ಹುಬ್ಬಳ್ಳಿ: ಮಹಾನಗರವಾಗಿ ಬೆಳೆದ ಹುಬ್ಬಳ್ಳಿ ಹಲವು ಅಭಿವೃದ್ಧಿ ಯೋಜನೆಗಳ ಮೂಲಕ ಗಮನ ಸೆಳೆಯುತ್ತಿದೆ. ಶರವೇಗದಲ್ಲಿ ಅವಳಿನಗರದ ಬಡಾವಣೆಗಳು ಸ್ಮಾರ್ಟ್ ಆಗುತ್ತಿವೆ. ಅದರಲ್ಲೂ ಇಲ್ಲಿನ ಅಮರಗೋಳದಲ್ಲಿರುವ ಎಪಿಎಂಸಿಯ ಬಸವ ಕಾಲೋನಿಗೆ ಹೋದರೆ ಕುಡಿಯುವ ನೀರಿಗಾಗಿ ಜನ ಪರದಾಡುವ ದೃಶ್ಯ ಸಾಮಾನ್ಯವಾಗಿದೆ.
ಹುಬ್ಬಳ್ಳಿಯ ಅಮರಗೋಳದಲ್ಲಿರುವ ಎಪಿಎಂಸಿಯಲ್ಲಿ ಈಗಲೂ ಕುಡಿಯುವ ನೀರಿನ ಸೌಲಭ್ಯವಿಲ್ಲ. ವಾರಕ್ಕೆ ಎರಡು ಸಲ ಮಾತ್ರ ಬರುವ ಎರಡು ಟ್ಯಾಂಕರ್ ನೀರೇ ಅಲ್ಲಿನ ಜನರಿಗೆ ಆಧಾರ. ಎಪಿಎಂಸಿಯಲ್ಲಿ ಒಂದು ನಲ್ಲಿಯೂ ಇಲ್ಲಿ ತನಕ ಪಾಲಿಕೆ ಹಾಕಿಲ್ಲ. ಹೀಗಾಗಿ, ವಾರಕ್ಕೆರಡು ಸಲ ಬರುವ ಟ್ಯಾಂಕರ್ ನೀರಿಗೆ ಇಲ್ಲಿನ ನಿವಾಸಿಗಳು ಪರದಾಡುವ ಸ್ಥಿತಿ ಬಂದಿದೆ.