ಕರ್ನಾಟಕ

karnataka

ETV Bharat / state

ಧಾರವಾಡ: ಭಾರಿ ಮಳೆಗೆ ಶಾಲೆಯ ಸುತ್ತ ನೀರಿನ ಹರಿವು; ಮಕ್ಕಳ ರಕ್ಷಣೆಗೆ ಮುಂದಾದ ಗ್ರಾಮಸ್ಥರು

ಸಂಜೆ ಸುಮಾರು 4 ಗಂಟೆಯಿಂದ ಆರಂಭವಾದ ಮಳೆಗೆ ತಾಲೂಕಿನ ಅಮರಗೋಳದಲ್ಲಿ ಹಾದುಹೋಗಿರುವ ಹಳ್ಳವೊಂದು ಉಕ್ಕಿ ಹರಿದಿದೆ. ಇದರಿಂದಾಗಿ ನೀರು ಗ್ರಾಮದಲ್ಲಿನ ಪ್ರೌಢಶಾಲೆಯ ಸುತ್ತಲೂ ಆವರಿಸಿದೆ.

ಧಾರವಾಡ: ಭಾರಿ ಮಳೆಗೆ ಶಾಲೆಯ ಸುತ್ತ ನೀರಿನ ಹರಿವು; ಮಕ್ಕಳ ರಕ್ಷಣೆಗೆ ಮುಂದಾದ ಗ್ರಾಮಸ್ಥರು
ಭಾರೀ ಮಳೆಗೆ ಶಾಲೆಯ ಸುತ್ತ ನೀರಿನ ಹರಿವು

By

Published : Jun 16, 2022, 9:17 PM IST

Updated : Jun 16, 2022, 9:45 PM IST

ಧಾರವಾಡ: ಧಾರಾಕಾರ ಮಳೆ ಸುರಿದ ಕಾರಣ ಶಾಲೆಯ ಸುತ್ತ ಭಾರಿ ಮಟ್ಟದ ನೀರಿನ ಹರಿವು ಉಂಟಾಗಿದೆ. 150 ಕ್ಕೂ ಹೆಚ್ಚು ಮಕ್ಕಳು ಶಾಲೆಯಲ್ಲೇ ಸಿಲುಕಿದ್ದಾರೆ. ಜಿಲ್ಲೆಯ ನವಲಗುಂದ ತಾಲೂಕಿನ ಅಮರಗೋಳ ಗ್ರಾಮದಲ್ಲಿ ಘಟನೆ ಜರುಗಿದೆ.

ಬೆಳವಟಗಿ ಗ್ರಾಮ ಪಂಚಾಯತ್ ಅಧಿಕಾರಿಗಳು ಹಾಗೂ ಗ್ರಾಮಸ್ಥರು ಮಕ್ಕಳ ರಕ್ಷಣೆಗೆ ಮುಂದಾಗಿದ್ದಾರೆ. ಸಂಜೆ ಸುಮಾರು ನಾಲ್ಕು ಗಂಟೆಯಿಂದ ಆರಂಭವಾದ ಮಳೆಗೆ ತಾಲೂಕಿನ ಅಮರಗೋಳದಲ್ಲಿ ಹಾದುಹೋಗಿರುವ ಹಳ್ಳವೊಂದು ಉಕ್ಕಿ ಹರಿದಿದೆ. ಇದರಿಂದಾಗಿ ನೀರು ಗ್ರಾಮದಲ್ಲಿನ ಪ್ರೌಢಶಾಲೆಯ ಸುತ್ತಲೂ ಆವರಿಸಿದೆ.


ವಿದ್ಯಾರ್ಥಿಗಳು ಹೊರಬರದ ಹಾಗೆ ಸಿಬ್ಬಂದಿ ನೋಡಿಕೊಳ್ಳುತ್ತಿದ್ದು, ನೀರಿನ ಹರಿವು ಕಡಿಮೆಯಾದ ನಂತರ ಮನೆಗಳಿಗೆ ಕಳುಹಿಸಲಾಗುವುದು, ಅಲ್ಲಿಯವರೆಗೆ ವಿದ್ಯಾರ್ಥಿಗಳನ್ನು ಸುರಕ್ಷಿತವಾಗಿ ಶಾಲೆಯಲ್ಲಿಯೇ ಇರಿಸಲಾಗಿದೆ ಎಂದು ಬೆಳವಟಗಿ ಗ್ರಾಮ ಪಂಚಾಯತಿ ಅಭಿವೃದ್ಧಿ ಅಧಿಕಾರಿ ಶಿವಾನಂದ ಹಂಪಿಹೊಳಿ ತಿಳಿಸಿದರು.

ಇದನ್ನೂ ಓದಿ: ಸೋನಿಯಾ ಗಾಂಧಿ ಅನಾರೋಗ್ಯ: ಇನ್ನೂ 4 ದಿನ ವಿನಾಯಿತಿ ನೀಡುವಂತೆ ಇಡಿಗೆ ರಾಹುಲ್​ ಮನವಿ

Last Updated : Jun 16, 2022, 9:45 PM IST

ABOUT THE AUTHOR

...view details