ಕರ್ನಾಟಕ

karnataka

ETV Bharat / state

ಯಾವುದೇ ಕಾರಣಕ್ಕೂ ಕಾಂಗ್ರೆಸ್ ಬಿಟ್ಟು ಬಿಜೆಪಿಗೆ ಹೋಗುವ ಪ್ರಶ್ನೆಯೇ ಇಲ್ಲ: ಜಗದೀಶ್ ಶೆಟ್ಟರ್ - former DCM KS EShwarappa

ಕಾಂಗ್ರೆಸ್​ ಬಿಟ್ಟು ಬಿಜೆಪಿಗೆ ಹೋಗುವ ಪ್ರಶ್ನೆಯೇ ಇಲ್ಲ ಮಾಜಿ ಮುಖ್ಯಮಂತ್ರಿ ಜಗದೀಶ್ ಶೆಟ್ಟರ್ ಅವರು ಪುನರುಚ್ಛರಿಸಿದ್ದಾರೆ.

will-not-leave-congress-and-join-bjp-jagdish-shettar
ಯಾವುದೇ ಕಾರಣಕ್ಕೂ ಕಾಂಗ್ರೆಸ್ ಬಿಟ್ಟು ಬಿಜೆಪಿಗೆ ಹೋಗುವ ಪ್ರಶ್ನೆಯೇ ಇಲ್ಲ: ಜಗದೀಶ್ ಶೆಟ್ಟರ್

By ETV Bharat Karnataka Team

Published : Dec 14, 2023, 4:36 PM IST

ಯಾವುದೇ ಕಾರಣಕ್ಕೂ ಕಾಂಗ್ರೆಸ್ ಬಿಟ್ಟು ಬಿಜೆಪಿಗೆ ಹೋಗುವ ಪ್ರಶ್ನೆಯೇ ಇಲ್ಲ: ಜಗದೀಶ್ ಶೆಟ್ಟರ್

ಹುಬ್ಬಳ್ಳಿ: ನಾನು ಯಾವುದೇ ಕಾರಣಕ್ಕೂ ಕಾಂಗ್ರೆಸ್ ಬಿಟ್ಟು ಬಿಜೆಪಿಗೆ ಹೋಗುವುದಿಲ್ಲ. ನನಗೆ ಈಶ್ವರಪ್ಪ ಅವರನ್ನು ಭೇಟಿ ಆಗುವ ಅವಶ್ಯಕತೆ ಇಲ್ಲ. ಇದುವರೆಗೂ ನಾನು ಅವರನ್ನು ಭೇಟಿ ಮಾಡಿಲ್ಲ. ಹೀಗೆ ಮಾತನಾಡಿ ಪಕ್ಷ ಬಿಟ್ಟು ಹೋಗುವವರನ್ನು ಕೆ ಎಸ್ ಈಶ್ವರಪ್ಪ ಅವರು ಗೊಂದಲಕ್ಕೆ ಸಿಲುಕಿಸುತ್ತಿದ್ದಾರೆ ಎಂದು ಮಾಜಿ ಮುಖ್ಯಮಂತ್ರಿ ಜಗದೀಶ್ ಶೆಟ್ಟರ್ ಹೇಳಿದರು.

ನಗರದಲ್ಲಿಂದು ಮಾಧ್ಯಮಗಳಿಗೆ ಪ್ರತಿಕ್ರಿಯಿಸಿದ ಅವರು, ಕೆ ಎಸ್ ಈಶ್ವರಪ್ಪ ಒಂದು ಸಣ್ಣ ಎಂಎಲ್ಎ ಟಿಕೆಟ್ ಅಂತಾರೆ. ಹೌದು ಆ ಟಿಕೆಟ್ ಕೊಡಿಸೋಕ್ಕೂ ಅವರಿಗೆ ಆಗಲಿಲ್ಲ. ಅವರಿಗೂ ಟಿಕೆಟ್ ಸಿಗಲಿಲ್ಲ ಎಂದು ಹೇಳಿದರು. ನಾನು ಬಿಜೆಪಿಯಲ್ಲಿ ಆದ ಅಪಮಾನದಿಂದ ಹೊರಗಡೆ ಬಂದಿದ್ದೇನೆ. ನನ್ನ ಸ್ವಾಭಿಮಾನಕ್ಕೆ ಧಕ್ಕೆ ಆಗಿದ್ದಕ್ಕೆ ಹೊರಗಡೆ ಬಂದಿದ್ದೇನೆ. ಈಶ್ವರಪ್ಪ ಅವರ ಸ್ವಾಭಿಮಾನಕ್ಕೆ ಧಕ್ಕೆ ಆಗಿದ್ರೆ ಗೊತ್ತಾಗುತ್ತಿತ್ತು. ಇದೀಗ ಬಿಜೆಪಿ ಅಡ್ವಾಣಿ, ವಾಜಪೇಯಿ ಅವರ ಕಾಲದ ಪಕ್ಷವಾಗಿ ಉಳಿದಿಲ್ಲ. ಸಿದ್ದಾಂತ ಮಾತಾಡೋದನ್ನು ಈಶ್ವರಪ್ಪ ಬಿಡಬೇಕು ಎಂದು ಟೀಕಿಸಿದರು.

