ಕರ್ನಾಟಕ

karnataka

ನನ್ನ ಮತ್ತು ಬೆಂಬಲಿಗರ ಮನೆ ಮೇಲೆ ಐಟಿ ದಾಳಿ ಮಾಡಿಸುತ್ತಾರೆ: ವಿನಯ್ ಕುಲಕರ್ಣಿ

By

Published : May 1, 2023, 6:24 PM IST

ನಮ್ಮ ಫೋನ್‌ಗಳನ್ನು ಟ್ಯಾಪ್ ಮಾಡುತ್ತಿದ್ದಾರೆ, ನಾವು ಏನಾದರೂ ಮಾತನಾಡಿದರೆ 10 ನಿಮಿಷಕ್ಕೆ ಬಿಜೆಪಿಯವರಿಗೆ ಮಾಹಿತಿ ಹೋಗುತ್ತದೆ ಎಂದು ವಿನಯ್ ಕುಲಕರ್ಣಿ ಆರೋಪಿಸಿದ್ದಾರೆ.

vinay-kulkarni-reaction-on-bjp
ನನ್ನ ಮತ್ತು ಬೆಂಬಲಿಗರ ಮನೆ ಮೇಲೆ ಐಟಿ ದಾಳಿ ಮಾಡುಸುತ್ತಾರೆ?: ವಿನಯ್ ಕುಲಕರ್ಣಿ

ಧಾರವಾಡ/ಬೆಳಗಾವಿ: ಹೈಕೋರ್ಟ್​ ಚುನಾವಣೆಯ ಪ್ರಚಾರ ನಡೆಸಲು ನನಗೆ ಅನುಮತಿ ಕೊಟ್ಟಿಲ್ಲ. ಹಾಗಾಗಿ ಕ್ಷೇತ್ರದಿಂದ ಹೊರಗೆ ಇದ್ದುಕೊಂಡೇ ಕೆಲಸ ಮಾಡುತ್ತಿದ್ದೇನೆ. ಕ್ಷೇತ್ರದ ಜನ ಮತ್ತೆ ಕಾಂಗ್ರೆಸ್ ನತ್ತ ಮುಖ ಮಾಡಿದ್ದಾರೆ ಎಂದು‌ ಮಾಜಿ ಸಚಿವ ವಿನಯ್ ಕುಲಕರ್ಣಿ ಹೇಳಿದ್ದಾರೆ. ಬೆಳಗಾವಿ ಜಿಲ್ಲೆಯ ಕಿತ್ತೂರಿನಲ್ಲಿಂದು ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಕಳೆದ 23 ವರ್ಷಗಳಿಂದ ಕ್ಷೇತ್ರದಲ್ಲಿ ಕೆಲಸ ಮಾಡಿದ್ದೀನಿ. ಕ್ಷೇತ್ರದ ಜನರು ಮರಳಿ ಮತ್ತೆ ನನಗೆ ಅವಕಾಶ ಕೊಡುತ್ತಾರೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.

ನನ್ನ ಮತ್ತು ನನ್ನ ಬೆಂಬಲಿಗರ ಮನೆ ಮೇಲೆ ಐಟಿ ದಾಳಿ ಮಾಡಿಸುತ್ತಾರೆ, ಇದನ್ನು ಚುನಾವಣೆ ಎನ್ನುತ್ತಾರ, ನನ್ನ ಮೇಲೆ ಈ ರೀತಿ ಕುತಂತ್ರ ಮಾಡಿದ್ದು ಬಿಜೆಪಿ. ಈ ಹೇಳಿಕೆಗೆ ನಾನು ಬದ್ಧ ಕಳೆದ ಬಾರಿ ಚುನಾವಣೆಯಲ್ಲೂ ನನ್ನ ಪಿಎಗಳ ಮೇಲೂ ಐಟಿ ರೇಡ್ ಮಾಡಿಸಿದ್ದರು. ವಿಚಾರಣೆ ಹೆಸರಿನಲ್ಲಿ ನನ್ನನ್ನು ಮತ್ತು ನನ್ನ ಆಪ್ತ ಸಹಾಯಕರನ್ನು ಐದು ದಿನ ಹೊರಗೆ ಬಿಟ್ಟಿರಲಿಲ್ಲ. ಇದು ಪ್ರಜಾಪ್ರಭುತ್ವದ ಕಗ್ಗೂಲೆ ಎಂದು ಬಿಜೆಪಿ ವಿರುದ್ಧ ಕುಲಕರ್ಣಿ ಹರಿಹಾಯ್ದರು.

