ಧಾರವಾಡ : ಜಿ.ಪಂ ಸದಸ್ಯ ಯೋಗೀಶ್ ಗೌಡ ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ಮಾಜಿ ಸಚಿವ ವಿನಯ್ ಕುಲಕರ್ಣಿಯನ್ನು ಸಿಸಿಬಿ ಪೊಲೀಸರು ವಶಕ್ಕೆ ಪಡೆದು ವಿಚಾರಣೆ ನಡೆಸುತ್ತಿದ್ದಾರೆ. ವಿಪರ್ಯಾಸವೆಂದರೆ, ತಾವು ವಿಚಾರಣೆ ಎದುರಿಸುತ್ತಿರುವ ಪೊಲೀಸ್ ಠಾಣೆಯನ್ನು ಸ್ವತಃ ವಿನಯ್ ಕುಲಕರ್ಣಿಯವರೇ ಉದ್ಘಾಟಿಸಿದ್ದಾರೆ.
ಉದ್ಘಾಟಿಸಿದ ಠಾಣೆಯಲ್ಲೇ ವಿಚಾರಣೆ ಎದುರಿಸುತ್ತಿರುವ ವಿನಯ್ ಕುಲಕರ್ಣಿ - ಸಿಸಿಬಿಯಿಂದ ಮಾಜಿ ಸಚಿವ ವಿನಯ್ ಕುಲಕರ್ಣಿ ವಿಚಾರಣೆ
ಜಿ.ಪಂ ಸದಸ್ಯ ಯೋಗೀಶ್ ಗೌಡ ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ಸಿಸಿಬಿ ವಶದಲ್ಲಿರುವ ಮಾಜಿ ಸಚಿವ ವಿನಯ್ ಕುಲಕರ್ಣಿ, ತಾನು ಉದ್ಘಾಟಿಸಿದ ಠಾಣೆಯಲ್ಲೇ ವಿಚಾರಣೆ ಎದುರಿಸುತ್ತಿದ್ದಾರೆ.
ಉದ್ಘಾಟಿಸಿದ ಠಾಣೆಯಲ್ಲೇ ವಿನಯ್ ಕುಲಕರ್ಣಿ ವಿಚಾರಣೆ
2017 ರಲ್ಲಿ ಧಾರವಾಡ ಉಪನಗರ ಪೊಲೀಸ್ ಠಾಣೆಯನ್ನು, ಅಂದಿನ ಮುಖ್ಯಮಂತ್ರಿಯಾಗಿದ್ದ ಸಿದ್ದರಾಮಯ್ಯ ನೇತೃತ್ವದಲ್ಲಿ, ಅಂದು ಜಿಲ್ಲಾ ಉಸ್ತುವಾರಿ ಸಚಿವರಾಗಿದ್ದ ವಿನಯ್ ಕುಲಕರ್ಣಿ ಉದ್ಘಾಟಿಸಿದ್ದರು. ಇಂದು ಅದೇ ಪೊಲೀಸ್ ಠಾಣೆಯಲ್ಲಿ ವಿನಯ ಕುಲಕರ್ಣಿ ಹಾಗೂ ಸಹೋದರ ವಿಜಯ್ ಕುಲಕರ್ಣಿ ವಿಚಾರಣೆ ಎದುರಿಸುತ್ತಿದ್ದಾರೆ.