ಕರ್ನಾಟಕ ಬಿಜೆಪಿ ಉದ್ದಾರ ಆಗೋಕ್ಕೆ ಸಾಧ್ಯವಿಲ್ಲ. ದಿನಕ್ಕೆ ಒಬ್ರೂ ಮಾತನಾಡುತ್ತಿದ್ದಾರೆ. ಬಿಜೆಪಿ ರಿಪೇರಿ ಆಗೋಕ್ಕೆ ಆಗೋದಿಲ್ಲ. ಬಿಜೆಪಿ ಸೋಲಿಸೋಕ್ಕೆ ಹಣ ಕೊಟ್ಟಿದ್ದಾರೆ. ಬ್ಲಾಕ್ ಮೇಲ್ ಮಾಡಿದ್ದಾರೆ ಅಂತಾರೆ. ಇದಕ್ಕೆ ಯಾಕೆ ಬಿ.ಎಸ್.ಯಡಿಯೂರಪ್ಪ, ಬಸವರಾಜ ಬೊಮ್ಮಾಯಿ ಮಾತನಾಡುತ್ತಿಲ್ಲ. ವೈಯಕ್ತಿಕ ಹಿತಾಸಕ್ತಿ ಕಾರಣಕ್ಕೆ ನನಗೆ ಟಿಕೆಟ್ ಕೈತಪ್ಪಿಸಿದ್ದಾರೆ ಎಂದು ಆರೋಪಿಸಿದರು. ನಾನು ಯಾವುದೇ ಕಾರಣಕ್ಕೂ ಕಾಂಗ್ರೆಸ್ ಬಿಟ್ಟು ಬಿಜೆಪಿಗೆ ಹೋಗೋ ಪ್ರಶ್ನೆಯೇ ಇಲ್ಲ ಎಂದು ಈಶ್ವರಪ್ಪ ಹೇಳಿಕೆಗೆ ತಿರುಗೇಟು ನೀಡಿದರು.

ಸಂಸತ್ ಭವನದಲ್ಲಿ ಭದ್ರತಾ ಲೋಪದ ಬಗ್ಗೆ ಮಾತನಾಡಿ, ಈ ಘಟನೆ ಖಂಡನೀಯ. ಈ ರೀತಿಯ ಘಟನೆ ನಡೆಯಬಾರದು, ಈ ಹಿಂದಿನ ಕಹಿ ನೆನಪು ಇನ್ನೂ ನೆನಪಿದೆ. ಅದರ ಬೆನ್ನಲ್ಲೇ ಕೆಲ ಯುವಕರು ಸಂಸತ್​ ಒಳಗೆ ಹೋಗಿದ್ದಾರೆ. ಯಾರಿಗೆ ಜೀವ ಹಾನಿ ಮಾಡುತ್ತಿದ್ರೋ ಗೊತ್ತಿಲ್ಲ. ಇದೊಂದು ಭದ್ರತಾ ವೈಫಲ್ಯ. ಇದಕ್ಕೆ ಮೂಲ ಕಾರಣ ಯಾರು ಎಂಬುದರ ಬಗ್ಗೆ ಸಂಪೂರ್ಣ ತನಿಖೆಯಾಗಬೇಕು. ಮೂಲ ಬೇರು ತೆಗೆದು ಹಾಕುವ ಕೆಲಸ ಆಗಬೇಕು. ಇದು ಕೇಂದ್ರ ಸರ್ಕಾರಕ್ಕೆ ಕೆಟ್ಟ ಹೆಸರು ಎಂದರು. ಸಂಸತ್ ಎನ್ನುವುದು ದೇಶದ ಹೃದಯ ಭಾಗ, ಅದರಲ್ಲಿ ಒಳನುಗ್ಗುವ ಕೆಲಸ ಯಾರು ಮಾಡಿದ್ದಾರೆ. ಅವರಿಗೆ ಕಠಿಣ ಶಿಕ್ಷೆ ಆಗಬೇಕು. ಇಂತಹ ಘಟನೆ ಪದೇ ಪದೇ ನಡೆಯುತ್ತಿದೆ. ಸರಿಯಾಗಿ ತಿಳಿದುಕೊಂಡು ಪಾಸ್ ವಿತರಣೆ ಮಾಡಬೇಕು ಎಂದರು.

ಇದನ್ನೂ ಓದಿ :ನಾನು ಸಿಎಲ್‌ಪಿ ಸಭೆಗೆ ಹೋಗಿಲ್ಲ, ನಾನು ಡಿಸಿಎಂ ಕರೆದ ಭೋಜನಕೂಟಕ್ಕೆ ಹೋಗಿದ್ದೆ: ಎಸ್ ಟಿ ಸೋಮಶೇಖರ್

ABOUT THE AUTHOR

...view details