ಜನರಿಗೆ ನಾನು ಕೊಟ್ಟಂತಹ ಕೊಡುಗೆಯಿಂದ ಮತ ಕೇಳುತ್ತಿದ್ದೇನೆ. ರೈತರಿಗೆ, ವಿದ್ಯಾರ್ಥಿಗಳಿಗೆ, ಯುವಕರಿಗೆ ಕೊಟ್ಟಂತ ಯೋಜನೆಗಳು ಇಂದು ನನ್ನ ಕೈ ಹಿಡಿಯುತ್ತಿವೆ. ಯಾರೂ ಕೂಡ ಜನ ಸಂಪರ್ಕ ಸಭೆ ನಡೆಸಿಲ್ಲ. ಕಾಂಗ್ರೆಸ್ ಬೆಂಬಲಿಸುವವರಿಗೆ ಮನೆ ಕಟ್ಟಿಸಿಕೊಟ್ಟಿಲ್ಲ. 1 ಲಕ್ಷ ರೂಪಾಯಿ ಕೊಟ್ಟವರಿಗೆ ಮಾತ್ರ ಮನೆ ಕಟ್ಟಿಸಿಕೊಟ್ಟಿದ್ದಾರೆ ಎಂದು ಶಾಸಕ ಅಮೃತ ದೇಸಾಯಿ ವಿರುದ್ಧ ಮಾಜಿ ಸಚಿವ ವಿನಯ್ ಕುಲಕರ್ಣಿ ಆರೋಪ ಮಾಡಿದರು.

ಮಾಧನಭಾವಿ ಗ್ರಾಮದಲ್ಲಿ ಕ್ಯಾನ್ಸರ್ ರೋಗಿಗೆ ಮನೆ ಕಟ್ಟಿಸಿಕೊಟ್ಟಿಲ್ಲ ಅಂತಾ ಆತ ಆತ್ಮಹತ್ಯೆ ಮಾಡಿಕೊಂಡ. ಜನಪ್ರತಿನಿಧಿಗಳಾದವರು ಪಕ್ಷಬೇಧ ಮಾಡಬಾರದು. ವಿನಯ್ ಕುಲಕರ್ಣಿ ಯಾರು ಎಂಬುದು ಕ್ಷೇತ್ರದ ಜನರಿಗೆ ಗೊತ್ತಿದೆ. ನ್ಯಾಯಾಂಗದ ಮೇಲೆ ಭರವಸೆ ಇದೆ. ಸತ್ಯಕ್ಕೆ ಜಯ ಸಿಕ್ಕೇ ಸಿಗುತ್ತದೆ. ಹಾಲಿನಲ್ಲಿ ಉಪ್ಪಿನ ಹರಳು ಒಗೆಯುವ ಕೆಲಸವನ್ನು ಬಿಜೆಪಿಯವರು ಮಾಡಿದ್ದಾರೆ. ನನ್ನ ಪತ್ನಿಯನ್ನು ಮನೆಯ ಮಗಳಂತೆ ಕ್ಷೇತ್ರದ ಜನರು ಕಾಣುತ್ತಿದ್ದಾರೆ. ಜನ ಮಾತ್ರ ನನ್ನ ಆಯ್ಕೆ ಬಯಸಿದ್ದಾರೆ. ನಾನು ಎಲ್ಲಿದ್ದರೂ ಕೆಲಸ ಮಾಡುತ್ತೇನೆ ಎಂದು ಹೇಳಿದ್ರು.

