ಕರ್ನಾಟಕ

karnataka

ETV Bharat / state

ಪಶ್ಚಿಮ ಪದವೀದರ ಕ್ಷೇತ್ರ ಚುನಾವಣೆ ಹಿನ್ನೆಲೆ: ಕೊನೆ ಅವಧಿಯಲ್ಲಿ‌ ಸೋಂಕಿತರಿಗೆ ಮತದಾನಕ್ಕೆ ಅವಕಾಶ

ಮತದಾನ ಅವಧಿಯ ಕೊನೆಯ ಒಂದು ಗಂಟೆ ಕೊವೀಡ್ ಇದ್ದವರಿಗೆ ಅವಕಾಶ ನೀಡಲಾಗಿದೆ. ಅಂಬ್ಯುಲೆನ್ಸ್‌ನಲ್ಲಿ ಪಾಸಿಟಿವ್ ಇದ್ದವರನ್ನು ಕರೆದುಕೊಂಡು ಬರುತ್ತೇವೆ ಎಂದು ಸ್ಪಷ್ಟಪಡಿಸಿದರು.

Regional Commissioner Amlan Aditya Biswas
ಪ್ರಾದೇಶಿಕ ಆಯುಕ್ತ ಆಮ್ಲನ್ ಆದಿತ್ಯ ಬಿಸ್ವಾಸ್

By

Published : Oct 27, 2020, 5:40 PM IST

ಧಾರವಾಡ:ಪಶ್ಚಿಮ ಪದವೀಧರ ಕ್ಷೇತ್ರದ ಚುನಾವಣೆಗೆ ಧಾರವಾಡದಲ್ಲಿ ಎಲ್ಲಾ ರೀತಿಯ ಸಿದ್ದತೆ ಮಾಡಿಕೊಳ್ಳಲಾಗಿದೆ ಎಂದು ಪ್ರಾದೇಶಿಕ ಆಯುಕ್ತ ಆಮ್ಲನ್ ಆದಿತ್ಯ ಬಿಸ್ವಾಸ್ ಹೇಳಿದರು.

ಧಾರವಾಡದ ಜಿಲ್ಲಾಧಿಕಾರಿ ಕಚೇರಿ ನೂತನ ಸಭಾಂಗಣದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ನಾಲ್ಕು ಜಿಲ್ಲೆಗಳಲ್ಲಿ ಒಟ್ಟು 74,268 ಮತದಾರರಿದ್ದಾರೆ. ಪುರುಷ ಮತದಾರರು 47,584 ಹಾಗೂ 26,673 ಮಹಿಳಾ ಮತದಾರರಿದ್ದು, 11 ಜನರು ಇತರೆ ಮತದಾರರಿದ್ದಾರೆ. ಪ್ರತಿ ಜಿಲ್ಲೆಯಲ್ಲಿ ಚುನಾವಣೆ ಸಿದ್ದತೆ ಮಾಡಿಕ್ಕೊಳ್ಳಲಾಗಿದೆ ಎಂದು ತಿಳಿಸಿದರು.

ಪಶ್ಚಿಮ ಪದವೀದರ ಕ್ಷೇತ್ರ ಚುನಾವಣೆ ಹಿನ್ನೆಲೆ: ಕೊನೆ ಅವಧಿಯಲ್ಲಿ‌ ಸೋಂಕಿತರಿಗೆ ಮತದಾನಕ್ಕೆ ಅವಕಾಶ

