ಹುಬ್ಬಳ್ಳಿ: ಹು-ಧಾ ಮಹಾನಗರ ಮಹಿಳಾ ಕಾಂಗ್ರೆಸ್ ಸಮಿತಿ ವತಿಯಿಂದ ಹುಬ್ಬಳ್ಳಿ ಉಣಕಲ್ ಕೆರೆಗೆ ಗಂಗಾ ಪೂಜೆ ಮಾಡುವ ಮೂಲಕ ಬಾಗಿನ ಅರ್ಪಣೆ ಮಾಡಲಾಯಿತು.
ಮಹಿಳಾ ಕಾಂಗ್ರೆಸ್ ವತಿಯಿಂದ ಉಣಕಲ್ ಕೆರೆಗೆ ಬಾಗಿನ ಅರ್ಪಣೆ - Hubli
ಮಹಿಳಾ ಕಾಂಗ್ರೆಸ್ ಸಮಿತಿ ವತಿಯಿಂದ ಹುಬ್ಬಳ್ಳಿ ಉಣಕಲ್ ಕೆರೆಗೆ ಗಂಗಾ ಪೂಜೆ ಮಾಡುವ ಮೂಲಕ ಬಾಗಿನ ಅರ್ಪಣೆ ಮಾಡಲಾಯಿತು.

ಬಳಿಕ ಮಾತನಾಡಿದ ಮಹಿಳಾ ಕಾಂಗ್ರೆಸ್ ಮುಖಂಡೆ ದೀಪಾ ನಾಗರಾಜ ಗೌರಿ, ಜಲ ಅಭಿವೃದ್ಧಿ ಸಂಕೇತ. ಜಲ ಸಂಪದ್ಭರಿತವಾಗಿದ್ದರೆ ಮಾತ್ರ ಅಭಿವೃದ್ಧಿ ಕಾರ್ಯಕ್ಕೆ ಪೂರಕವಾಗಿರುತ್ತದೆ. ಅಲ್ಲದೆ ಗಂಗಾ ಮಾತೆಯು ದೈವತ್ವದ ಪ್ರತೀಕವಾಗಿದೆ. ಈ ಹಿನ್ನೆಲೆಯಲ್ಲಿ ಗಂಗಾ ಪೂಜೆ ಮಾಡುವ ಮೂಲಕ ಬಾಗಿನ ಅರ್ಪಣೆ ಮಾಡಲಾಗಿದೆ ಎಂದರು.