ಧಾರವಾಡ:ಮಡಿವಾಳೇಶ್ವರ ಮಠದ ಚನ್ನಬಸವ ಸ್ವಾಮೀಜಿ ನೇತೃತ್ವದಲ್ಲಿ ಮೂರನೇ ವರ್ಷದ ಉಳವಿ ಪಾದಯಾತ್ರೆ ಕೈಗೊಳ್ಳಲಾಯಿತು. ಧಾರವಾಡ ಗ್ರಾಮೀಣ ಕ್ಷೇತ್ರದ ಶಾಸಕ ಅಮೃತ ದೇಸಾಯಿ ಇಂದು ಈ ಪಾದಯಾತ್ರೆ ಆರಂಭಿಸಿದರು.
ಗರಗದ ಶ್ರೀಗುರು ಮಡಿವಾಳೇಶ್ವರ ಮಠದಿಂದ ಮಹಾಮಂಗಳಾರತಿ ಹಾಗೂ ಸ್ವಾಮೀಜಿ ಪಾದ ಪೂಜೆ ಮಾಡುವ ಮೂಲಕ ಪಾದಯಾತ್ರೆ ಆರಂಭವಾಯಿತು. ನಂತರ ಗರಗ ರಸ್ತೆ ಮೂಲಕ ನರೇಂದ್ರ ಬೈಪಾಸ್ ಮಾರ್ಗವಾಗಿ ಸಾಗಿತು.
ಸ್ವಾಮೀಜಿಗಳ ಆಶೀರ್ವಾದ ಪಡೆದ ಶಾಸಕ ಶಾಸಕ ಅಮೃತ ದೇಸಾಯಿ ಇಂದು ನಿಗದಿಯಲ್ಲಿ ವಾಸ್ತವ್ಯ ಹೂಡಲಿದ್ದಾರೆ. ನಾಳೆ ದಾಂಡೇಲಿ ಕ್ರಾಸ್, ನಾಡಿದ್ದು ಪೋಟೋಳಿ ಕ್ರಾಸ್ ಮಾರ್ಗವಾಗಿ ಉಳವಿ ತಲುಪಲಿದ್ದಾರೆ.
'ಉಳವಿ ಪಾದಯಾತ್ರೆ'ಯಲ್ಲಿ ಶಾಸಕ ಅಮೃತ ದೇಸಾಯಿ ಈ ಸಂದರ್ಭದಲ್ಲಿ ಮುರುಘಾಮಠದ ಸ್ವಾಮೀಜಿ, ನಾಗನೂರು ಮಠದ ಅಲ್ಲಮಪ್ರಭು ಸ್ವಾಮೀಜಿ, ಹೊಸೂರ ಮಡಿವಾಳೇಶ್ವರ ಮಠದ ಸ್ವಾಮೀಜಿ, ಬೈಲಹೊಂಗಲದ ಮಡಿವಾಳೇಶ್ವರ ಮಠದ ಸ್ವಾಮೀಜಿ, ಬೈಲಹೊಂಗಲದ ಮೂರುಸಾವಿರ ಮಠದ ಸ್ವಾಮೀಜಿ ಹಾಗೂ ಮಡಿವಾಳೇಶ್ವರ ಮಠದ ಟ್ರಸ್ಟ್ ಕಾರ್ಯಧ್ಯಕ್ಷ ಅಶೋಕ ದೇಸಾಯಿ ಸೇರಿದಂತೆ ಸಾವಿರಕ್ಕೂ ಅಧಿಕ ಭಕ್ತರು ಪಾದಯಾತ್ರೆಯಲ್ಲಿ ಹೆಜ್ಜೆ ಹಾಕಿದರು.