ಧಾರವಾಡ:ಜನ್ಮದಿನದಂದು ಸಿಬಿಐ ವಿಚಾರಣೆ ಎದುರಿಸುತ್ತಿರುವ ಮಾಜಿ ಸಚಿವ ವಿನಯ್ ಕುಲಕರ್ಣಿ ಅವರ ಜನ್ಮದಿನದ ನಿಮಿತ್ತ ಅವರ ಅಭಿಮಾನಿಗಳು ರಕ್ತದಾನ ಮಾಡಿದರು.
ವಿನಯ್ ಕುಲಕರ್ಣಿ ಜನ್ಮದಿನ: ಕೇಕ್ ಕತ್ತರಿಸಿ ರಕ್ತದಾನ ಮಾಡಿದ ಅಭಿಮಾನಿಗಳು ಧಾರವಾಡದ ಗಾಂಧಿಚೌಕನಲ್ಲಿರುವ ಲಯನ್ಸ್ ಜಿಮ್ನಲ್ಲಿ ಸರ್ಕಾರಿ ಆಸ್ಪತ್ರೆಯ ರಕ್ತದಾನ ಕೇಂದ್ರದಿಂದ ಸ್ವಯಂಪ್ರೇರಿತ ರಕ್ತದಾನ ಶಿಬಿರದಲ್ಲಿ ಏರ್ಪಡಿಸಲಾಗಿತ್ತು. ಕಾಂಗ್ರೆಸ್ ಕಾರ್ಯಕರ್ತರು ಹಾಗೂ ಅವರ ಅಭಿಮಾನಿಗಳು ರಕ್ತದಾನ ಮಾಡಿ ನಂತರ ಕೇಕ್ ಕಟ್ ಮಾಡಿ ಸಂಭ್ರಮಿಸಿದರು. ಇನ್ನೊಂದು ವಿಶೇಷತೆ ಏನೆಂದರೆ ವಿನಯ್ ಕುಲಕರ್ಣಿ ಅಭಿಮಾನಿಯೊಬ್ಬ ಅವರ ಭಾವಚಿತ್ರ ಹೊಂದಿರುವ ಮುಖವಾಡ ಧರಿಸಿ ವಿನಯ್ ಕುಲಕರ್ಣಿ ಅವರನ್ನು ಬಂಧಿಸಿರಬಹುದು. ಆದ್ರೆ ಅವರ ಜೊತೆ ನೂರಾರು ಕಾರ್ಯಕರ್ತರಿದ್ದಾರೆ. ಅವರು ಆದಷ್ಟು ಶೀಘ್ರ ಹೊರಬರಲಿದ್ದಾರೆ ಎಂದರು.
ಸದ್ಯ ಸಿಬಿಐ ವಶದಲ್ಲಿರುವ ಮಾಜಿ ಸಚಿವ ವಿನಯ್ ಕುಲಕರ್ಣಿ ಅವರನ್ನು ವಿಚಾರಣೆಗಾಗಿ ಹುಬ್ಬಳ್ಳಿಗೆ ಕರೆ ತರಲಾಗಿದೆ. ಹುಬ್ಬಳ್ಳಿಯ ಗೋಕುಲ ರಸ್ತೆಯಲ್ಲಿರುವ ಸಿಎಆರ್ ಮೈದಾನದಲ್ಲಿನ ಕೊಠಡಿಯಲ್ಲಿ ವಿಚಾರಣೆ ನಡೆಸಲಾಗುತ್ತಿದೆ. ಈ ಹಿನ್ನೆಲೆ ಮೈದಾನದ ಸುತ್ತ ಬಿಗಿ ಪೊಲೀಸ್ ಬಂದೋಬಸ್ತ್ ನಿಯೋಜಿಸಲಾಗಿದೆ. ಸಾವಿರಾರು ಸಂಖ್ಯೆಯಲ್ಲಿ ಸೇರಿ ಸಂಭ್ರಮಿಸುತ್ತಿದ್ದ ಅಭಿಮಾನಿಗಳಿಗೆ ಇದರಿಂದ ನಿರಾಸೆ ಉಂಟಾಗಿದೆ. ಆದರೆ, ಅವರ ಅನುಪಸ್ಥಿತಿಯಲ್ಲಿಯೂ ಕಾಂಗ್ರೆಸ್ ಕಾರ್ಯಕರ್ತರು ಬರ್ತ್‌ಡೇ ಆಚರಿಸಿದ್ದಾರೆ.
ಹಣ್ಣು - ಹಂಪಲು ವಿತರಣೆ:ಧಾರವಾಡದ ಕಾಂಗ್ರೆಸ್ ಕಾರ್ಯಕರ್ತರು ವಿನಯ್ ಕುಲಕರ್ಣಿ ಅವರ ಜನ್ಮದಿನದ ನಿಮಿತ್ತ ಧಾರವಾಡ ಜಿಲ್ಲಾಸ್ಪತ್ರೆಯಲ್ಲಿ ರೋಗಿಗಳಿಗೆ ಹಣ್ಣು - ಹಂಪಲು ವಿತರಿಸಿದ್ದಾರೆ. ಅಪಾರ ಅಭಿಮಾನಿಗಳು ಹಾಗೂ ಕಾರ್ಯಕರ್ತರನ್ನು ಹೊಂದಿರುವ ಮಾಜಿ ಸಚಿವ ವಿನಯ್ ಕುಲಕರ್ಣಿ ಅವರಿಗೆ ಪ್ರತಿ ವರ್ಷದಂತೆ ಈ ವರ್ಷವೂ ಕೂಡಾ ಅಭಿಮಾನಿಗಳಿಂದ ಹಾಗೂ ಕಾರ್ಯಕರ್ತರಿಂದ ಸೋಷಿಯಲ್ ಮೀಡಿಯಾದಲ್ಲಿ ಶುಭಾಶಯಗಳ ಮಹಾಪೂರವೇ ಹರಿದು ಬರುತ್ತಿದೆ.