ಕರ್ನಾಟಕ

karnataka

ETV Bharat / state

ಯೋಗೀಶ ಗೌಡ ಹತ್ಯೆ ಪ್ರಕರಣ: ವಿಚಾರಣೆಗಾಗಿ ಮುತ್ತಗಿ ಕಾರು ಚಾಲಕನಿಗೆ ಸಿಬಿಐ ಬುಲಾವ್ - Yogesh Gowda murder case: CBI officers start the enquiry

ಹುಬ್ಬಳ್ಳಿ ಜಿಲ್ಲಾ ಪಂಚಾಯಿತಿ ಸದಸ್ಯ ಯೋಗೀಶ ಗೌಡ ಹತ್ಯೆ‌ ಪ್ರಕರಣಕ್ಕೆ ‌ಸಂಬಂಧಿಸಿದಂತೆ ಸಿಬಿಐ ತನಿಖೆ ಚುರುಕುಗೊಳಿಸಿದೆ.‌ ಧಾರವಾಡ ಉಪನಗರ ಪೊಲೀಸ್ ಠಾಣೆಯಲ್ಲಿ ಸಿಬಿಐನಿಂದ‌ ಹಲವರ ವಿಚಾರಣೆ ಮಾಡಲಾಗುತ್ತಿದೆ.

Yogesh Gowda murder case
ಯೋಗೀಶಗೌಡ ಹತ್ಯೆ‌ ಪ್ರಕರಣ

By

Published : Mar 3, 2020, 11:51 AM IST

Updated : Mar 3, 2020, 12:03 PM IST

ಧಾರವಾಡ: ಹುಬ್ಬಳ್ಳಿ ಜಿಲ್ಲಾ ಪಂಚಾಯಿತಿ ಸದಸ್ಯ ಯೋಗೀಶ ಗೌಡ ಹತ್ಯೆ‌ ಪ್ರಕರಣಕ್ಕೆ ‌ಸಂಬಂಧಿಸಿದಂತೆ ಸಿಬಿಐ ತನಿಖೆ ಚುರುಕುಗೊಳಿಸಿದೆ.‌ ಧಾರವಾಡ ಉಪನಗರ ಪೊಲೀಸ್ ಠಾಣೆಯಲ್ಲಿ ಸಿಬಿಐನಿಂದ‌ ಹಲವರ ವಿಚಾರಣೆ ಮಾಡಲಾಗುತ್ತಿದೆ.

ಆರೋಪಿ ಬಸವರಾಜ ಮುತ್ತಗಿ ಕಾರು ಚಾಲಕನಾಗಿದ್ದ ಸಂತೋಷನನ್ನು ಸಿಬಿಐ ಅಧಿಕಾರಿಗಳು ವಿಚಾರಣೆಗೆ ಕರೆದಿದ್ದಾರೆ. ಸಂತೋಷ್​ನನ್ನು ಈ ಹಿಂದೆ ಸಿಬಿಐ ಪೊಲೀಸರು ಬಂಧಿಸಿದ್ದರು.

ಸಿಬಿಐ ತನಿಖೆಯಲ್ಲಿ ಸಂತೋಷ್​ ಮೊದಲು ಬಂಧನಕ್ಕೊಳಗಾಗಿದ್ದ. ತಡೆಯಾಜ್ಞೆ ಬಂದ ಹಿನ್ನೆಲೆ ಸಂತೋಷನನ್ನು ಸಿಬಿಐ ಅಧಿಕಾರಿಗಳು ಕೈಬಿಟ್ಟಿದ್ದರು. ಈಗ ತನಿಖೆ ಪುನರ್ ಆರಂಭವಾದ ಹಿನ್ನೆಲೆ ಸಂತೋಷನನ್ನು ಸಿಬಿಐ‌ ಅಧಿಕಾರಿಗಳು ಕರೆಸಿದ್ದಾರೆ.

ಯೋಗೀಶ ಗೌಡ ಹತ್ಯೆ ಪ್ರಕರಣ: ಮುತ್ತಗಿ ಕಾರ್ ಚಾಲಕನ ವಿಚಾರಣೆ

ಧಾರವಾಡ ಉಪನಗರ ಠಾಣೆಯಲ್ಲಿ ವಿಚಾರಣೆ‌ ನಡೆದಿದ್ದು, ಸಿಬಿಐ ಹಿರಿಯ ಅಧಿಕಾರಿಗಳು ಸಂತೋಷ್​ಗೆ ಡ್ರಿಲ್ ನಡೆಸುತ್ತಿದ್ದಾರೆ. ವಿಚಾರಣೆ ನಡೆದಿರುವ ಹಿನ್ನೆಲೆ ಉಪನಗರ ಠಾಣೆಗೆ ಭಾರೀ ಬಂದೋಬಸ್ತ್ ಒದಗಿಸಲಾಗಿದೆ.

ಹಂತಕರ ಆರೋಗ್ಯ ತಪಾಸಣೆ:

ಆರೋಪಿಗಳ ಆರೋಗ್ಯ ವಿಚಾರಣೆ ನಡೆಸಲು ವೈದ್ಯರನ್ನು ಉಪನಗರ ಠಾಣೆಗೆ ಸಿಬಿಐ ಅಧಿಕಾರಿಗಳು ಕರೆತಂದಿದ್ದಾರೆ.

Last Updated : Mar 3, 2020, 12:03 PM IST

ABOUT THE AUTHOR

...view details