ಕರ್ನಾಟಕ

karnataka

ETV Bharat / state

ಶೆಟ್ಟರ್ ಪ್ರಯತ್ನ ಫಲ.. ಕಾಂಗ್ರೆಸ್​ನತ್ತ ಮುಖ ಮಾಡಿದ ಯಡಿಯೂರಪ್ಪ ಸಂಬಂಧಿ ಎಸ್ ಐ ಚಿಕ್ಕನಗೌಡರ್ - ಲೋಕಸಭಾ ಚುನಾವಣೆ ದೃಷ್ಟಿಯಿಂದ ಆಪರೇಷನ್ ಹಸ್ತ

ಲೋಕಸಭೆ ಚುನಾವಣೆ ಹಿನ್ನೆಲೆ ಸದ್ದಿಲ್ಲದೆ ಆಪರೇಷನ್ ಆರಂಭಿಸಿರುವ ಮಾಜಿ ಸಿಎಂ ಜಗದೀಶ್ ಶೆಟ್ಟರ್, ಬಿಜೆಪಿ ಪ್ರಮುಖ ನಾಯಕರನ್ನು ಕಾಂಗ್ರೆಸ್​ನತ್ತ ಸೆಳೆಯುತ್ತಿದ್ದಾರೆ. ಶೆಟ್ಟರ್ ಜೊತೆ ಒಂದು ಸುತ್ತಿನ ಮಾತುಕತೆ ಮಾಡಿರುವ ಮಾಜಿ ಶಾಸಕ ಚಿಕ್ಕನಗೌಡರ್, ನಿನ್ನೆ ತಮ್ಮ ನಿವಾಸದಲ್ಲಿ ಕರೆದ ಆಪ್ತರ ಸಭೆಯಲ್ಲಿ ಕಾಂಗ್ರೆಸ್ ಸೇರುವುದಾಗಿ ಘೋಷಣೆ ಮಾಡಿದ್ದಾರೆ.

Former MLA SI Chikanagouder spoke.
ಮಾಜಿ ಶಾಸಕ ಎಸ್ ಐ ಚಿಕ್ಕನಗೌಡರ್ ತಮ್ಮ ಅಪ್ತರ ಸಭೆಯಲ್ಲಿ ಮಾತನಾಡಿದರು.

By

Published : Jul 6, 2023, 4:38 PM IST

Updated : Jul 6, 2023, 5:08 PM IST

ತಮ್ಮ ನಿವಾಸದಲ್ಲಿ ಕರೆದ ಆಪ್ತರ ಸಭೆಯಲ್ಲಿ ಮಾಜಿ ಶಾಸಕ ಚಿಕ್ಕನಗೌಡರ್ ಮಾತನಾಡಿದರು.

ಹುಬ್ಬಳ್ಳಿ:ಮಾಜಿ ಮುಖ್ಯಮಂತ್ರಿಯಡಿಯೂರಪ್ಪ ಸಂಬಂಧಿ, ಬಿಜೆಪಿಯ ಮಾಜಿ ಶಾಸಕ ಚಿಕ್ಕನಗೌಡರ್ ಕಾಂಗ್ರೆಸ್​ಗೆ ಸೇರ್ಪಡೆಗೊಳ್ಳುವ ವಿಚಾರ ಸಾಕಷ್ಟು ದಟ್ಟವಾಗಿದ್ದು, ರಾಜ್ಯ ಹಾಗೂ ಜಿಲ್ಲೆಯ ರಾಜಕಾರಣದ ಬೆಳವಣಿಗೆಗೆ ಪುಷ್ಟಿ ನೀಡಲಿದೆ.

ಶೀಘ್ರದಲ್ಲಿ ಯಡಿಯೂರಪ್ಪ ಸಂಬಂಧಿ ಎಸ್ ಐ ಚಿಕ್ಕನಗೌಡರ್​ ಕಾಂಗ್ರೆಸ್ ಸೇರ್ಪಡೆಗೊಳ್ಳುವುದನ್ನು ಖಾತ್ರಿ ಪಡಿಸಿದ್ದಾರೆ. ಚಿಕ್ಕನಗೌಡರ ಕುಂದಗೋಳ ಮಾಜಿ ಶಾಸಕರಾಗಿದ್ದು, ಈ ಬಾರಿ ವಿಧಾನಸಭೆ ಚುನಾವಣೆಯಲ್ಲಿ ಪಕ್ಷೇತರರಾಗಿ ಕಣಕ್ಕಿಳದು ಪರಾಜಿತರಾಗಿದ್ದರು. ಬಿಜೆಪಿ‌ ಟಿಕೆಟ್ ಸಿಗದೇ ಪಕ್ಷೇತರರಾಗಿ ಸ್ಪರ್ಧಿಸಿ ಸೋತಿದ್ದ ಎಸ್ ಐ ಚಿಕ್ಕನಗೌಡರ ಈಗ ಕಾಂಗ್ರೆಸ್ ಪಕ್ಷದತ್ತ ಮುಖ ಮಾಡಿದ್ದಾರೆ.

