ಕರ್ನಾಟಕ

karnataka

ETV Bharat / state

ಅರೆರೇ ಕಪ್ಪು ಕಾಗೆ ಮಧ್ಯೆ ಬಿಳಿ ಕಾಗೆ ಪ್ರತ್ಯಕ್ಷ: ವಿಡಿಯೋ - ಕಲಘಟಗಿಯ ದುಮ್ಮವಾಡದ ನೀರಸಾಗರ ಕೆರೆ

ಹುಬ್ಬಳ್ಳಿಯ ಕಲಘಟಗಿಯ ದುಮ್ಮವಾಡದ ನೀರಸಾಗರ ಕೆರೆಯ ಬಳಿ ಬಿಳಿ ಕಾಗೆಯೊಂದು ಕಾಣಿಸಿದೆ. ಇದರಿಂದ ಜನರಲ್ಲಿ ಕೌತುಕ ಮನೆ ಮಾಡಿದೆ.

ಹುಬ್ಬಳ್ಳಿಯಲ್ಲಿ ಬಿಳಿ ಕಾಗೆ ಪ್ರತ್ಯಕ್ಷ

By

Published : Sep 18, 2019, 10:54 AM IST

ಹುಬ್ಬಳ್ಳಿ: ಕಾಗೆ ಅಂದ್ರೆ ಕಪ್ಪು ಎಂಬ ನಂಬಿಕೆ ಇದೆ. ಆದ್ರೆ ಕಲಘಟಗಿಯ ದುಮ್ಮವಾಡದ ನೀರಸಾಗರ ಕೆರೆಯ ಬಳಿ ಕಪ್ಪು ಕಾಗೆಗಳ‌ ಮಧ್ಯೆ ಬಿಳಿ ಕಾಗೆ ಪ್ರತ್ಯಕ್ಷವಾಗುವ ಮೂಲಕ ಅಚ್ಚರಿಯನ್ನುಂಟು ಮಾಡಿದೆ.

ಇಷ್ಟು ದಿನ ಕರಿ‌ ಕಾಗೆಗಳನ್ನು ನೋಡಿದ ಜನರಲ್ಲಿ ಬಳಿ ಕಾಗಿ ನೋಡಿ ಕೌತುಕ ಮನೆ ಮಾಡಿದೆ. ಇದು ಪಾರಿವಾಳ ಇರಬೇಕು ಎಂದು ತಮ್ಮ ತಮ್ಮಲ್ಲಿಯೇ ಮಾತನಾಡಿಕೊಂಡರೆ, ಇನ್ನು ಕೆಲವರು ಕೇಡುಗಾಲಕ್ಕೆ ಕಾಗೆ ಬಿಳಿ ಬಣ್ಣಕ್ಕೆ ತಿರುಗಿಕೊಂಡಿದೆ ಎಂದು ಕೌತುಕದಿಂದ ಕಾಗೆ ವೀಕ್ಷಿಸಿದರು.

ಹುಬ್ಬಳ್ಳಿಯಲ್ಲಿ ಬಿಳಿ ಕಾಗೆ ಪ್ರತ್ಯಕ್ಷ

ಇನ್ನು ಕೆಲವರು ಅಪರೂಪ ಬಣ್ಣದ ಕಾಗೆಯನ್ನು ತಮ್ಮ ಕ್ಯಾಮೆರಾದಲ್ಲಿ ಸೆರೆ ಹಿಡಿದಿದ್ದಾರೆ. ಕೆಲವೊಮ್ಮೆ ಜೀನ್​​​​ಗಳ ಬದಲಾವಣೆಯಿಂದ ಈ ರೀತಿಯಾಗಿ ಹುಟ್ಟುತ್ತವೆ ಎಂಬುದು ಪಕ್ಷಿ ತಜ್ಞರ ಅಭಿಪ್ರಾಯ. ಈ ಕಾಗೆಯ ರೆಕ್ಕೆಗಳು ಮಾತ್ರ ಬಿಳಿ ಇದ್ದು, ಕೊಕ್ಕು ಹಾಗೂ ಕಾಲು ಕಾಗೆಯಂತೆ ಇದೆ.

ABOUT THE AUTHOR

...view details