ಹುಬ್ಬಳ್ಳಿ: ಕಿಮ್ಸ್ ಆಸ್ಪತ್ರೆಯಲ್ಲಿ ಹೋಂ ಕ್ವಾರಂಟೈನ್ನಲ್ಲಿದ್ದವರು ವೈದ್ಯ ಸಿಬ್ಬಂದಿ ಮೇಲೆ ಬೆದರಿಕೆ ಹಾಕಿದ್ದನ್ನು ಖಂಡಿಸಿ ವಿಶ್ವಹಿಂದೂ ಪರಿಷತ್ ಹಾಗೂ ಬಜರಂಗದಳ ಕಾರ್ಯಕರ್ತರು ಕಿಮ್ಸ್ ನಿರ್ದೇಶಕ ಡಾ. ರಾಮಲಿಂಗ ಪ್ರಸನ್ನ ಭೇಟಿಯಾಗಿ ಬೆದರಿಕೆ ಹಾಕಿದವರ ವಿರುದ್ದ ಕ್ರಮಕೈಗೊಳ್ಳಬೇಕೆಂದು ಮನವಿ ಮಾಡಿದ್ದಾರೆ.
ದೆಹಲಿ ನಿಜಾಮುದ್ದೀನ್ ಪ್ರದೇಶದಲ್ಲಿ ನಡೆದ ಧಾರ್ಮಿಕ ಕಾರ್ಯಕ್ರಮದಲ್ಲಿ ಭಾಗಿಯಾಗಿದ್ದವರನ್ನು ಕಿಮ್ಸ್ ಆಸ್ಪತ್ರೆಯ ಹೋಂ ಕ್ವಾರಂಟೈನ್ ನಲ್ಲಿ ಇರಿಸಲಾಗಿದೆ. ಇವರಲ್ಲಿ ಹಲವರು ವೈದ್ಯಕೀಯ ಸಿಬ್ಬಂದಿಗಳ ಜತೆ ಕಿರಿಕ್ ಮಾಡಿಕೊಂಡಿದ್ದಾರೆ.
ವೈದ್ಯರಿಗೆ ಬೆದರಿಕೆ, ತಪ್ಪಿತಸ್ಥರ ವಿರುದ್ದ ಕ್ರಮಕ್ಕೆ ವಿಶ್ವಹಿಂದೂ ಪರಿಷತ್ ಒತ್ತಾಯ - ವಿಶ್ವಹಿಂದೂ ಪರಿಷತ್, ಬಜರಂಗದಳ ಮನವಿ
ದೆಹಲಿ ನಿಜಾಮುದ್ದೀನ್ ಪ್ರದೇಶದಲ್ಲಿ ನಡೆದ ಧಾರ್ಮಿಕ ಕಾರ್ಯಕ್ರಮದಲ್ಲಿ ಭಾಗಿಯಾಗಿದ್ದವರನ್ನು ಕಿಮ್ಸ್ ಆಸ್ಪತ್ರೆಯ ಹೋಂ ಕ್ವಾರಂಟೈನ್ ನಲ್ಲಿ ಇರಿಸಲಾಗಿದ್ದು, ಅವರು ವೈದ್ಯ ಸಿಬ್ಬಂದಿ ಮೇಲೆ ಬೆದರಿಕೆ ಹಾಕಿದ್ದನ್ನು ಖಂಡಿಸಿ ವಿಶ್ವಹಿಂದೂ ಪರಿಷತ್ ಹಾಗೂ ಬಜರಂಗದಳ ಕಾರ್ಯಕರ್ತರು ಕಿಮ್ಸ್ ನಿರ್ದೇಶಕ ಡಾ. ರಾಮಲಿಂಗ ಪ್ರಸನ್ನ ಅವರನ್ನ ಭೇಟಿಯಾಗಿ ಕ್ರಮ ಕೈಗೊಳ್ಳುವಂತೆ ಮನವಿ ಮಾಡಿದ್ದಾರೆ.
ವೈದ್ಯ ಸಿಬ್ಬಂದಿ ಮೇಲೆ ಬೆದರಿಕೆ, ತಪ್ಪಿತಸ್ಥರ ವಿರುದ್ದ ಕ್ರಮಕ್ಕೆ ವಿಶ್ವಹಿಂದೂ ಪರಿಷತ್, ಬಜರಂಗದಳ ಮನವಿ
ಕಿಮ್ಸ್ ಆಸ್ಪತ್ರೆಯಲ್ಲಿ ಹೋಂ ಕ್ವಾರಂಟೈನ್ ನಲ್ಲಿದ್ದವರು ಟೂತ್‌ಪೇಸ್ಟ್, ಬ್ರಷ್ ಹಾಗೂ ಒಳ್ಳೆ ಉಪಹಾರ ಬೇಕು. ನಮಗೆ ಲೋಟದಲ್ಲಿ ನೀರು ಬೇಡ, ಮಿನರಲ್ ವಾಟರ್ ಬೇಕು. ನಮಗೆ ಕೊರೊನಾ ಇಲ್ಲ. ನಮ್ಮ ವರದಿ ನೆಗೆಟಿವ್ ಬರುತ್ತೆ, ನಾವೆಲ್ಲಾ ಅರಾಮಾಗಿದ್ದೇವೆ. ನಾವು ವಿಐಪಿಗಳು, ನಮಗೆ ವಿಐಪಿಗಳ ರೀತಿಯೇ ಟ್ರೀಟ್ ಮಾಡಿ, ಇಲ್ಲಾಂದ್ರೆ ಹೊರಗೆ ಹೋಗ್ತೀವಿ ಎಂದು ಬೆದರಿಕೆ ಹಾಕಿದ್ದರು.