ಕರ್ನಾಟಕ

karnataka

ETV Bharat / state

ಅನರ್ಹರ ಬಗ್ಗೆ ಕನಿಕರ, ಬಿಜೆಪಿಗರ ಬಗ್ಗೆ ಬೇಸರ: ಬಿಎಸ್​ವೈ ಮಾತನಾಡಿರುವ ವಿಡಿಯೋ ವೈರಲ್​ - ಅನರ್ಹ ಶಾಸಕರ ಕ್ಷೇತ್ರದ ಉಪ ಚುನಾವಣೆ

ಉಪ ಚುನಾವಣೆ ಏನಾಗುತ್ತೋ ಗೊತ್ತಿಲ್ಲ. ಅವರು ನಮ್ಮನ್ನ ಆಡಳಿತಕ್ಕೆ ತಂದಿದ್ದಾರೆ. ಅವರ ಪರವಾಗಿ ನಾವು ಗಟ್ಟಿಯಾಗಿ ನಿಲ್ಲಬೇಕು ಎಂದ ಅವರು, ನನಗೇನು ಮುಖ್ಯಮಂತ್ರಿಗಿರಿ ಬೇಕಾಗಿಲ್ಲ. ಒಳ್ಳೆ ಉದ್ದೇಶಕ್ಕೆ ಬೆಲೆಯೇ ಇಲ್ಲ. ವಾಸ್ತವ ಸ್ಥಿತಿ ತಿಳಿಯದೇ ನೀವು ಮಾತನಾಡಿದ್ದೀರಿ. ಈ ಎಲ್ಲಾ ಸಂಗತಿಗಳನ್ನ ಕೇಂದ್ರ ನಾಯಕರ ಗಮನಕ್ಕೆ ತರೋಣ. ನಾನಂತೂ ಯಾವ ತೀರ್ಮಾನ ತೆಗೆದುಕೊಳ್ಳೋ ಸ್ಥಿತಿಯಲ್ಲಿಲ್ಲ. ನಾನೇ ಅಪರಾಧ ಮಾಡಿದಂತೆ ಕಾಣುತ್ತೆ ಎಂದರು.

ಅನರ್ಹರ ಬಗ್ಗೆ ಕನಿಕರ, ಬಿಜೆಪಿಗರ ಬಗ್ಗೆ ಬೇಸರ

By

Published : Nov 1, 2019, 6:26 PM IST

Updated : Nov 1, 2019, 7:19 PM IST

ಹುಬ್ಬಳ್ಳಿ: ನಗರದ ಖಾಸಗಿ ಹೋಟೆಲ್​ನಲ್ಲಿ ನಡೆದ ಬಿಜೆಪಿ ಕೋರ್​ ಕಮಿಟಿ ಸಭೆಯಲ್ಲಿ ಅನರ್ಹ ಶಾಸಕರ ವಿಚಾರಕ್ಕೆ ಸಂಬಂಧಿಸಿದಂತೆ ಪಕ್ಷದ‌ ನಾಯಕರ ನಡೆಗೆ ಮುಖ್ಯಮಂತ್ರಿ ಯಡಿಯೂರಪ್ಪ ತೀವ್ರ ಬೇಸರ ವ್ಯಕ್ತಪಡಿಸಿರುವ ವಿಡಿಯೋ ಈಗ ವೈರಲ್ ಆಗಿದೆ.

ಸಭೆಯಲ್ಲಿ ಅನರ್ಹ ಶಾಸಕರ ಕ್ಷೇತ್ರದ ಉಪ ಚುನಾವಣೆ ಬಗೆಗಿನ ಚರ್ಚೆಯ ಸಂದರ್ಭದಲ್ಲಿ ಬೇಸರ ಹೊರಹಾಕಿದ್ದಾರೆ. ಅನರ್ಹ ಶಾಸಕರ ವಿರುದ್ಧ ಪಕ್ಷದ ಕೆಲ ನಾಯಕರು ಮಾತನಾಡಿದಕ್ಕೆ ಕ್ಲಾಸ್ ತಗೆದುಕೊಂಡಿದ್ದಾರೆ. ಸರ್ಕಾರ ಉಳಿಸುವ ಧಾಟಿಯಲ್ಲಿ ಯಾರೂ ಮಾತನಾಡಿಲ್ಲ. 17 ಅನರ್ಹರ ಬಗ್ಗೆ ಯಡಿಯೂರಪ್ಪ ತೀರ್ಮಾನ ತೆಗೆದುಕೊಂಡಿಲ್ಲ. ರಾಷ್ಟ್ರೀಯ ಅಧ್ಯಕ್ಷರೇ ಬಾಂಬೆಯಲ್ಲಿ ಎರಡೂವರೆ ತಿಂಗಳು ಇಟ್ಟಿದ್ರು. ಇದೆಲ್ಲ ನಿಮಗೆ ಗೊತ್ತಿದೆ ತಾನೇ? ಎಂದು ಗುಡುಗಿದ್ದಾರೆ.

