ಹುಬ್ಬಳ್ಳಿ: ಹೆಂಡತಿಯ ಶೀಲ ಶಂಕಿಸಿ ಕೊಲೆಗೈದ ಘಟನೆ ತಾಲೂಕಿನ ಕುಸುಗಲ್ ಗ್ರಾಮದಲ್ಲಿ ನಡೆದಿದೆ. ಕುಸುಗಲ್ ಗ್ರಾಮದ ಕಿಲ್ಲಾ ಓಣಿಯ ನಿವಾಸಿ ಮೆಹರುನ್ನಿಸಾ ಕೊಲೆಯಾಗಿದ್ದು, ಪತಿ ಸೈಫ್ ಅಲಿಯನ್ನು ಪೊಲೀಸರು ಬಂಧಿಸಿದ್ದಾರೆ.
ಹುಬ್ಬಳ್ಳಿ: ಶೀಲ ಶಂಕಿಸಿ ಪತ್ನಿ ಹತ್ಯೆಗೈದ ಪತಿ ಅರೆಸ್ಟ್ - Hubballi woman killed by her husband
ಹುಬ್ಬಳ್ಳಿ ತಾಲೂಕಿನ ಕುಸುಗಲ್ ಗ್ರಾಮದಲ್ಲಿ ಹೆಂಡತಿಯ ಶೀಲ ಶಂಕಿಸಿ ಕೊಲೆಗೈದ ಆರೋಪಿಯನ್ನು ಗ್ರಾಮೀಣ ಠಾಣೆಯ ಪೊಲೀಸರು ಬಂಧಿಸಿದ್ದಾರೆ.
![ಹುಬ್ಬಳ್ಳಿ: ಶೀಲ ಶಂಕಿಸಿ ಪತ್ನಿ ಹತ್ಯೆಗೈದ ಪತಿ ಅರೆಸ್ಟ್ SAIF ALI](https://etvbharatimages.akamaized.net/etvbharat/prod-images/768-512-12425351-thumbnail-3x2-sanju.jpg)
ಸೈಫ್ ಅಲಿ
ಗದಗ ಮೂಲದವರಾದ ಇವರು, ದುಡಿಮೆಗಾಗಿ ಕುಸುಗಲ್ ಗ್ರಾಮದಲ್ಲಿ ಬಾಡಿಗೆ ಮನೆಯಲ್ಲಿ ನೆಲೆಸಿದ್ದರು. ಇಂದು ಸೈಫ್ ಅಲಿ ಏಕಾಏಕಿ ಹೆಂಡತಿಯನ್ನು ಕೊಲೆಗೈದಿದ್ದಾನೆ. ಈ ವಿಷಯ ತಿಳಿದ ಹುಬ್ಬಳ್ಳಿಯ ಗ್ರಾಮೀಣ ಠಾಣೆಯ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಆರೋಪಿಯನ್ನು ವಶಕ್ಕೆ ಪಡೆದುಕೊಂಡು ವಿಚಾರಣೆ ನಡೆಸುತ್ತಿದ್ದಾರೆ. ಈ ಕುರಿತು ಪ್ರಕರಣ ದಾಖಲಾಗಿದೆ.
ಇದನ್ನೂ ಓದಿ:ಕಾಡ್ತಿದೆ ನೆಟ್ವರ್ಕ್ ಸಮಸ್ಯೆ.. ಎತ್ತರದ ಪ್ರದೇಶದಲ್ಲಿ ಶೆಡ್ ನಿರ್ಮಿಸಿಕೊಂಡ ವಿದ್ಯಾರ್ಥಿಗಳು