362 ಮೈಕ್ರೋ ಆಬ್ಸರ್ವರ್​, 41 ಜನ ಸೆಕ್ಟರ್ ಆಫೀಸರ್ಸ್​ಯಿದ್ದು, ಕೊವೀಡ್ 19ಕ್ಕೆ ಸಂಭಂದಪಟ್ಟಂತೆ 42 ಜನ ವೈದ್ಯರ ನೇಮಕ ಮಾಡಲಾಗಿದೆ. 71 ಕಡೆ ವಿಡಿಯೋಗ್ರಫಿ 80 ಆಶಾ ವರ್ಕರ್​ಗಳ ನೇಮಕ ಮಾಡಲಾಗಿದೆ.‌ ಪ್ರತಿ ಕೇಂದ್ರದಲ್ಲಿ ಹೆಲ್ಪ‌ ಡೆಸ್ಕ್ ಗೆ 249 ಜನರನ್ನ ಆಯೋಜನೆ ಮಾಡಿಕೊಳ್ಳಲಾಗಿದೆ. ನಾಲ್ಕು ಜಿಲ್ಲೆಗಳಲ್ಲಿ ಪೋಲಿಸ್ ಭದ್ರತೆಯನ್ನು ಮಾಡಲಾಗಿದೆ. ಧಾರವಾಡ, ಹಾವೇರಿ, ಗದಗ, ಉತ್ತರ ಕನ್ನಡ ಜಿಲ್ಲೆಯಲ್ಲಿ ತಾಲೂಕು ಕಚೇರಿಗಳಲ್ಲಿ ಮತದಾನ ನಡೆಯಲಿದೆ.

ಕೊರೊನಾ ಮಧ್ಯೆಯೇ ಮತದಾನ ಹಿನ್ನೆಲೆ ಪ್ರತಿ ಸೆಕ್ಟರ್‌ಗೆ ಓರ್ವ ವೈದ್ಯರ ನೇಮಕ ಮಾಡಲಾಗಿದ್ದು, 42 ಸೆಕ್ಟರ್‌ಗಳಿಗೆ 42 ವೈದ್ಯರ ನಿಯೋಜನೆ‌ಗೊಳಿಸಲಾಗಿದೆ. ಪ್ರತಿ ಮತಗಟ್ಟೆಯಲ್ಲಿ ಒಂದೊಂದು ಐಸುಲೇಷನ್ ಚೇಂಬರ್ ಇದ್ದು, ಮತದಾನಕ್ಕೆ ಬಂದವರಿಗೆ ಜ್ವರ ಇದ್ದರೇ ಎರಡು ಸಲ ಸ್ಕ್ಯಾನ್ ಮಾಡುತ್ತೇವೆ. ವೈದ್ಯರಿಂದ ತಪಾಸಣೆ ಬಳಿಕ ಆಸ್ಪತ್ರೆ ಇಲ್ಲವೋ ಮತದಾನಕ್ಕೋ ಅಂತಾ ನಿರ್ಣಯ ಮಾಡುತ್ತೇವೆ. ಮತದಾನ ಅವಧಿಯ ಕೊನೆಯ ಒಂದು ಗಂಟೆ ಕೊವೀಡ್ ಇದ್ದವರಿಗೆ ಅವಕಾಶ ನೀಡಲಾಗಿದೆ. ಅಂಬ್ಯುಲೆನ್ಸ್‌ನಲ್ಲಿ ಪಾಸಿಟಿವ್ ಇದ್ದವರನ್ನು ಕರೆದುಕೊಂಡು ಬರುತ್ತೇವೆ ಎಂದು ಸ್ಪಷ್ಟಪಡಿಸಿದರು.

ಕೊರೊನಾ ಪಾಸಿಟಿವ್ ಇರುವವರೂ ಮತದಾನಕ್ಕೆ ನೋಂದಣಿ ಮಾಡಿಕೊಂಡಿದ್ದಾರೆ. ಹಾವೇರಿ ಜಿಲ್ಲೆಯಲ್ಲಿ ನಾಲ್ವರು, ಧಾರವಾಡದಲ್ಲಿ ಮೂವರು ಪಾಸಿಟಿವ್ ವ್ಯಕ್ತಿಗಳ ನೋಂದಣಿ ಆಗಿದೆ. ಅವರು ಒಪ್ಪಿದರೆ ಅಂಬ್ಯುಲೆನ್ಸ್‌ನಲ್ಲಿ ಮತಗಟ್ಟೆಗೆ ಕರೆದುಕೊಂಡು ಬರುತ್ತೇವೆ ಎಂದರು.

ABOUT THE AUTHOR

...view details