ಉಪ ಚುನಾವಣೆ ಏನಾಗುತ್ತೊ ಗೊತ್ತಿಲ್ಲ. ಅವರು ನಮ್ಮನ್ನ ಆಡಳಿತಕ್ಕೆ ತಂದಿದ್ದಾರೆ. ಅವರ ಪರವಾಗಿ ನಾವು ಗಟ್ಟಿಯಾಗಿ ನಿಲ್ಲಬೇಕು ಎಂದ ಅವರು, ನನಗೇನು ಮುಖ್ಯಮಂತ್ರಿಗಿರಿ ಬೇಕಾಗಿಲ್ಲ. ಒಳ್ಳೆಯ ಉದ್ದೇಶಕ್ಕೆ ಬೆಲೆಯೇ ಇಲ್ಲ. ವಾಸ್ತವ ಸ್ಥಿತಿ ತಿಳಿಯದೇ ನೀವು ಮಾತನಾಡಿದ್ದೀರಿ. ಈ ಎಲ್ಲ ಸಂಗತಿಗಳನ್ನ ಕೇಂದ್ರ ನಾಯಕರ ಗಮನಕ್ಕೆ ತರೋಣ. ನಾನಂತೂ ಯಾವ ತೀರ್ಮಾನ ತೆಗೆದುಕೊಳ್ಳೋ ಸ್ಥಿತಿಯಲ್ಲಿಲ್ಲ. ನಾನೇ ಅಪರಾಧ ಮಾಡಿದಂತೆ ಕಾಣುತ್ತೆ ಎಂದರು.

ಬಿಎಸ್​ವೈ ಮಾತನಾಡಿರುವ ವಿಡಿಯೋ ವೈರಲ್​

ಅನರ್ಹರನ್ನು ನಂಬಿಸಿ ನಾನು ತಪ್ಪು ಮಾಡಿದ್ದೇನೆ. ಈ ಸಭೆಗೆ ನಾನು ಬರಬಾರದಿತ್ತು. ಅನರ್ಹರ ತ್ಯಾಗ ಯಾರ ಗಮನಕ್ಕೂ ಬರಲೇ ಇಲ್ಲ. ಅವರ ತ್ಯಾಗದ ಫಲವಾಗಿಯೇ ಇಂದು ನಾವು ಅಧಿಕಾರದಲ್ಲಿದ್ದೇವೆ. ನಮ್ಮನ್ನ ನಂಬಿ ಅನರ್ಹರು ಮೂರ್ಖರು, ಹುಚ್ಚರಾಗಿದ್ದಾರೆ. ಅವರು ರಾಜೀನಾಮೆ ಕೊಡೋ ಅಗತ್ಯವಾದ್ರೂ ಏನಿತ್ತು? ನಮ್ಮನ್ನ ನಂಬಿ ಅವರು ರಾಜೀನಾಮೆ ನೀಡಿದ್ದಾರೆ ಎಂದ ಅವರು, ಕೈ ಮುಗಿವೆ, ಈ ಸಂಗತಿ ಹೊರಗೆ ಹೋಗೋದು ಬೇಡ ಎಂದಿದ್ದಾರೆ. ಆದರೂ ಕೂಡ ಬಿಎಸ್​ವೈ ಬೇಸರ ವ್ಯಕ್ತಪಡಿಸಿರುವ ವಿಡಿಯೋ ಈಗ ವೈರಲ್​ ಆಗಿದ್ದು, ಸಿಎಂ ಅಸಹಾಯಕತೆಯನ್ನು ಎತ್ತಿ ತೋರಿಸುತ್ತಿದೆ.

Last Updated : Nov 1, 2019, 7:19 PM IST

ABOUT THE AUTHOR

...view details