ಹುಬ್ಬಳ್ಳಿ: ಕುಂದಗೋಳ ಉಪ ಚುನಾವಣೆಯಲ್ಲಿ ಬಂಡಾಯದ ಬೇಗುದಿ ಇನ್ನೂ ಮುಂದುವರೆದಿದೆ. ಕಾಂಗ್ರೆಸ್ ಬಂಡಾಯ ಅಭ್ಯರ್ಥಿಯಾಗಿ ನಾಮಪತ್ರ ಸಲ್ಲಿಸಿದ ಶಿವಾನಂದ ಬೆಂತೂರು ಕಾದು ನೋಡುವುದಾಗಿ ತಿಳಿಸಿದ್ದಾರೆ.
ಕೈ ಬಂಡಾಯ ಅಭ್ಯರ್ಥಿ ಜೊತೆ ಜಮೀರ್ ಸಭೆ... ಶಮನವಾಗುತ್ತಾ ಅಸಮಾಧಾನ? - Vinay Kulkarni
ಕುಂದಗೋಳ ಉಪ ಚುನಾವಣೆಯಲ್ಲಿ ಬಂಡಾಯದ ಬಾವುಟ ಹಾರಿಸಿದ್ದ ಕಾಂಗ್ರೆಸ್ ನಾಯಕರು ಕಾದು ನೋಡುವ ತಂತ್ರಕ್ಕೆ ಮೊರೆ ಹೋಗಿದ್ದಾರೆ. ಇದಕ್ಕೆ ಕೆಲ ಕೈ ಮುಖಂಡರು ಏನು ಹೇಳಿದ್ದಾರೆ ಗೊತ್ತಾ?
ನಗರದ ಖಾಸಗಿ ಹೋಟೆಲ್ನಲ್ಲಿ ಆಹಾರ ಮತ್ತು ನಾಗರಿಕ ಸರಬರಾಜು ಸಚಿವ ಜಮೀರ್ ಅಹ್ಮದ್ ಖಾನ್ ಜೊತೆ ಸಭೆ ನಡೆಸಿದ ಬಳಿಕ ಸುದ್ದಿಗಾರರ ಜೊತೆ ಮಾತನಾಡಿದ ಅವರು, ಈ ಉಪ ಚುನಾವಣಾ ಕಣದಲ್ಲಿರಬೇಕು ಎಂಬುದು ನನ್ನ ಅಚಲ ನಿರ್ಧಾರ. ಆದರೆ, ನನ್ನ ಆಪ್ತರ ಜೊತೆ ಸಭೆ ಮಾಡುತ್ತೇನೆ. ಅವರು ಬೇಡವೆಂದರೆ ನಾಮಪತ್ರ ವಾಪಸ್ ಪಡೆಯುತ್ತೇನೆ. ಜಮೀರ್ ಅವರು ನಮಗೆ ಭರವಸೆ ನೀಡಿದ್ದಾರೆ. ಆದರೆ, ಸಮಯ ಕೇಳಿದ್ದೇನೆ. ನಮ್ಮ ಆಪ್ತರು ನಾಮಪತ್ರ ವಾಪಸ್ ಪಡೆಯಬೇಕು ಎಂದರೆ ವಾಪಸ್ ಪಡೆಯುತ್ತೇನೆ. ಇಲ್ಲವಾದರೆ ಕಣದಲ್ಲಿಯೇ ಉಳಿಯುವುದಾಗಿ ಹೇಳಿದರು.
ಇನ್ನು ಸಭೆ ಬಳಿಕ ಈ ಬಗ್ಗೆ ಪ್ರತಿಕ್ರಿಯೆ ನೀಡಿದ ಮಾಜಿ ಸಚಿವ ವಿನಯ್ ಕುಲಕರ್ಣಿ, ನಮ್ಮಲ್ಲಿ ಯಾವುದೇ ಬಂಡಾಯವಿಲ್ಲ. ನಾಳೆಯೊಳಗೆ ಎಲ್ಲ ಬಂಡಾಯ ಅಭ್ಯರ್ಥಿಗಳು ನಾಮಪತ್ರವನ್ನು ವಾಪಸ್ ತೆಗೆದುಕೊಳ್ಳುತ್ತಾರೆ. ಅವರೆಲ್ಲ ನಮ್ಮವರೇ. ಟಿಕೆಟ್ ಸಿಗದಿದ್ದಾಗ ಅಸಮಾಧಾನವಾಗುವುದು ಸಹಜ. ಅದು ಸದ್ಯದಲ್ಲೇ ಬಗೆಹರಿಯುತ್ತೆ. ಯಾರೋ ಒಬ್ಬರು ನಿಂತರೆ ಪಕ್ಷಕ್ಕೆ ಹಾನಿ ಆಗಲ್ಲ ಎಂದಿದ್ದಾರೆ.