ಧಾರವಾಡ : ನಾಲ್ಕನೇ ಬಾರಿಗೆ ಸಂಸದರಾಗಿ ಆಯ್ಕೆಯಾದ ಪ್ರಹ್ಲಾದ ಜೋಶಿ ಅವರಿಗೆ ಕೆಲ ಮಹಿಳೆಯರು ಮೊದಲ ದಿನವೇ ಮನೆ ನಿರ್ಮಿಸಿಕೊಡುವಂತೆ ಮನವಿ ಮಾಡಿದ ಪ್ರಸಂಗ ನಡೆದಿದೆ.
ಗೆದ್ದ ದಿನವೇ ಜೋಶಿ ಬಳಿ ಮಹಿಳೆಯರ ಮನವಿ...ಆ ಮನವಿ ಯಾವ್ದು ಗೊತ್ತಾ? - undefined
ಚುನಾವಣೆಯಲ್ಲಿ ಗೆದ್ದ ಬಳಿಕ ಪ್ರಹ್ಲಾದ್ ಜೋಷಿ ಮುರುಘಾಮಠಕ್ಕೆ ಭೇಟಿ ನೀಡಿದ ವೇಳೆಯಲ್ಲಿ ಕೆಲ ಮಹಿಳೆಯರು ಮನೆ ನಿರ್ಮಿಸಿಕೊಡುವಂತೆ ಮನವಿ ಮಾಡಿದ್ದಾರೆ.
![ಗೆದ್ದ ದಿನವೇ ಜೋಶಿ ಬಳಿ ಮಹಿಳೆಯರ ಮನವಿ...ಆ ಮನವಿ ಯಾವ್ದು ಗೊತ್ತಾ?](https://etvbharatimages.akamaized.net/etvbharat/prod-images/768-512-3371931-thumbnail-3x2-chai.jpg)
ಪ್ರಹ್ಲಾದ್ ಜೋಷಿ
ಪ್ರಹ್ಲಾದ್ ಜೋಶಿ ಬಳಿ ತಮ್ಮ ಮನವಿಯನ್ನು ಸಲ್ಲಿಸಿದ ಮಹಿಳೆಯರು
ವಿಜಯಶಾಲಿಯಾದ ಬಳಿಕ ಸಂಜೆ ಮುರುಘಾಮಠಕ್ಕೆ ಆಶೀರ್ವಾದ ಪಡೆಯಲು ಬಂದಿದ್ದ ಅವರಿಗೆ ಕೆಲ ಮಹಿಳೆಯರು ನಮಗೆ ಮನೆಗಳಿಲ್ಲ. ದಯವಿಟ್ಟು ಮನೆಗಳನ್ನು ನಿರ್ಮಿಸಿಕೊಡಿ ಎಂದು ಮನವಿ ಮಾಡಿಕೊಂಡಿದ್ದಾರೆ.
ಇವರ ಮನವಿಗೆ ಸ್ಪಂದಿಸಿದ ಜೋಶಿ, ಕೇಂದ್ರದ ನರೇಂದ್ರ ಮೋದಿ ಸರ್ಕಾರ ಮನೆಗಳನ್ನು ನಿರ್ಮಿಸಿ ಕೊಡುವುದಕ್ಕಾಗಿಯೇ ರಾಜ್ಯ ಸರ್ಕಾರಕ್ಕೆ ಹಣ ನೀಡುತ್ತದೆ. ಆ ಹಣ ಬಳಕೆ ಮಾಡಿಕೊಂಡು ರಾಜ್ಯ ಸರ್ಕಾರ ಬಡವರಿಗೆ ಮನೆಗಳನ್ನು ನಿರ್ಮಿಸಿ ಕೊಡಬೇಕು ಆದರೆ, ರಾಜ್ಯ ಸರ್ಕಾರ ಮುತುವರ್ಜಿ ವಹಿಸುತ್ತಿಲ್ಲ. ಆದರೂ ನಮ್ಮ ಬಿಜೆಪಿ ಶಾಸಕರ ಮೂಲಕ ಆದಷ್ಟ ಬೇಗ ನಿಮಗೆ ಸೂರು ಒದಗಿಸಲಾಗುವುದು ಎಂದು ಭರವಸೆ ನೀಡಿದರು.