ನನಗೆ ಕ್ಷೇತ್ರದಲ್ಲಿ ಸ್ಟಾರ್​ ಪ್ರಚಾರಕರ ಅವಶ್ಯಕತೆ ಇಲ್ಲ:ನಿನ್ನೆ ಮಾತನಾಡಿದವರು ದುಡ್ಡು ತೆಗೆದುಕೊಂಡು ಹೋಗಿದ್ದಾರೆ. ಇಷ್ಟು ದಿನ ಅವರ ವಿರುದ್ಧವೇ ಮಾತನಾಡಿದವರು ಈಗ ನನ್ನ ವಿರುದ್ಧ ಮಾತನಾಡುತ್ತಿದ್ದಾರೆ. ಅವರು ಬುಕ್ ಆಗಿದ್ದಾರೆ ಎಂದು ಕೊರವರಗೆ ಕುಲಕರ್ಣಿ ಚಾಟಿ ಬೀಸಿದರು. ಈ ಬಾರಿ ಎಲ್ಲಾ ಕ್ಷೇತ್ರದಲ್ಲಿ ಕಾಂಗ್ರೆಸ್ ಪರ ಅಲೆ ಇದೆ. ಈಗಿನ ಸರ್ಕಾರ ಮಾಡಿದಷ್ಟು ಭ್ರಷ್ಟಾಚಾರವನ್ನು ಯಾವ ಸರ್ಕಾರವೂ ಮಾಡಿಲ್ಲ. ಕೆರೆಗೆ ನೀರು ತುಂಬಿಸುವ ಕೆಲಸ, ಮಂದಿರ ನಿರ್ಮಾಣಕ್ಕೆ ತಾವು ಮಾಡಿದ ಕೆಲಸ ಎಂದು ಹಾಕಿಸಿಕೊಂಡಿದ್ದಾರೆ. ನನಗೆ ಕ್ಷೇತ್ರದಲ್ಲಿ ಸ್ಟಾರ್​ ಪ್ರಚಾರಕರ ಅವಶ್ಯಕತೆ ಇಲ್ಲ, ಸಿದ್ದರಾಮಯ್ಯನವರು ನನ್ನ ಪರ ಮತಯಾಚನೆ ಮಾಡುತ್ತಾರೆ. ಕಾರ್ಯಕರ್ತರೇ ನನ್ನ ಸೆಲೆಬ್ರೆಟಿಗಳು ಎಂದರು.

ಸುದೀಪ್ ಅವರು ಅಭಿವೃದ್ಧಿ ಪರ ಮತ ಹಾಕಿ ಎಂದು ಸರಿಯಾಗಿಯೇ ಹೇಳಿದ್ದಾರೆ. ದುಂದು ವೆಚ್ಚ ಮಾಡುವುದಿಲ್ಲ, ಕಾರ್ಯಕರ್ತರೇ ನನ್ನ ಸ್ಟಾರ್ ಪ್ರಚಾರಕರು. ಅವರ ತಲೆ ತುಂಬ ವಿನಯ್ ಕುಲಕರ್ಣಿನೇ ತುಂಬಿಕೊಂಡಿದ್ದಾನೆ. ನಮ್ಮ ಫೋನ್‌ಗಳನ್ನು ಟ್ಯಾಪ್ ಮಾಡಿ. ಕಾಲ್ ರೆಕಾರ್ಡ್ ಕೂಡ ರೆಕಾರ್ಡ್ ಮಾಡುತ್ತಾರೆ. ನಾವು ಏನಾದರೂ ಮಾತನಾಡಿದರೆ. 10 ನಿಮಿಷಕ್ಕೆ ಬಿಜೆಪಿಯವರಿಗೆ ಮಾಹಿತಿ ಹೋಗುತ್ತದೆ. ಈ ಬಗ್ಗೆ ನಾನು ದೂರು ಕೊಟ್ಟಿಲ್ಲ ಇದು ಆಗುತ್ತಿರುವುದಂತೂ ಸತ್ಯ. ಈ ದೇಶದಲ್ಲಿ ಪ್ರಜಾಪ್ರಭುತ್ವದ ಕಗ್ಗೊಲೆ ಆಗುತ್ತಿದೆ. 146 ಸೀಟುಗಳನ್ನು ಕಾಂಗ್ರೆಸ್ ಗೆಲ್ಲಲಿದೆ ಎಂಬ ವಿಶ್ವಾಸವನ್ನು ಕುಲಕರ್ಣಿ ವ್ಯಕ್ತಪಡಿಸಿದರು.

