ಕರ್ನಾಟಕ

karnataka

By

Published : Apr 3, 2020, 4:33 PM IST

ETV Bharat / state

ಪೀಪಲ್ಸ್ ಫಾರ್ ಅನಿಮಲ್ಸ್ ಸಂಸ್ಥೆಯಿಂದ ರಸ್ತೆಬದಿ ಪ್ರಾಣಿಗಳಿಗೆ ಆಹಾರ, ನೀರು ಪೂರೈಕೆ

ಲಾಕ್ ಡೌನ್​​​​​​​ನಿಂದ ಮನುಷ್ಯರು ಮಾತ್ರವಲ್ಲ ಪ್ರಾಣಿ ಪಕ್ಷಿಗಳು ಕೂಡಾ ಊಟ ಇಲ್ಲದೆ ಕಷ್ಟ ಅನುಭವಿಸುತ್ತಿವೆ. ಈ ಹಿನ್ನೆಲೆ ಹುಬ್ಬಳ್ಳಿ-ಧಾರವಾಡದ ಪೀಪಲ್ಸ್ ಫಾರ್ ಎನಿಮಲ್ಸ್ ಸಂಸ್ಥೆ ಸದಸ್ಯರು ಅಡುಗೆ ತಯಾರಿಸಿ ಬೀದಿ ಬದಿಯ ಪ್ರಾಣಿಗಳಿಗೆ ಕೊಡುತ್ತಿದ್ದಾರೆ.

Volunteers distributing food for animals
ಪೀಪಲ್ಸ್ ಫಾರ್ ಅನಿಮಲ್ಸ್ ಸಂಸ್ಥೆ

ಧಾರವಾಡ:ಲಾಕ್​ ಡೌನ್ ಆರಂಭವಾದಾಗಿನಿಂದ ನಿರ್ಗತಿಕರು , ದಿನದ ಕೂಲಿಯನ್ನೇ ನಂಬಿ ಬದುಕುತ್ತಿದ್ದ ಜನರು ಬಹಳ ಕಷ್ಟ ಅನುಭವಿಸುತ್ತಿದ್ದಾರೆ. ಇಂತವರಿಗೆ ಕೆಲವು ಸಂಘಸಂಸ್ಥೆಗಳು, ಸ್ವಯಂ ಸೇವಕರು ಮುಂದೆ ಬಂದು ಉಚಿತವಾಗಿ ಆಹಾರ ನೀಡುತ್ತಿದ್ದಾರೆ.

ಪೀಪಲ್ಸ್ ಫಾರ್ ಅನಿಮಲ್ಸ್ ಸಂಸ್ಥೆ

ಆದರೆ ಲಾಕ್ ಡೌನ್​​​​​​​ನಿಂದ ಮನುಷ್ಯರು ಮಾತ್ರವಲ್ಲ ಪ್ರಾಣಿ ಪಕ್ಷಿಗಳು ಕೂಡಾ ಊಟ ಇಲ್ಲದೆ ಕಷ್ಟ ಅನುಭವಿಸುತ್ತಿವೆ. ಈ ಹಿನ್ನೆಲೆ ಹುಬ್ಬಳ್ಳಿ-ಧಾರವಾಡದ ಪೀಪಲ್ಸ್ ಫಾರ್ ಎನಿಮಲ್ಸ್ ಸಂಸ್ಥೆ ಸದಸ್ಯರು ಅಡುಗೆ ತಯಾರಿಸಿ ಬೀದಿ ಬದಿಯ ಪ್ರಾಣಿಗಳಿಗೆ ಕೊಡುತ್ತಿದ್ದಾರೆ. ಹುಬ್ಬಳ್ಳಿ-ಧಾರವಾಡ ಪೀಪಲ್ಸ್ ಫಾರ್ ಅನಿಮಲ್ಸ್ ಸಂಸ್ಥೆಯ ಅಧ್ಯಕ್ಷೆ ಡಾ. ಪೂರ್ಣಿಮಾ ಹಾಗೂ ಉಪಾಧ್ಯಕ್ಷ ತೇಜರಾಜ ಜೈನ್ ಅವರ ಮಾರ್ಗದರ್ಶನದಲ್ಲಿ ಸ್ವಯಂ ಸೇವಕರು ಪ್ರಾಣಿಗಳ ಸೇವೆಯಲ್ಲಿ ‌ತೊಡಗಿಕೊಂಡಿದ್ದಾರೆ. ಮೊಟ್ಟೆ, ಬಿಸ್ಕೆಟ್​, ಅನ್ನ ತಯಾರಿಸಿ ಬೀದಿ ಬದಿಯ ಪ್ರಾಣಿಗಳಿಗೆ ವಿತರಿಸುತ್ತಿದ್ದಾರೆ. ಸದಸ್ಯರು ದನಕರುಗಳಿಗೆ ನೀರು ಹಾಗೂ ಮೇವನ್ನೂ ಕೂಡಾ ವಿತರಿಸುತ್ತಿದ್ಧಾರೆ.

ಪೀಪಲ್ಸ್ ಫಾರ್ ಅನಿಮಲ್ಸ್ ಸಂಸ್ಥೆ

For All Latest Updates

TAGGED:

ABOUT THE AUTHOR

...view details