ಕರ್ನಾಟಕ

karnataka

ETV Bharat / state

ಯಾಕೆ ಹೀಗಾಯ್ತು? ಯಾರು ಪೋಸ್ಟ್ ಮಾಡಿಸಿದ್ದರು? ಅನ್ನೋದನ್ನೂ ನೋಡಬೇಕು: ಡಿಕೆಶಿ - ನವನಗರದ ಕಮಿಷನರ್ ಕಚೇರಿಗೆ ಭೇಟಿ ನೀಡಿದ ಡಿ.ಕೆ. ಶಿವಕುಮಾರ

ಪೊಲೀಸರು ಪರಿಸ್ಥಿತಿಯನ್ನು ಬಹಳ ಚೆನ್ನಾಗಿ ಕಂಟ್ರೋಲ್‌ ಮಾಡಿದ್ದಾರೆ. ಏಕೆ ಹೀಗಾಯ್ತು? ಯಾರು ಮಾಡಿದ್ದು? ಈ ಬಗ್ಗೆ ಚರ್ಚೆ ಮಾಡೋಣವೆಂದು ಬಂದಿರುವೆ ಎಂದು ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ ಹೇಳಿದ್ದಾರೆ.

KPCC president D K Shivakumar speak at Dharwad
ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ

By

Published : Apr 19, 2022, 9:31 PM IST

ಧಾರವಾಡ: ಪೊಲೀಸ್ ಕಮಿಷನರ್ ಮತ್ತು ಅಧಿಕಾರಿಗಳನ್ನು ಅಭಿನಂದಿಸಲು ಬಂದಿದ್ದೇನೆ. ಅವರು ಪರಿಸ್ಥಿತಿಯನ್ನು ಬಹಳ ಚೆನ್ನಾಗಿ ಕಂಟ್ರೋಲ್‌ ಮಾಡಿದ್ದಾರೆ. ಏಕೆ ಹೀಗಾಯ್ತು? ಯಾರು ಮಾಡಿದ್ದು? ಈ ಬಗ್ಗೆ ಚರ್ಚೆ ಮಾಡೋಣ ಎಂದು ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ ಹೇಳಿದ್ದಾರೆ.

ನವನಗರದ ಕಮಿಷನರ್ ಕಚೇರಿಗೆ ಭೇಟಿ ನೀಡಿ ಬಳಿಕ ಮಾಧ್ಯಮದವರೊಂದಿಗೆ ಅವರು ಮಾತನಾಡಿದರು. ಇಲ್ಲಿ ಚರ್ಚ್‌ನಲ್ಲಿ ರಾಮ ಭಜನೆ ಮಾಡಿದ್ರು, ಕಲ್ಲಂಗಡಿ ಗಲಾಟೆ ಆಗಿತ್ತು, ಈಗ ಈ ಗಲಾಟೆ ಆಗಿದೆ. ಎಲ್ಲವನ್ನೂ ಇಲ್ಲಿನ ಪೊಲೀಸರು ಚೆನ್ನಾಗಿ ನಿಭಾಯಿಸಿದ್ದಾರೆ ಎಂದರು.

ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ

ನಾವು ಯಾರ ರಕ್ಷಣೆಗೂ ನಿಂತಿಲ್ಲ. ಹು-ಧಾ ಘನತೆಗೆ ಧಕ್ಕೆ ಬರಬಾರದು. ಇಲ್ಲಿ ಉದ್ಯೋಗಕ್ಕೆಂದು ಹೊರಗಿನವರು ಬರುತ್ತಾರೆ. ಕೈಗಾರಿಕೆಗಳು ಸಾಕಷ್ಟಿವೆ, ಇದು ಕರ್ನಾಟಕ ರಾಜ್ಯದ ಹೃದಯ ಇದ್ದಂತೆ. ಈ ಭಾಗವನ್ನು ಕಾಪಾಡಬೇಕಿದೆ. ನಾವು ನಮ್ಮ ಐಕ್ಯತೆ ಕಾಪಾಡಬೇಕು. ಅದಕ್ಕೆ ಏನಲ್ಲ ಸಹಕಾರ ಕೊಡಬೇಕೋ ಕೊಡುತ್ತೇವೆ ಎಂದರು.

ಇದನ್ನೂ ಓದಿ:ಹುಬ್ಬಳ್ಳಿ ಗಲಭೆ : ಕಲಬುರಗಿ ಸೆಂಟ್ರಲ್​ ಜೈಲಿಗೆ 103 ಬಂಧಿತ ಆರೋಪಿಗಳ​ ಸ್ಥಳಾಂತರ

ಯಡಿಯೂರಪ್ಪ, ಕಾಂಗ್ರೆಸ್ ಕೈವಾಡ ಇದೆ ಎಂದು ನೀಡಿದ ಹೇಳಿಕೆ ವಿಚಾರವಾಗಿ ‌ಮಾತನಾಡಿದ ಅವರು, ಯಡಿಯೂರಪ್ಪ ರಾಜಕೀಯ ಮಾತನಾಡುತ್ತಾರೆ. ಅಲ್ತಾಫ್ ಹಳ್ಳೂರ ಗಲಾಟೆ ಮಾಡಿಸಿಲ್ಲ. ಪೊಲೀಸರ ಕೋರಿಕೆ ಮೇರೆಗೆ ಅವರು ಕಾರು ಏರಿದ್ದರು ಎಂದು ತಿಳಿಸಿದರು.

For All Latest Updates

ABOUT THE AUTHOR

...view details