ಕರ್ನಾಟಕ

karnataka

ETV Bharat / state

370 ರದ್ದು ಮಾಡಿ‌ ನ್ಯಾಯ ದೊರಕಿಸಿಕೊಟ್ಟಿದ್ದೇವೆ: ಅನುರಾಗ ಠಾಕೂರ್​​ - Anurag Thakura visited Dharwad

ಒಂದೇ ದೇಶ ಒಂದೇ ಸಂವಿಧಾನದ ವಿಚಾರ ಸಂಕಿರಣ ಕಾರ್ಯಕ್ರಮ ಇಂದು ಧಾರವಾಡದಲ್ಲಿ ಜರುಗಿದ್ದು, ಕೆಂದ್ರ ಸಚಿವ ಅನುರಾಗ ಠಾಕೂರ್​​ ಈ ಕಾರ್ಯಕ್ರಮದಲ್ಲಿ ಭಾಗಿಯಾಗಿದ್ದರು. ಈ ಕಾರ್ಯಕ್ರಮಕ್ಕೂ ಮುನ್ನ ಮೂರು ಸಾವಿರ ಮಠಕ್ಕೆ ಭೇಟಿ ನೀಡಿ ಪರಮ ಪೂಜ್ಯ ಶ್ರೀಗಳ ಆಶೀರ್ವಾದ ಪಡೆದುಕೊಂಡಿದ್ದರು

ಒಂದೇ ದೇಶ ಒಂದೇ ಸಂವಿಧಾನದ ವಿಚಾರ ಸಂಕಿರಣದಲ್ಲಿ ಅನುರಾಗ ಠಾಕೂರ

By

Published : Sep 28, 2019, 10:05 PM IST

ಧಾರವಾಡ/ಹುಬ್ಬಳ್ಳಿ:ನಮ್ಮ ದೇಶದಲ್ಲಿ ರಾಹುಲ್ ಗಾಂಧಿ ಏನೇ ಮಾತನಾಡಿದ್ರೂ ಇಮ್ರಾನ್ ಖಾನ್ ಅದನ್ನೇ ದುರುಪಯೋಗಪಡಿಸಿಕೊಳ್ಳತಾ ಇದ್ದಾರೆ.‌ ಕಾಶ್ಮೀರಕ್ಕೆ ನೀಡಿದ ವಿಶೇಷ ಸ್ಥಾನಮಾನ ರದ್ದುಮಾಡಿ ನಾವು ನ್ಯಾಯ ದೊರಕಿಸಿಕೊಟ್ಟಿದ್ದೇವೆ ಎಂದು ಕೇಂದ್ರ ಸಚಿವ ಅನುರಾಗ ಠಾಕೂರ್​ ಹೇಳಿದರು.

ಒಂದೇ ದೇಶ ಒಂದೇ ಸಂವಿಧಾನದ ವಿಚಾರ ಸಂಕಿರಣದಲ್ಲಿ ಅನುರಾಗ ಠಾಕೂರ

ಧಾರವಾಡದ ಸೃಜನಾ ರಂಗಮಂದಿರದಲ್ಲಿ ಒಂದೇ ದೇಶ ಒಂದೇ ಸಂವಿಧಾನದ ವಿಚಾರ ಸಂಕಿರಣದಲ್ಲಿ ಅವರು ಮಾತನಾಡಿದರು. ರಾಹುಲ್ ಗಾಂಧಿ ಅದು ಸರಿಯಲ್ಲ ಅಂತಾರೆ.‌ ಇದನ್ನೇ ಮುಂದಿಟ್ಟುಕೊಂಡು ಇಮ್ರಾನ್ ಖಾನ್ ಮಾತನಾಡ್ತಾ ಇದಾರೆ. ಹೀಗಾಗಿ ರಾಹುಲ್ ಗಾಂಧಿ ಹಿಂದೂಸ್ತಾನ್ ಪರವೋ ಪಾಕ್ ಪರವೋ ಅಂತಾ ನಾವೀಗ ವಿಚಾರ ಮಾಡಬೇಕಿದೆ ಎಂದು ಹರಿಹಾಯ್ದಿದ್ದಾರೆ.

ಶ್ರೀ ಗುರುಸಿದ್ಧ ರಾಜಯೋಗೀಂದ್ರ ಮಹಾಸ್ವಾಮಿಗಳನ್ನು ಭೇಟಿ ಮಾಡಿದ ಅನುರಾಗ ಠಾಕೂರ್​


ಮೂರುಸಾವಿರ ಮಠಕ್ಕೆ ಭೇಟಿ:ಜಮ್ಮು-ಕಾಶ್ಮೀರದಲ್ಲಿ 370 ವಿಧಿ ರದ್ದತಿಯ ಐತಿಹಾಸಿಕ ನಿರ್ಧಾರದ ಪರಿಣಾಮವಾಗಿ ಜಾರಿಯಾದ "ಒಂದು ದೇಶ-ಒಂದು ಸಂವಿಧಾನ"ದ ಜನ ಜಾಗೃತಿಯ ಗಣ್ಯರ ಭೇಟಿಯ ನಿಮಿತ್ತ ಕೇಂದ್ರ ಸಚಿವ ಅನುರಾಗ ಠಾಕೂರ್​, ಹುಬ್ಬಳ್ಳಿಯ ಮೂರುಸಾವಿರ ಮಠಕ್ಕೆ ಭೇಟಿ ನೀಡಿದರು. ಪರಮ ಪೂಜ್ಯ ಶ್ರೀ ಗುರುಸಿದ್ಧ ರಾಜಯೋಗೀಂದ್ರ ಮಹಾಸ್ವಾಮಿಗಳನ್ನು ಭೇಟಿ ಮಾಡಿ ಚರ್ಚಿಸಿ ಪೂಜ್ಯರ ಆಶೀರ್ವಾದ ಪಡೆದರು

ABOUT THE AUTHOR

...view details