ಹುಬ್ಬಳ್ಳಿ :ಹುಬ್ಬಳ್ಳಿ - ಧಾರವಾಡ ಮಹಾನಗರದಲ್ಲಿ ಜನರು ಕುಡಿವ ನೀರಿಗಾಗಿ ದಿನವೂ ಹೋರಾಟ ನಡೆಸುವಂತಾಗಿದೆ. ಇತ್ತೀಚೆಗೆ ಜಲಮಂಡಳಿ ನೀರು ಸರಬರಾಜು ಜವಾಬ್ದಾರಿಯನ್ನು ಖಾಸಗೀಕರಣದ ಮೂಲಕ ಎಲ್ ಅಂಡ್ ಟಿ ಎಂಬ ಕಂಪನಿಗೆ ನೀಡಿದೆ. ಆದರೆ, ಗಂಡ ಹೆಂಡತಿ ಜಗಳದಲ್ಲಿ ಕೂಸು ಬಡವಾಯಿತು ಎಂಬುವಂತೇ ಹದಿನೈದು ದಿನಗಳಿಂದ ಕುಡಿವ ನೀರಿಗಾಗಿ ಜನರ ಪರದಾಟ ಮುಂದುವರೆದಿದೆ.
ಈ ಬಗ್ಗೆ ಮಹಾನಗರ ಪಾಲಿಕೆ ಸಾಕಷ್ಟು ಬಾರಿ ಸಭೆ ಮಾಡಿದ್ದರೂ ಜನರ ಭವಣೆ ಮಾತ್ರ ಬಗೆಹರಿಯುತ್ತಿಲ್ಲ. ಹಳೇ ಹುಬ್ಬಳ್ಳಿ, ಬೀಡಿ ಕಾರ್ಮಿಕರ ನಗರ, ಸ್ವರಾಜನಗರ, ಪಂಪನಗರ, ಬಂಜಾರ ಕಾಲೊನಿ, ಜಗದೀಶ ನಗರ, ಹುಬ್ಬಳ್ಳಿ, ಅಯೋಧ್ಯಾನಗರ, ಎಸ್.ಎಂ.ಕೃಷ್ಣ ನಗರ, ವೀರಾಪುರ ಓಣಿ, ಬಿಡನಾಳ, ಕರ್ಕಿ ಬಸವೇಶ್ವರನಗರ, ಗೋಕುಲ ರಸ್ತೆ, ಹೊಸುರು, ವಿದ್ಯಾನಗರ ಸೇರಿದಂತೆ ಹುಬ್ಬಳ್ಳಿ ಧಾರವಾಡ ಅವಳಿ ನಗರದ ಬಹುತೇಕ ಕಡೆಯಲ್ಲಿ ಸುಮಾರು ಹದಿನೈದು ದಿನ ಕಳೆದರೂ ಕುಡಿಯುವ ನೀರು ಬರುತ್ತಿಲ್ಲ ಎಂದು ಸಾರ್ವಜನಿಕರು ಆರೋಪಿಸಿದ್ದಾರೆ.