ಕರ್ನಾಟಕ

karnataka

ETV Bharat / state

ಸಚಿವ ಶಿವಳ್ಳಿಯವರನ್ನು ಕಳೆದುಕೊಂಡು ನಮಗೆಲ್ಲ ತುಂಬಾ ನೋವಾಗಿದೆ: ಪರಮೇಶ್ವರ್​​​​​​​​​​​​​ - ಯಡಿಯೂರಪ್ಪ ಡೈರಿ

ಸಚಿವ ಶಿವಳ್ಳಿಯವರ ಅಗಲಿಕೆಗೆ ಉಪ ಮುಖ್ಯಮಂತ್ರಿ ಡಾ. ಜಿ. ಪರಮೇಶ್ವರ್​​​​​ ಕಂಬನಿ ಮಿಡದಿದ್ದಾರೆ.

ಸಚಿವ ಶಿವಳ್ಳಿಯವರ ಅಗಲಿಕೆಗೆ ಉಪ ಮುಖ್ಯಮಂತ್ರಿ ಡಾ. ಜಿ. ಪರಮೇಶ್ವರ್​​​​​ ಕಂಬನಿ ಮಿಡದಿದ್ದಾರೆ.

By

Published : Mar 23, 2019, 2:56 PM IST

ಹುಬ್ಬಳ್ಳಿ: ಸಚಿವ ಶಿವಳ್ಳಿ ನಮ್ಮೆಲ್ಲರಿಗೂ ಆತ್ಮೀಯ ಸ್ನೇಹಿತರಾಗಿದ್ರು. ಅವರನ್ನ ಕಳೆದುಕೊಂಡು ನಮಗೆಲ್ಲ ಬಹಳ ನೋವಾಗಿದೆ ಎಂದು ಡಿಸಿಎಂ ಡಾ. ಜಿ.ಪರಮೇಶ್ವರ್​ ಹೇಳಿದರು.

ನಗರದ ವಿಮಾನ‌ ನಿಲ್ದಾಣದಲ್ಲಿ ಮಾತನಾಡಿದ ಅವರು, ಶಿವಳ್ಳಿ ಅವರ ಆತ್ಮಕ್ಕೆ ಶಾಂತಿ ಸಿಗಲಿ. ಅವರ ಕುಟುಂಬಕ್ಕೆ ದುಃಖ ಭರಿಸುವ ಶಕ್ತಿ ಭಗವಂತ ಕೊಡಲಿ. ಸಾಮಾನ್ಯ ಕುಟುಂಬದಿಂದ ಬಂದು ಮೂರು ಬಾರಿ ಶಾಸಕರಾಗಿದ್ರು. ಸಂಪುಟದಲ್ಲಿ ನಮ್ಮ ಜೊತೆಗಿದ್ದ ಸಚಿವ ಶಿವಳ್ಳಿ ತೀರಿಕೊಂಡಿರೋದು ನಮಗೆ ಬಹಳ ನೋವಾಗಿದೆ ಎಂದರು.

ಸಚಿವ ಶಿವಳ್ಳಿಯವರ ಅಗಲಿಕೆಗೆ ಉಪ ಮುಖ್ಯಮಂತ್ರಿ ಡಾ. ಜಿ. ಪರಮೇಶ್ವರ್​​​​​ ಕಂಬನಿ ಮಿಡದಿದ್ದಾರೆ.


ಕಟ್ಟಡ ದುರಂತ ದುರದೃಷ್ಟಕರ

ಧಾರವಾಡ ಕಟ್ಟಡ ಕುಸಿತ ಪ್ರಕರಣದ ವಿಚಾರಕ್ಕೆ ಪ್ರತಿಕ್ರಯಿಸಿದ ಅವರು, ಇದೊಂದು ದುರದೃಷ್ಟಕರ ಘಟನೆ. ಬಹಳ ಜನ ಇನ್ನೂ ಕಟ್ಟಡದಲ್ಲಿ ಸಿಲುಕಿಕೊಂಡಿದ್ದಾರೆ ಅನ್ನೋ ಮಾಹಿತಿ ಇದೆ. ಕಟ್ಟಡವನ್ನ ಕಟ್ಟೋ ನಕ್ಷೆ, ಪ್ಲಾನ್​ಗೆ ಅನುಮತಿ ನೀಡಿದವರನ್ನ ಈಗಾಗಲೇ ಅಮಾನತು ಮಾಡಲಾಗಿದೆ ಎಂದರು.

ಯಡಿಯೂರಪ್ಪ ಡೈರಿ ವಿಚಾರದ ತನಿಖೆಯಾಗಬೇಕು

ಸಚಿವ ಡಿಕೆಶಿ ಮನೆಯಲ್ಲಿ ಬಿಎಸ್​ವೈ ಡೈರಿ ಪತ್ತೆ ವಿಚಾರಕ್ಕೆ ಪ್ರತಿಕ್ರಿಯಿಸಿದ ಅವರು, ಐಟಿ ಇಲಾಖೆ ಕಾನೂನು ಪ್ರಕಾರ ಪರಿಶೀಲನೆ ಮಾಡುತ್ತೆ. ಅದು ಸತ್ಯವೇ ಆದರೆ ಯಡಿಯೂರಪ್ಪ ಸಾರ್ವಜನಿಕ ವಲಯದಲ್ಲಿ ಯಾವ ರೀತಿ ಆಡಳಿತ ಮಾಡಿದ್ದಾರೆ ಅನ್ನೋದು ಗೊತ್ತಾಗುತ್ತೆ. ಸತ್ಯ ಹೊರಬಂದ ಮೇಲೆ ಈ ಬಗ್ಗೆ ಮಾತನಾಡಬಹುದು ಎಂದರು.

ABOUT THE AUTHOR

...view details