ಕರ್ನಾಟಕ

karnataka

ETV Bharat / state

ಅಲ್ರೀ 3 ತಿಂಗಳಾಯ್ತು, ವಾಟರ್‌ ಬಿಲ್‌ ಇನ್ನೂ ಬಂದಿಲ್ಲ.. ಹಿಂಗಾದ್ರೇ ಹೆಂಗ್‌ ಹೇಳ್ರೀ.. - ಹುಬ್ಬಳ್ಳಿ ಜಲಮಂಡಳಿ ಸುದ್ದಿ 2021

ನಗರದಲ್ಲಿ ನೀರು ಸರಬರಾಜು ಸೇವೆಯನ್ನು ಜಲಮಂಡಳಿಯಿಂದ ಖಾಸಗಿ ಕಂಪನಿಯಾದ 'ಎಲ್ ಆ್ಯಂಡ್ ಟಿ' (L &T)ಗೆ ನೀಡಲಾಗಿದೆ. ಪರಿಣಾಮ ಹುಬ್ಬಳ್ಳಿ- ಧಾರವಾಡದ ಬಹುತೇಕ ಸಾರ್ವಜನಿಕರಿಗೆ ಮೂರು ತಿಂಗಳಿನಿಂದ ವಾಟರ್ ಬಿಲ್ (Water Bill) ಬಂದಿಲ್ಲ..

Muncipality council
ಹುಬ್ಬಳ್ಳಿ ಮಹಾನಗರ ಪಾಲಿಕೆ

By

Published : Nov 12, 2021, 4:50 PM IST

ಹುಬ್ಬಳ್ಳಿ: 'ಮೂರು ತಿಂಗಳು ಆಯ್ತು, ಇನ್ನೂ ವಾಟರ್ ಬಿಲ್ ( Water bill ) ಬಂದಿಲ್ಲ. ಒಮ್ಮೆಲೇ ವಾಟರ್ ಬಿಲ್ ಬಂದರೆ ಹೇಗೆ ಕಟ್ಟುವುದು?. ಲಾಕ್​ಡೌನ್​ ಸಮಯದಲ್ಲಿ ಜೀವನ ನಡೆಸುವುದೇ ಕಷ್ಟ ಆಗಿತ್ತು. ಈಗ ಒಮ್ಮೆಲೆ ವಾಟರ್ ಬಿಲ್ ಬಂದರೆ ಏನು ಮಾಡುವುದು?.' ಅಂತಾ ಅವಳಿನಗರದ ಜನ ಮಾತಾಡಿಕೊಳ್ತಿದ್ದಾರೆ.

ಈ ಬಗ್ಗೆ ಪಾಲಿಕೆ ಆಯುಕ್ತ ಸುರೇಶ್ ಇಟ್ನಾಳ್ ಪ್ರತಿಕ್ರಿಯೆ ನೀಡಿರುವುದು..

ನಗರದಲ್ಲಿ ನೀರು ಸರಬರಾಜು ಸೇವೆಯನ್ನು ಜಲಮಂಡಳಿಯಿಂದ ಖಾಸಗಿ ಕಂಪನಿಯಾದ 'ಎಲ್ ಆ್ಯಂಡ್ ಟಿ'ಗೆ ನೀಡಲಾಗಿದೆ. ಪರಿಣಾಮ ಹುಬ್ಬಳ್ಳಿ- ಧಾರವಾಡದ ಬಹುತೇಕ ಸಾರ್ವಜನಿಕರಿಗೆ ಮೂರು ತಿಂಗಳಿನಿಂದ ವಾಟರ್ ಬಿಲ್ ಬಂದಿಲ್ಲ. ಜಲಮಂಡಳಿಯವರ ಈ ಅವ್ಯವಸ್ಥೆಯಿಂದ ಜನರು ಸಮಸ್ಯೆ ಎದುರಿಸುವಂತಾಗಿದೆ.

'ಈಗಾಗಲೇ ಬಿಲ್ ನೀಡುವಂತೆ ಪಾಲಿಕೆಯಿಂದ ಜಲಮಂಡಳಿಗೆ ನಿರ್ದೇಶನ ನೀಡಲಾಗಿದೆ. ಖಾಸಗಿ ಕಂಪನಿಗೆ ಹಸ್ತಾಂತರ ಮಾಡುವಂತೆ ಆದೇಶ ನೀಡಲಾಗಿದೆ. ಅದೆನೇ ಸಮಸ್ಯೆ ಆಗಿದ್ದರೂ ಕೂಡ ವಾಟರ್ ಬೋರ್ಡ್​ನಿಂದ ಆಗಿದೆ.

ಖಾಸಗಿ ಕಂಪನಿ ಹಾಗೂ ಜಲಮಂಡಳಿ ನಡುವೆ ಹಣದ ಸಮಸ್ಯೆ ಇದ್ದಿದ್ದರಿಂದ ಬಿಲ್ ಕೊಟ್ಟಿರಲಿಲ್ಲ. ಈಗ ಬಿಲ್ ತಯಾರಿಸಿ ಕೊಡುತ್ತಿದ್ದಾರೆ. ಧಾರವಾಡದಲ್ಲಿ ಶೇ.75ರಷ್ಟು ಹಾಗೂ ಹುಬ್ಬಳ್ಳಿಯಲ್ಲಿ ಶೇ.30ರಷ್ಟು ಕೊಟ್ಟಿದ್ದಾರೆ. ಮುಂದೆ ಎಲ್ಲಾ ಕಡೆ ಬಿಲ್​ ಕೊಡುತ್ತಾರೆ ಎಂದು' ಪಾಲಿಕೆ ಆಯುಕ್ತ ಸುರೇಶ್ ಇಟ್ನಾಳ ತಿಳಿಸಿದ್ದಾರೆ.

ಓದಿ:ಹುಬ್ಬಳ್ಳಿಯನ್ನೇ ಕೇಂದ್ರವನ್ನಾಗಿಸಿಕೊಂಡ ಗಾಂಜಾ ಘಾಟು: ಬೀಚ್​​ಗಳಿಗೆ ಇಲ್ಲಿಂದಲೇ ರವಾನೆ?

ABOUT THE AUTHOR

...view details