ಹುಬ್ಬಳ್ಳಿ : ಉಪಚುನಾವಣೆಯಲ್ಲಿ ಎಲ್ಲಾ ಕ್ಷೇತ್ರಗಳನ್ನು ಗೆಲ್ಲುತ್ತೇವೆಂದು ಕೇಂದ್ರ ಸಚಿವ ಪ್ರಲ್ಹಾದ ಜೋಶಿ ವಿಶ್ವಾಸ ವ್ಯಕ್ತಪಡಿಸಿದ್ದಾರೆ.
ಅನರ್ಹ ಶಾಸಕರಿಗೆ 23ರಂದು ನ್ಯಾಯ ಸಿಗಲಿದೆ: ಪ್ರಲ್ಹಾದ್ ಜೋಶಿ ವಿಶ್ವಾಸ - ಇತ್ತೀಚಿನ ಹುಬ್ಬಳ್ಳಿಯ ಸುದ್ದಿ
ಉಪಚುನಾವಣೆಗೆ ಬೇಕಾದ ಎಲ್ಲಾ ಸಿದ್ಧತೆಗಳನ್ನು ಮಾಡಿಕೊಳ್ಳುತ್ತಿದ್ದು ಎಲ್ಲಾ ಕ್ಷೇತ್ರಗಳನ್ನು ಗೆಲ್ಲುತ್ತೇವೆಂದು ಕೇಂದ್ರ ಸಚಿವ ಪ್ರಲ್ಹಾದ ಜೋಶಿ ವಿಶ್ವಾಸ ವ್ಯಕ್ತಪಡಿಸಿದ್ದಾರೆ.
ಕೇಂದ್ರ ಸಚಿವ ಪ್ರಲ್ಹಾದ ಜೋಶಿ
ನಗರದಲ್ಲಿಂದು ಮಾದ್ಯಮದವರ ಜೊತೆ ಮಾತನಾಡಿದ ಪ್ರಲ್ಹಾದ ಜೋಶಿ ಉಪಚುನಾವಣೆಗೆ ಬೇಕಾದ ಎಲ್ಲಾ ಪೂರ್ವ ಸಿದ್ಧತೆಗಳನ್ನು ಮಾಡಿಕೊಳ್ಳುತ್ತೇವೆ. 15 ಕ್ಷೇತ್ರಗಳನ್ನು ಗೆಲ್ಲಲು ಸಂಪೂರ್ಣ ಶಕ್ತಿ ಹಾಕುತ್ತೇವೆ. ಜೊತೆಗೆ ಅನರ್ಹ ಶಾಸಕರಿಗೆ ಇದೇ 23ರಂದು ನ್ಯಾಯ ಸಿಗುವ ಭರವಸೆಯಿದೆಯೆಂದರು.
ನೆರೆ ಪರಿಹಾರವನ್ನು ಕೇಂದ್ರ ಸರ್ಕಾರ ಇನ್ನೂ ಘೋಷಣೆ ಮಾಡಿಲ್ಲ, ಆದರೆ ಉಪಚುನಾವಣೆ ಘೋಷಣೆಯಿಂದ ಯಾವುದೇ ತೊಂದರೆಯಾಗುವುದಿಲ್ಲ. ನೆರೆ ಪರಿಹಾರ ಆದಷ್ಟು ಬೇಗ ಬರುತ್ತದೆಯೆಂದು ಸ್ಪಷ್ಟಪಡಿಸಿದರು.