ಧಾರವಾಡ: ಕೊರೊನಾ ವೈರಸ್ ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ ಏಪ್ರಿಲ್ 14 ರವರೆಗೆ ದೇಶದಾದ್ಯಂತ ಲಾಕ್ ಡೌನ್ ಮಾಡಲಾಗಿದೆ. ಹೀಗಾಗಿ ಜಿಲ್ಲಾದ್ಯಂತ 144 ಸೆಕ್ಷನ್ ಜಾರಿಯಲ್ಲಿದೆ. ಆದರೆ, ಅನಗತ್ಯವಾಗಿ ಸುತ್ತಾಡಬಾರದು ಎಂದು ಪೊಲೀಸ್ ಕಮಿಷನರ್ ಆರ್.ದಿಲೀಪ್ ಮನವಿ ಮಾಡಿದ್ದಾರೆ.
ನಾವು ಬಹಳ ಸಂದಿಗ್ಧ ಪರಿಸ್ಥಿತಿಯಲ್ಲಿದ್ದೇವೆ: ಪೊಲೀಸ್ ಕಮಿಷನರ್ ಆರ್.ದಿಲೀಪ್
ಇದು ಪೊಲೀಸ್ ಮತ್ತು ಪಬ್ಲಿಕ್ ನಡುವಿನ ವಾರ್ ಅಲ್ಲ, ಪೊಲೀಸ್ ಮತ್ತು ಪಬ್ಲಿಕ್ ಸೇರಿ ಕಣ್ಣಿಗೆ ಕಾಣದ ಶತ್ರು ಎದುರಿಸಬೇಕಾಗಿದೆ. ಹೀಗಾಗಿ ದಯಮಾಡಿ ಅನಗತ್ಯವಾಗಿ ಹೊರಗೆ ಬರಬೇಡಿ ಎಂದು ಪೊಲೀಸ್ ಕಮಿಷನರ್ ಆರ್.ದಿಲೀಪ್ ತಿಳಿಸಿದರು.
ಪೊಲೀಸ್ ಕಮಿಷನರ್ ಆರ್.ದಿಲೀಪ್
ಜನರಲ್ಲಿ ಕಳಕಳಿಯ ಮನವಿ ಮಾಡಿಕೊಂಡಿರುವ ಅವರು, ಲಾಕ್‌ಡೌನ್ ಮಾಡಲಾಗಿದ್ದು, ಇದು ಪೊಲೀಸ್ ಮತ್ತು ಪಬ್ಲಿಕ್ ನಡುವಿನ ವಾರ್ ಅಲ್ಲ, ಪೊಲೀಸ್ ಮತ್ತು ಪಬ್ಲಿಕ್ ಸೇರಿ ಕಣ್ಣಿಗೆ ಕಾಣದ ಶತ್ರುವನ್ನು ಎದುರಿಸಬೇಕಾಗಿದೆ. ಹೀಗಾಗಿ ದಯಮಾಡಿ ಅನಗತ್ಯವಾಗಿ ಹೊರಗೆ ಬರಬೇಡಿ ಎಂದು ತಿಳಿಸಿದರು.
ಅನಗತ್ಯವಾಗಿ ಹೊರಗೆ ಬರುವ ಜನರ ಮೇಲೆ ಪ್ರಕರಣ ದಾಖಲಿಸುತ್ತಿದ್ದೇವೆ. ಇದು ನಮಗೆ ಖುಷಿ ಕೊಡುವುದಿಲ್ಲ, ಬಹಳ ಸಂದಿಗ್ಧ ಪರಿಸ್ಥಿತಿಯಲ್ಲಿದ್ದೇವೆ. ಮನೆಯಲ್ಲಿ ಎಷ್ಟು ಇರ್ತಿರಿ ಅಷ್ಟು ಸೇಫ್ ಆಗಿರ್ತಿರಿ. ಹೊರಗೆ ಬಂದಾಗ ಮಾಸ್ಕ್ ಹಾಕಿಕೊಳ್ಳಿ, ಸಾಮಾಜಿಕ ಅಂತರ ತೆಗೆದುಕೊಳ್ಳಿ ಎಂದರು.
Last Updated : Apr 2, 2020, 3:44 PM IST