ಹುಬ್ಬಳ್ಳಿ: ಆರ್ಥಿಕ ಮುಗ್ಗಟ್ಟಿನಿಂದ ಸಾಲ ಮಾಡಿ ಸರಿಯಾಗಿ ಬಡ್ಡಿ ನೀಡಿದರೂ ಸಹ ಸಾಲ ನೀಡಿದವನ ಕಿರಕುಳದಿಂದ ಬೇಸತ್ತು ಮಹಿಳೆಯೊಬ್ಬಳು ವಿಷ ಸೇವಿಸಿ ಆತ್ಮಹತ್ಯೆಗೆ ಯತ್ನಿಸಿದ ಘಟನೆ ಹುಬ್ಬಳ್ಳಿ ನಗರದಲ್ಲಿ ನಡೆದಿದೆ.
ಶೂಲವಾದ ಸಾಲ: ಕಿರುಕುಳಕ್ಕೆ ಬೇಸತ್ತು ಆತ್ಮಹತ್ಯೆಗೆ ಯತ್ನಿಸಿದ ಮಹಿಳೆ! - ಹುಬ್ಬಳ್ಳಿಯಲ್ಲಿ ಮಹಿಳೆ ಆತ್ಮಹತ್ಯೆಗೆ ಯತ್ನ
ಆರ್ಥಿಕ ಮುಗ್ಗಟ್ಟಿನಿಂದ ಸಾಲ ಮಾಡಿ ಸರಿಯಾಗಿ ಬಡ್ಡಿ ನೀಡಿದರೂ ಸಹ ಸಾಲ ನೀಡಿದವನ ಕಿರಕುಳದಿಂದ ಬೇಸತ್ತು ಮಹಿಳೆಯೊಬ್ಬಳು ವಿಷ ಸೇವಿಸಿ ಆತ್ಮಹತ್ಯೆಗೆ ಯತ್ನಿಸಿದ ಘಟನೆ ಹುಬ್ಬಳ್ಳಿ ನಗರದಲ್ಲಿ ನಡೆದಿದೆ.
ನಗರದ ಆರ್ಜಿಎಸ್ ಕಾಲೋನಿ ನಿವಾಸಿಗಳಾದ ಶೀತಲ್ ಮತ್ತು ಯಲ್ಲಪ್ಪ ದಂಪತಿ ಕೂಲಿ ನಾಲಿ ಮಾಡಿ ಸಂಸಾರದ ನೌಕೆ ಸಾಗಿಸುತ್ತಿದ್ದರು. ಆದರೆ ಹಣದ ಮುಗ್ಗಟ್ಟಿನಿಂದ ಅದೇ ಏರಿಯಾದ ಪ್ರಶಾಂತ ಮೇಲಾ ಎಂಬುವರ ಬಳಿ ಸಾಲ ಮಾಡಿದ್ದರು. ಮೊದಲು 2%ರಷ್ಟು ಬಡ್ಡಿ ನೀಡಬೇಕೆಂದು ಹೇಳಿದ್ದ ಪ್ರಶಾಂತ, ತದನಂತರ 10% ಬಡ್ಡಿ ನೀಡುವಂತೆ ಕಿರುಕುಳ ನೀಡಿದ್ದಾನೆ. ಆದ್ರೂ ಕಷ್ಟ ಪಟ್ಟು ಬಡ್ಡಿ ನೀಡುತ್ತಿದ್ದರು. ಆದ್ರೆ ಕಳೆದ ತಿಂಗಳು ಬಡ್ಡಿ ಹಣ ನೀಡದ ಕಾರಣ ಶೀತಲ್ ಹಾಗೂ ಆಕೆಯ ಪತಿ ಯಲ್ಲಪ್ಪನನ್ನು ಮನೆಯಲ್ಲಿ ಕೂಡಿ ಹಾಕಿ ಕಿರುಕುಳ ನೀಡಿದ್ದ ಎಂದು ಆರೋಪಿಸಲಾಗಿದೆ.
ಪ್ರಶಾಂತ್ ಕಿರುಕುಳದಿಂದ ಬೇಸತ್ತ ಶೀತಲ್ ವಿಷ ಸೇವಿಸಿ ಆತ್ಮಹತ್ಯೆಗೆ ಯತ್ನಿಸಿದ್ದಾರೆ. ಶೀತಲ್ಳನ್ನು ತಕ್ಷಣ ನಗರದ ಖಾಸಗಿ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದೆ. ಎರಡು ದಿನಗಳ ಕಾಲ ಐಸಿಯೂನಲ್ಲಿ ಚಿಕಿತ್ಸೆ ಪಡೆದು ವಾರ್ಡ್ಗೆ ಶಿಫ್ಟ್ ಮಾಡಲಾಗಿದೆ. ಆದ್ರು ವೈದ್ಯರು ಶೀತಲ್ ಕಂಡಿಷನ್ ಇನ್ನೂ ಕ್ರಿಟಿಕಲ್ ಇದೆ ಎಂದಿದ್ದಾರೆ.ಈ ಬಗ್ಗೆ ಕೇಶ್ವಾಪುರ ಪೊಲೀಸರನ್ನು ಕೇಳಿದ್ರೆ, ಪ್ರಕರಣ ಸದ್ಯ ನಮ್ಮ ಗಮನಕ್ಕೆ ಬಂದಿದೆ. ಕೂಡಲೇ ನಾವು ತನಿಖೆ ನಡೆಸುತ್ತೇವೆ ಎಂದಿದ್ದಾರೆ.