ಲೋಕಸಭಾ ಚುನಾವಣೆ ದೃಷ್ಟಿಯಿಂದ ಆಪರೇಷನ್ ಹಸ್ತ:ಇನ್ನು ಲೋಕಸಭಾ ಚುನಾವಣಾ ದೃಷ್ಟಿಯಿಂದ ಕಾಂಗ್ರೆಸ್ ಸೇರಲಿರುವ ಚಿಕ್ಕನಗೌಡರ್​, ಮಾಜಿ ಸಿ ಎಂ ಜಗದೀಶ್ ಶೆಟ್ಟರ್ ನೇತೃತ್ವದಲ್ಲಿ ಕಾಂಗ್ರೆಸ್ ಸೇರ್ಪಡೆಗೊಳ್ಳಲು ಸಜ್ಜಾಗಿದ್ದಾರೆ. ಲೋಕಸಭೆ ಚುನಾವಣೆ ಹಿನ್ನೆಲೆಯಲ್ಲಿ ಸದ್ದಿಲ್ಲದೆ ಆಪರೇಷನ್ ಆರಂಭಿಸಿರುವ ಜಗದೀಶ್ ಶೆಟ್ಟರ್, ಬಿಜೆಪಿ ಪ್ರಮುಖ ನಾಯಕರನ್ನು ಕಾಂಗ್ರೆಸ್ ನತ್ತ ಸೆಳೆಯುತ್ತಿದ್ದಾರೆ. ಶೆಟ್ಟರ್ ಜೊತೆ ಒಂದು ಸುತ್ತಿನ ಮಾತುಕತೆ ಮಾಡಿರುವ ಎಸ್ ಐ ಚಿಕ್ಕನಗೌಡರ್, ನಿನ್ನೆ ತಮ್ಮ ನಿವಾಸದಲ್ಲಿ ಕರೆದಿದ್ದ ಆಪ್ತರ ಸಭೆಯಲ್ಲಿ ಕಾಂಗ್ರೆಸ್ ಸೇರುವುದಾಗಿ ಘೋಷಣೆ ಮಾಡಿದ್ದಾರೆ.

ನಾನು ಇಲ್ಲೇ ಪಕ್ಷಕ್ಕೆ ಸೇರಿ ಅಂದರೆ ಸೇರ್ತಿನಿ. ಇಲ್ಲ ಬೆಂಗಳೂರಿಗೆ ಬಂದು ಪಕ್ಷಕ್ಕೆ ಸೇರಿ ಅಂದರೆ ನಾನು ನಿಮಗೆಲ್ಲ ತಿಳಿಸುತ್ತೇನೆ ಎಂದು ಎಸ್ ಐ ಚಿಕ್ಕನಗೌಡರ್​ ತಿಳಿಸಿದ್ದಾರೆ. ಇದಕ್ಕೆ ನಿಮ್ಮ ಅಭಿಪ್ರಾಯ ತಿಳಿಸಬೇಕೆಂದು ತಮ್ಮ ಆಪ್ತರನ್ನು ಕೇಳಿದ ಚಿಕ್ಕನಗೌಡರಿಗೆ, ಆಪ್ತರೆಲ್ಲ ಕಾಂಗ್ರೆಸ್ ಸೇರಿ ಎಂದು ಸಲಹೆ ನೀಡಿದ್ದಾರೆ. ಅಧಿವೇಶನ ಮುಗಿಯೋದರೊಳಗಡೆ ಕಾಂಗ್ರೆಸ್ ಸೇರೋಣ ಎಂದು ಆಪ್ತರು ಸಲಹೆ ನೀಡಿರುವುದು ಸಾಕಷ್ಟು ಕುತೂಹಲಕ್ಕೆ ಕಾರಣವಾಗಿದೆ.

