್ತೂಲ್ ಪಡೆದುಕೊಂಡಿದ್ದರು. ಅಷ್ಟೇ ಅಲ್ಲದೆ ಇವರಿಗೆ ದಾಂಡೇಲಿ ಹಾರ್ನ್ ಬಿಲ್ ರೆಸಾರ್ಟ್‌ನಲ್ಲಿ ತಂಗಲು ವಿನಯ್ ಕುಲಕರ್ಣಿ ಎಲ್ಲಾ ರೀತಿಯ ವ್ಯವಸ್ಥೆ ಮಾಡಿಸಿದ್ದರು. ಈ ಕುರಿತಂತೆ ರೆಸಾರ್ಟ್ ಮಾಲೀಕರು ಮಾಹಿತಿ ನೀಡಿದ್ದಾರೆ. ಮೊದಲ ಸಲ ಹತ್ಯೆ ಯತ್ನಕ್ಕೆ ಬಂದಾಗ ರೆಸಾರ್ಟ್‌ನಲ್ಲಿ ಹಂತಕರು ತಂಗಿದ್ದರು.
ಹತ್ಯೆ ಯತ್ನ ವಿಫಲ:
ಮೊದಲ ಹತ್ಯೆ ಯತ್ನದ ಬಳಿಕ ವಿನಯ್ ಕುಲಕರ್ಣಿ ಮುತ್ತಗಿಗೆ 6 ಲಕ್ಷ ರೂಗಳನ್ನು ತನ್ನ ಡೈರಿಯಲ್ಲಿ ನೀಡಿದ್ದರು. ಹಂತಕರಿಗೆ ಉಳಿದುಕೊಳ್ಳಲು ಧಾರವಾಡದ ಹೋಟೆಲ್ ಅಂಕಿತಾ ಮತ್ತು ಸೆಂಟ್ರಲ್ ಪಾರ್ಕ್‌ನಲ್ಲಿ ವ್ಯವಸ್ಥೆ ಮಾಡಲಾಗಿತ್ತು ಎಂದು ಸಿಬಿಐ ಪೂರಕ ಚಾರ್ಜ್ ಶೀಟ್ನಲ್ಲಿ ನಮೂದಿಸಿದೆ.