1700 ಕೋಟಿ ರೂ. ವೆಚ್ಚದ ಕಾಮಗಾರಿಯನ್ನು ಈ ಶಾಸಕರು ತೆಗೆದು ತೋರಿಸಲಿ, ಯಾವ ಸರ್ಕಾರ ಇದ್ದಾಗ ಏನೇನು ಕೆಲಸ ಆಗಿದೆ ಎನ್ನುವುದಕ್ಕೆ ಜನರೇ ಉತ್ತರ ಕೊಡುತ್ತಾರೆ. ಬೆಂಗಳೂರು ಇಷ್ಟು ವಿಸ್ತಾರವಾಗಿ ಬೆಳೆದಿದೆ ಎಂದರೆ ಅದಕ್ಕೆ ಕಾಂಗ್ರೆಸ್ ಸರ್ಕಾರವೇ ಕಾರಣ. ನಾನು ನನ್ನ ಜೀವನದಲ್ಲಿ ಯಾರದ್ದೂ ಒಂದು ಗುಂಟೆ ಜಾಗ ಕಬಳಿಸಿಲ್ಲ, ನನ್ನ ಸ್ವಾರ್ಥಕ್ಕೆ ಏನೂ ಮಾಡಿಕೊಂಡಿಲ್ಲ. ನಾನು ಹಫ್ತಾ ವಸೂಲಿ ಮಾಡೋದಿಲ್ಲ, ನಾನು ಯಾರಿಗೂ ಕೈ ಒಡ್ಡಿಲ್ಲ, ಮತದಾರರು ಈ ಬಾರಿ ನನ್ನ ಜೊತೆಗಿದ್ದಾರೆ. ದಿನಕ್ಕೆ 500-600 ಜನ ಕಾಂಗ್ರೆಸ್‌ಗೆ ಸೇರ್ಪಡೆಗೊಳ್ಳುತ್ತಿದ್ದಾರೆ ಎಂದರು.

ಸಂಸದರು ಕೋಟೂರು ಕೊಲೆ ಪ್ರಕರಣ ಸಿಬಿಐ ತನಿಖೆ ಮಾಡಿಸಲಿ, ಅವರ ಫೋನ್ ಕಾಲ್ ನಲ್ಲಿ ಯಾರ್‍ಯಾರು ಇದ್ದಾರೆ ಎಂದು ತನಿಖೆ ಮಾಡಿಸಲಿ. ನಾನು ವಿನಯ್ ಕುಲಕರ್ಣಿ ಎಂಬ ಅಭಿಯಾನವನ್ನು ನನ್ನ ಕಾರ್ಯಕರ್ತರೇ ಮಾಡುತ್ತಿದ್ದಾರೆ. ಎಸ್​ಎಸ್​ಎಲ್​ಸಿ ಫಲಿತಾಂಶದಲ್ಲಿ ಧಾರವಾಡ ಮುಂದೆ ಬರುವಂತೆ ಮಾಡಿದ್ದೆ. ಐಐಟಿಗೆ ನಾನು ಫೈಟ್ ಮಾಡದಿದ್ದರೆ ಅದು ಧಾರವಾಡಕ್ಕೆ ಬರುತ್ತಿರಲಿಲ್ಲ ಎಂದು ವಿನಯ್​ ಕುಲಕರ್ಣಿ ಹೇಳಿದ್ರು.

ಇದನ್ನೂ ಓದಿ:ಜೆಡಿಎಸ್​ ಪ್ರೈವೇಟ್ ಲಿಮಿಟೆಡ್ ಪಾರ್ಟಿ ಎಂದು ಮೋದಿ ಟೀಕೆ : ಪ್ರಧಾನಿ ಬಗ್ಗೆ ಮಾತಾಡಲಾರೆ ಎಂದ ದೇವೇಗೌಡ

ABOUT THE AUTHOR

...view details