ಮಾಜಿ ಶಾಸಕ ಚಿಕ್ಕನಗೌಡರ್​ ಸಭೆಯಲ್ಲಿ ಹೇಳಿದ್ದಿಷ್ಟು..ಮೊದಲು ಕಾಂಗ್ರೆಸ್ ಮುಖಂಡರು ಎಲ್ಲಿ ಪಕ್ಷ ಸೇರುವ ಬಗ್ಗೆ ಸೂಚನೆ ನೀಡುತ್ತಾರೋ, ಅಲ್ಲಿಯೇ ಕಾಂಗ್ರೆಸ್ ಪಕ್ಷಕ್ಕೆ ಸೇರ್ಪಡೆ ಆಗಲು ನಿರ್ಧರಿಸಿರುವೆ ಎಂದರು. ಈ ಬಾರಿ ತಾಲೂಕು ಪಂಚಾಯಿತಿ, ಜಿಲ್ಲಾ ಪಂಚಾಯಿತಿ, ಲೋಕಸಭೆ ಕ್ಷೇತ್ರಗಳಲ್ಲಿ ಕಾಂಗ್ರೆಸ್ ಅಭ್ಯರ್ಥಿಗಳನ್ನು ಗೆಲ್ಲಿಸಿಕೊಂಡು ಬರಬೇಕು ಎಂದು ಅಭಿಮಾನಿಗಳಿಗೆ ಕರೆ ಕೊಟ್ಟರು.

ಯಾವುದೇ ಕೆಲಸಗಳನ್ನು ಮಾಡಬೇಕಾದರ ಛಲದಿಂದ ಕೆಲಸ ಮಾಡಿದ್ದೇನೆ. 1992ರಲ್ಲಿ ಸೋತಿದ್ದೆ, ಮತ್ತೆ 1999 ಕಲಘಟಗಿ ಮತಕ್ಷೇತ್ರದಿಂದ ಶಾಸಕನಾಗಿ ಕೆಲಸ ಮಾಡಿರುವೆ. ನನ್ನ ಮತಕ್ಷೇತ್ರದ ಎಲ್ಲ ಜಿ.ಪಂ, ತಾ.ಪಂ ಕ್ಷೇತ್ರಗಳನ್ನು ಗೆಲ್ಲಿಸಿಕೊಂಡು ಬರಬೇಕಂದು ತೀರ್ಮಾನಿಸಿದ್ದೆವು. ಏಳು ತಾಲೂಕು ಪಂಚಾಯಿತಿಗಳನ್ನು ಹಾಗೂ 2 ಜಿ.ಪಂ ಕ್ಷೇತ್ರಗಳನ್ನು ಗೆಲ್ಲಿಸಿಕೊಂಡು ಬಂದಿದ್ದೆನು. ಅಷ್ಟೇ ಅಲ್ಲದೇ ಕುಂದುಗೋಳ ಕ್ಷೇತ್ರದ ಶಾಸಕನಾಗಿ ಸಾಕಷ್ಟು ಅಭಿವೃದ್ಧಿ ಕೆಲಸಗಳನ್ನು ಮಾಡಿದ್ದೇನೆ. ಆದರೆ 31 ವರ್ಷಗಳಿಂದ ನಾನು ಭಾರತೀಯ ಜನತಾ ಪಕ್ಷ ಕಟ್ಟಿ ಬೆಳೆಸಿದ್ದೇನೆ. ಹಿಂದಿನ ಚುನಾವಣೆಯಲ್ಲಿ ನನಗೆ ಬಿಜೆಪಿ ಟಿಕೆಟ್ ಆಸೆ ತೋರಿಸಿ, ಕೊನೆ ಗಳಿಗೆಯಲ್ಲಿ ವಂಚಿಸಿತು ಎಂದು ಎಸ್ ಐ ಚಿಕ್ಕನಗೌಡರ್ ತಮ್ಮ ಅಪ್ತರ ಸಭೆಯಲ್ಲಿ ತಿಳಿಸಿದರು.

ಇದನ್ನೂಓದಿ:Deputy speaker: ವಿಧಾನಸಭೆ ಉಪಸಭಾಧ್ಯಕ್ಷರಾಗಿ ರುದ್ರಪ್ಪ ಲಮಾಣಿ ಅವಿರೋಧ ಆಯ್ಕೆ

Last Updated : Jul 6, 2023, 5:08 PM IST

ABOUT THE AUTHOR

...view details