ಧಾರವಾಡ: ಮಂಡ್ಯ ಲೋಕಸಭಾ ಅಖಾಡ ದಿನದಿಂದ ದಿನಕ್ಕೆ ರಂಗೇರುತ್ತಿದೆ. ಅಲ್ಲಿ ಸುಮಲತಾ ಅಂಬರೀಶ್ ಮತ್ತು ಸಿಎಂ ಪುತ್ರ ನಿಖಿಲ್ ಕುಮಾರಸ್ವಾಮಿ ನಡುವೆ ನೇರ ಹಣಾಹಣಿ ನಡೆಯುತ್ತಿದೆ. ಇತ್ತ ಪಕ್ಷೇತರ ಅಭ್ಯರ್ಥಿ ಸುಮಲತಾ ಅಂಬರೀಶ್ಗೆ ವಿದ್ಯಾನಗರಿ ಧಾರವಾಡದಲ್ಲಿ ಮಹಿಳಾ ಜೈ ಎಂದಿದ್ದಾರೆ.
ಮಂಡ್ಯ ಪಕ್ಷೇತರ ಅಭ್ಯರ್ಥಿ ಸುಮಲತಾಗೆ ಉ.ಕ. ಮಹಿಳೆಯರಿಂದ ನೈತಿಕ ಬೆಂಬಲ - undefined
ಮಂಡ್ಯ ಜಿಲ್ಲೆಯಾದ್ಯಂತ ಸುಮಲತಾ ಅಂಬರೀಶ್ ಚುನಾವಣಾ ಅಬ್ಬರ ಜೋರಾಗಿದೆ. ಹಾಗೆಯೇ ಧಾರವಾಡದಲ್ಲಿಯೂ ಸುಮಲತಾ ಅವರನ್ನು ಬೆಂಬಲಿಸಿ ಮಹಿಳೆಯರು ಸಭೆ ನಡೆಸಿದ್ದಾರೆ.

ಸುಮಲತಾ ಅಂಬರೀಶ ಬೆಂಬಲಿಸಿ ಸಭೆ
ಹೌದು, ಮಂಡ್ಯ ಪಕ್ಷೇತರ ಅಭ್ಯರ್ಥಿ ಸುಮಲತಾ ಅವರನ್ನು ಬೆಂಬಲಿಸಿ ಉತ್ತರ ಕರ್ನಾಟಕ ಜಿಲ್ಲೆಗಳ ಮಹಿಳೆಯರ ಸಂಘದಿಂದ ಧಾರವಾಡದಲ್ಲಿ ನಾರಿಯರು ಸಭೆ ನಡೆಸಿದ್ದಾರೆ.
ಸುಮಲತಾ ಅಂಬರೀಶ್ ಬೆಂಬಲಿಸಿ ಮಹಿಳೆಯರ ಸಭೆ