ಕರ್ನಾಟಕ

karnataka

ETV Bharat / state

ಮಹದಾಯಿ ತೀರ್ಪು ವಿಚಾರ: ಉ.ಕ.ರೈತರಿಗೆ ನ್ಯಾಯ ಸಿಕ್ಕಿದೆ ಎಂದ ಹೋರಾಟಗಾರ - ಮಹದಾಯಿ ಹೋರಾಟಗಾರ ವಿರೇಶ ಸೊಬರದಮಠ

ಉತ್ತರ ಕರ್ನಾಟಕದ ರೈತರಿಗೆ ನ್ಯಾಯ ಸಿಕ್ಕಿದೆ. ಕಾನೂನು ವಿರುದ್ಧ ಯಾರೂ ಹೋಗ್ತಾರೋ ಅವರಿಗೆ ಹಿನ್ನೆಡೆ ಅಗುತ್ತೆ. ಗೋವಾ ಮತ್ತೆ ಏನಾದ್ರೂ ಕ್ಯಾತೆ ತೆಗೆದರೆ ಹಿನ್ನೆಡೆ ಆಗುತ್ತೆ ಎಂದು ಮಹದಾಯಿ ತೀರ್ಪಿನ ಬಗ್ಗೆ ಹೋರಾಟಗಾರ ವೀರೇಶ ಸೊಬರದಮಠ ಹೇಳಿದರು.

Viresh Sorabada math reaction on Mahdai judgment
ಮಹದಾಯಿ ಹೋರಾಟಗಾರ ವಿರೇಶ ಸೊಬರದಮಠ

By

Published : Feb 20, 2020, 3:20 PM IST

ಧಾರವಾಡ: ಮಹದಾಯಿ ಸಂಬಂಧ ನ್ಯಾಯಾಲಯದ ತೀರ್ಪು ರೈತರ ಪರವಾಗಿ ಬಂದಿದೆ ಎಂದು ಹೋರಾಟಗಾರ ವಿರೇಶ ಸೊಬರದಮಠ ಸಂತಸ ವ್ಯಕ್ತಪಡಿಸಿದ್ದಾರೆ.

ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಕಾನೂನು ನಮ್ಮ ಮೂಲಭೂತ ಹಕ್ಕುಗಳಿಗೆ ಪರಿಹಾರ ಕೊಟ್ಟಿದೆ. ನ್ಯಾಯಮಂಡಳಿ ಆದೇಶ ಆದ ಬಳಿಕವೇ ಕೇಂದ್ರ ಸರ್ಕಾರ ನೊಟಿಫಿಕೇಷನ್ ಮಾಡಬೇಕಿತ್ತು. ಆದರೆ, ರಾಜಕೀಯ ಷಡ್ಯಂತ್ರದಿಂದ ಸುಪ್ರೀಂಕೋರ್ಟ್‌ಗೆ ಮೇಲ್ಮನವಿ ‌ಹೋಗಿದ್ದರು. ಮಹದಾಯಿ ಇತ್ಯರ್ಥ ವಿಳಂಬ ಆಗಲಿ‌ ಅಂತಾನೇ ಆ ರೀತಿ ಮಾಡಲಾಗಿತ್ತು ಎಂದರು.

ಮಹದಾಯಿ ಹೋರಾಟಗಾರ ವಿರೇಶ ಸೊಬರದಮಠ

ಉತ್ತರ ಕರ್ನಾಟಕದ ರೈತರಿಗೆ ನ್ಯಾಯ ಸಿಕ್ಕಿದೆ. ನ್ಯಾಯಾಲಯದ ವಿರುದ್ಧ ಹೋಗುವುದು ಶಾಸಕಾಂಗದ ವ್ಯವಸ್ಥೆಯಲ್ಲಿ ಆಗಬಾರದು ಎಂದು ಗೋವಾ ವಿರುದ್ಧ ಹರಿಹಾಯ್ದರು.

ABOUT THE AUTHOR

...view details