ಹುಬ್ಬಳ್ಳಿ:ವೀರಶೈವ ಸ್ವಾಮೀಜಿಗಳಾದ ರಂಭಾಪುರಿ ಶ್ರೀಗಳನ್ನು ವಿನಯ್ ಕುಲಕರ್ಣಿ ಭೇಟಿ ಮಾಡಿದ್ರಲ್ಲಿ ತಪ್ಪೇನು? ನಮಗೆ ಎಲ್ಲ ಸ್ವಾಮೀಜಿಗಳು ಒಂದೇ ಎಂದು ಮಾಜಿ ಸಭಾಪತಿ ಬಸವರಾಜ ಹೊರಟ್ಟಿ ಹುಬ್ಬಳ್ಳಿಯಲ್ಲಿ ಅಭಿಪ್ರಾಯಪಟ್ಟರು.
ರಂಭಾಪುರಿ ಶ್ರೀಯವರನ್ನು ವಿನಯ್ ಕುಲಕರ್ಣಿ ಭೇಟಿ ಮಾಡಿದ್ರಲ್ಲಿ ತಪ್ಪೇನು ? ಹೊರಟ್ಟಿ ಪ್ರಶ್ನೆ - undefined
ನಮಗೆ ಎಲ್ಲಾ ಸ್ವಾಮೀಜಿಗಳು ಒಂದೇ ಎಂದರು ಮಾಜಿ ಸಭಾಪತಿ ಬಸವರಾಜ ಹೊರಟ್ಟಿ
ಮಾಜಿ ಸಭಾಪತಿ ಬಸವರಾಜ ಹೊರಟ್ಟಿ
ನಗರದ ಜೆಡಿಎಸ್ ಕಚೇರಿಯಲ್ಲಿ ನಡೆದ ಮೈತ್ರಿ ಕಾರ್ಯಕರ್ತರ ಸಭೆಯಲ್ಲಿ ಮಾತನಾಡಿದ ಹೊರಟ್ಟಿ, ವಿನಯ್ಕುಲಕರ್ಣಿ ಎಲ್ಲಾ ಸ್ವಾಮೀಜಿಯವರನ್ನೂ ಭೇಟಿ ಮಾಡುತ್ತಾರೆ, ಅದರಲ್ಲಿ ಹೊಸತೇನಿದೆ? ಎಂದು ಪ್ರಶ್ನಿಸಿದರು.
ಪ್ರತ್ಯೇಕ ವೀರಶೈವ - ಲಿಂಗಾಯತ ಹೋರಾಟವೆಲ್ಲಾ ಹಳೆಯ ವಿಚಾರ. ಅದೆಲ್ಲಾ ಮುಗಿದು ಹೋದ ಅಧ್ಯಾಯ. ಈಗ ಚುನಾವಣೆಯಲ್ಲಿ ನಮ್ಮ ಮೈತ್ರಿ ಅಭ್ಯರ್ಥಿ ವಿನಯ್ಕುಲಕರ್ಣಿ ಗೆಲುವಿಗಾಗಿ ಶ್ರಮಿಸುತ್ತೇವೆ ಎಂದರು.