ಹುಬ್ಬಳ್ಳಿ:''ದೆಹಲಿ ಪೊಲೀಸರು ಹಾಗೂ ನಾವು ನಿರಂತರ ಸಂಪರ್ಕದಲ್ಲಿದ್ದೇವೆ. ಶಂಕಿತ ಉಗ್ರರ ಪ್ರಕರಣದಲ್ಲಿ ಹುಬ್ಬಳ್ಳಿ- ಧಾರವಾಡ ಹೆಸರು ಕೇಳಿಬಂದಿದ್ದರಿಂದ ನಾವು ಈ ಕುರಿತಂತೆ ಸಮಗ್ರ ಮಾಹಿತಿ ಕಲೆ ಹಾಕುತ್ತಿದ್ದೇವೆ'' ಎಂದು ಹು-ಧಾ ಪೊಲೀಸ್ ಕಮಿಷನರ್ ರೇಣುಕಾ ಸುಕುಮಾರ ತಿಳಿಸಿದ್ದಾರೆ.
ನಗರದಲ್ಲಿ ಇಂದು (ಮಂಗಳವಾರ) ಮಾತನಾಡಿದ ಅವರು, ಇಸ್ಲಾಮಿಕ್ ಸ್ಟೇಟ್ (ಐಸಿಸ್) ಉಗ್ರ ಸಂಘಟನೆಯ ಸಂಘಟನೆಯೊಂದಿಗೆ ನಂಟು ಹೊಂದಿದ ಶಂಕಿತರನ್ನು ಸೆರೆ ಹಿಡಿದಿರುವ ಬಗ್ಗೆ ಪ್ರತಿಕ್ರಿಯಿಸಿ, ''ಆದಾಗ್ಯೂ ನಾವು ದೆಹಲಿ ಪೊಲೀಸರ ಜೊತೆ ಹೈಲೆವೆಲ್ ಟಚ್ನಲ್ಲಿ ಇದ್ದೇವೆ. ಆದರೆ, ಅಧಿಕೃತವಾಗಿ ಇಲ್ಲಿ ತರಬೇತಿ ಪಡೆದಿದ್ದಾರಾ? ಅಥವಾ ಅವರು ಎಲ್ಲಿವರು ಅನ್ನೋ ಮಾಹಿತಿ ನಮಗೆ ಇಲ್ಲ. ನಮ್ಮ ಜೊತೆ ದೆಹಲಿ ಪೊಲೀಸರು ಯಾವುದೇ ಮಾಹಿತಿ ಶೇರ್ ಮಾಡಕೊಂಡಿಲ್ಲ. ಉನ್ನತ ಮಟ್ಟದಲ್ಲಿ ನಾವು ದೆಹಲಿ ಪೊಲೀಸರ ಜೊತೆ ಚರ್ಚೆಯಲ್ಲಿ ತೊಡಗಿದ್ದೇವೆ'' ಎಂದರು.
''ನ್ಯೂಸ್ ಚಾನಲ್ಗಳಲ್ಲಿ ಪ್ರಸಾರವಾದ ವಿಡಿಯೋದಲ್ಲಿ ಯಾವುದೇ ಸ್ಪೆಷಿಫಿಕ್ ಪ್ಲೇಸ್ ಹೇಳಿಲ್ಲ. ನಾವು ದೆಹಲಿ ಪೊಲೀಸರ ಜೊತೆ ಸಂಪರ್ಕದಲ್ಲಿ ಇದ್ದೇವೆ. ಆದ್ರೆ ಅಧಿಕೃತವಾಗಿ ನಮಗೆ ದೆಹಲಿ ಪೊಲೀಸರು ಏನೂ ಹೇಳಿಲ್ಲ. ಅವರು ನಮ್ಮ ಜೊತೆಗೆ ಯಾವ ಮಾಹಿತಿಯನ್ನೂ ಶೇರ್ ಮಾಡಿಕೊಂಡಿಲ್ಲ. ಈಗಾಗಲೇ ನಮ್ಮ ಪೊಲೀಸರು ಅಲರ್ಟ್ ಆಗಿದ್ದಾರೆ. ನಾವು ಮುನ್ನೆಚ್ಚರಿಕೆ ಕ್ರಮವಾಗಿ ಕ್ರಮ ಕೈಗೊಂಡಿದ್ದೇವೆ. ಜೊತೆಗೆ ಹೆಚ್ಚಿನ ಗುಪ್ತಚರ ಮಾಹಿತಿಯನ್ನೂ ಕಲೆಹಾಕುತ್ತಿದ್ದೇವೆ'' ಎಂದರು.