ಹುಬ್ಬಳ್ಳಿ: ನಿನ್ನೆ ವಿಶ್ವ ಪರಿಸರ ದಿನದ ಅಂಗವಾಗಿ ಯುವಕರ ತಂಡವೊಂದು ರಸ್ತೆ ಬದಿಯಲ್ಲಿರುವ ಕಸದ ಡಬ್ಬಿ ಸ್ವಚ್ಚ ಮಾಡುವ ಮೂಲಕ ಪರಿಸರ ದಿನವನ್ನು ವಿಶೇಷವಾಗಿ ಆಚರಣೆ ಮಾಡಿದ್ದಾರೆ.
ರಸ್ತೆ ಬದಿಯ ಕಸದ ಬುಟ್ಟಿ ಸ್ವಚ್ಛಗೊಳಿಸಿದ ಯುವಕರ ತಂಡ... ವಿಭಿನ್ನವಾಗಿ ಪರಿಸರ ದಿನಾಚರಣೆ - Hubli latest news
ಸಾಮಾನ್ಯವಾಗಿ ನಿನ್ನೆ ಅನೇಕರು ಗಿಡ ನೆಡುವ ಮೂಲಕ ವಿಶ್ವ ಪರಿಸರ ದಿನಾಚರಣೆಯನ್ನು ಆಚರಿಸಿದ್ದಾರೆ. ಆದರೆ ಮಂಜುನಾಥ ಹೆಬಸೂರ ಗೆಳೆಯರ ಬಳಗ ವಿಭಿನ್ನವಾಗಿ ಪರಸರ ದಿನವನ್ನು ಆಚರಣೆ ಮಾಡಿದ್ದು, ನಗರದ ವಿವಿಧೆಡೆಯ ಕಸವನ್ನು ಸ್ವಚ್ಛಗೊಳಿಸಿದ್ದಾರೆ.
ರಸ್ತೆ ಬದಿಯ ಕಸದ ಬುಟ್ಟಿ ಸ್ವಚ್ಛಗೊಳಿಸಿದ ಯುವಕರ ತಂಡ
ನಗರದ ಮಂಜುನಾಥ ಹೆಬಸೂರ ಗೆಳೆಯರ ಬಳಗ ವಿಭಿನ್ನವಾಗಿ ಪರಸರ ದಿನವನ್ನು ಆಚರಣೆ ಮಾಡಿದ್ದು, ನಗರದ ವಿವಿಧೆಡೆಯ ಕಸವನ್ನು ಸ್ವಚ್ಛಗೊಳಿಸಿದ್ದಾರೆ. ಅಲ್ಲದೇ, ಲ್ಯಾಮಿಂಗ್ಟನ್ ಸ್ಕೂಲ್ ಬಳಿ ಕಸದ ಬುಟ್ಟಿಗಳು ತುಂಬಿರುವುದನ್ನು ಕಂಡು ಕಸವನ್ನು ಸ್ವಚ್ಛಗೊಳಿಸಿದ್ದಾರೆ. ನಂತರ ಪರಿಸರ ದಿನ ಕೇವಲ ಫೋಟೋಗಳಿಗೆ ಫೋಸ್ ನೀಡದೆ, ಪ್ರತಿಯೊಂದು ಮನೆಯಲ್ಲಿ ಗಿಡ ನೆಟ್ಟು ಬೆಳಸಬೇಕು. ಮರಗಳನ್ನು ಕಡಿದು ಜೀವನಕ್ಕೆ ಕಂಟಕವನ್ನು ತಂದುಕೊಳ್ಳಬೇಡಿ ಎಂದು ಜನರಲ್ಲಿ ಜಾಗೃತಿ ಮೂಡಿಸಿದ್ದಾರೆ.
Last Updated : Jun 7, 2020, 6:50 AM IST