ಕರ್ನಾಟಕ

karnataka

ETV Bharat / state

ನಾನು ಬಿಜೆಪಿ ಸೇರುವ ವಿಷಯ ಕೇವಲ ಊಹಾಪೋಹ: ವಿನಯ ಕುಲಕರ್ಣಿ ಸ್ಪಷ್ಟನೆ - Former minister Vinaya Kulkarni joins BJP rumours

ಸಿಬಿಐಯಿಂದ ತಪ್ಪಿಸಿಕೊಳ್ಳಲು ಬಿಜೆಪಿ ಸೇರ್ಪಡೆ ಅಂತಾ ಸುದ್ದಿ ಆಗುತ್ತಿದೆ. ಸಿಬಿಐ ಏನು ಬಿಜೆಪಿ ಕೆಳಗಡೆ ಕೆಲಸ ಮಾಡುವ ಸಂಸ್ಥೆನಾ? ಬಿಜೆಪಿ ಪಕ್ಷಕ್ಕೆ ಹೋಗಿ ಬಿಟ್ರೆ ನನ್ನನ್ನು ಬಿಟ್ಟು ಬಿಡ್ತಾರಾ ಎಂದು ಮಾಜಿ ಸಚಿವ ವಿನಯ ಕುಲಕರ್ಣಿ ಪ್ರಶ್ನಿಸಿದ್ದಾರೆ.

Vinaya Kulkarni
ಮಾಜಿ ಸಚಿವ ವಿನಯ ಕುಲಕರ್ಣಿ

By

Published : Oct 8, 2020, 4:28 PM IST

ಧಾರವಾಡ: ಬಿಜೆಪಿ ಸೇರ್ಪಡೆ ವದಂತಿ ವಿಚಾರಕ್ಕೆ ನಗರದಲ್ಲಿ ಮಾಜಿ ಸಚಿವ ವಿನಯ ಕುಲಕರ್ಣಿ ಇಂದು ತೆರೆ ಎಳೆದಿದ್ದಾರೆ.

ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ನಾನಂತೂ ಯಾವ ನಾಯಕರನ್ನೂ ಭೇಟಿಯಾಗಿಲ್ಲ, ಯಾವುದೇ ಪ್ರಸ್ತಾಪವೂ ನನ್ನ ಮುಂದೆ ಬಂದಿಲ್ಲ. ಎಲ್ಲವೂ ಮಾಧ್ಯಮಗಳ ಉಹಾಪೋಹ ಅಷ್ಟೇ ಎಂದು ಹೇಳಿದ್ದಾರೆ.

ಮಾಜಿ ಸಚಿವ ವಿನಯ ಕುಲಕರ್ಣಿ
ನಾನು ಬೆಳೆದ ಬಂದ ದಾರಿಯೇ ಬೇರೆ. ನಾನು ಮೊದಲು ಪಕ್ಷೇತರ ಎಂಎಲ್‌ಎ ಸಹ ಆಗಿದ್ದೇನೆ. ಹೀಗಾಗಿ ಕಾರ್ಯಕರ್ತರು ಮತ್ತು ಎಲ್ಲ ಸಮಾಜದ ಜನ ನನ್ನ ಜೊತೆ ಇದ್ದಾರೆ. ಇವರನ್ನೆಲ್ಲ ಕೇಳದೇ ನಾನು ಯಾವುದೇ ನಿರ್ಧಾರ ತೆಗೆದುಕೊಳ್ಳುವುದಿಲ್ಲ, ಸಿ.ಪಿ. ಯೋಗೇಶ್ವರ ಕುದುರೆ ಖರೀದಿಗೆ ಬಂದಿದ್ರು, ಅವರು ನನ್ನಿಂದ ಆರು ಕುದುರೆ ತೆಗೆದುಕೊಂಡು ಹೋಗಿದ್ದಾರೆ. ನಾನು ಯಾರ ಜೊತೆಯೂ ಹೋಗಿ ಮಾತನಾಡಿಲ್ಲ ಎಂದು ಸ್ಪಷ್ಟಪಡಿಸಿದರು. ಯಾವುದೇ ದಾಖಲೆಗಳು ಇಲ್ಲದೇ ಮಾಧ್ಯಮಗಳು ನಿಮ್ಮ‌ ಲೆಕ್ಕಾಚಾರದಲ್ಲೇ ಸುದ್ದಿ ಮಾಡಬೇಡಿ. ನಾನು ದೊಡ್ಡ ಲೀಡರ್ ಅಲ್ಲ. ಯಾವುದೇ ಸ್ವಾಮೀಜಿಗಳ ಜತೆಯೂ ನಾನು ಮಾತನಾಡಿಲ್ಲ. ಸಿಬಿಐಯಿಂದ ತಪ್ಪಿಸಿಕೊಳ್ಳಲು ಬಿಜೆಪಿ ಸೇರ್ಪಡೆ ಅಂತಾ ಸುದ್ದಿ ಆಗುತ್ತಿದೆ. ಸಿಬಿಐ ಏನು ಬಿಜೆಪಿ ಕೆಳಗಡೆ ಕೆಲಸ ಮಾಡುತ್ತೇನು? ನಾನು ಬಿಜೆಪಿ ಹೋಗಿ ಬಿಟ್ರೆ ಬಿಟ್ಟು ಬಿಡ್ತಾರಾ ಎಂದು ಮಾಧ್ಯಮದವರಿಗೇ ಮರು ಪ್ರಶ್ನೆ ಹಾಕಿದರು.

ABOUT THE AUTHOR

...view details