ಕರ್ನಾಟಕ

karnataka

ETV Bharat / state

ಗೋಡೆ ಮೇಲೆ ಸೂರ್ಯಗ್ರಹಣ ಮೂಡಿಸಿದ ಗ್ರಾಮಸ್ಥರು - latest darwad news

ಧಾರವಾಡ ಜಿಲ್ಲೆಯ ಉಪ್ಪಿನ ಬೆಟಗೇರಿ ಗ್ರಾಮಸ್ಥರು ಪೇಪರನ್ನು ವೃತ್ತಾಕಾರದಲ್ಲಿ ಕಟ್ ಮಾಡಿ ಅದನ್ನು ಕನ್ನಡಿಗೆ ಹಿಡಿದು ಗೋಡೆಗೆ ಛಾಯೆ ಬಿಡುವ ಮೂಲಕ ಸೂರ್ಯಗ್ರಹಣವನ್ನು ವೀಕ್ಷಿಸಿದ್ದಾರೆ.

eclipse
ಗೋಡೆ ಮೇಲೆ ಸೂರ್ಯಗ್ರಹಣ ತಂದ ಗ್ರಾಮಸ್ಥರು

By

Published : Jun 21, 2020, 2:19 PM IST

ಧಾರವಾಡ:ಇಲ್ಲಿನ ಉಪ್ಪಿನ ಬೆಟಗೇರಿ ಗ್ರಾಮದಲ್ಲಿ ಸಾರ್ವಜನಿಕರು ವಿಶಿಷ್ಟ ರೀತಿಯಲ್ಲಿ ಕಂಕಣ ಸೂರ್ಯಗ್ರಹಣವನ್ನು ವೀಕ್ಷಣೆ ಮಾಡಿ ಗಮನ ಸೆಳೆದಿದ್ದಾರೆ

ಆಕಾಶದಲ್ಲಿ ವಿಸ್ಮಯವೊಂದು ನಡೆಯತ್ತಿದೆ. ಕಂಕಣ ಸೂರ್ಯಗ್ರಹಣ ಗೋಚರಿಸುತ್ತಿದ್ದು, ಎಲ್ಲೆಡೆ ಜನ ಅದನ್ನು ನೋಡಿ ಕಣ್ತುಂಬಿಕೊಳ್ಳುತ್ತಿದ್ದಾರೆ. ಜಿಲ್ಲೆಯ ಉಪ್ಪಿನ ಬೆಟಗೇರಿ ಗ್ರಾಮಸ್ಥರು ಪೇಪರನ್ನು ವೃತ್ತಾಕಾರದಲ್ಲಿ ಕತ್ತರಿಸಿ ಅದನ್ನು ಕನ್ನಡಿಗೆ ಹಿಡಿದು ಗೋಡೆಗೆ ಛಾಯೆ ಬಿಡುವ ಮೂಲಕ ಸೂರ್ಯಗ್ರಹಣವನ್ನು ವೀಕ್ಷಣೆ ಮಾಡಿದ್ದಾರೆ.

ಗೋಡೆ ಮೇಲೆ ಸೂರ್ಯಗ್ರಹಣ ವೀಕ್ಷಿಸಿದ ಗ್ರಾಮಸ್ಥರು

ಗೋಡೆಯ ಮೇಲೆ ಛಾಯೆಬಿಟ್ಟ ಕೂಡಲೇ ಸೂರ್ಯನಿಗೆ ಅರ್ಧ ಪ್ರಮಾಣದಲ್ಲಿ ಗ್ರಹಣ ಆವರಿಸಿದ್ದು ಕಂಡು ಬಂತು. ಹಲವರು ಕಪ್ಪು ಗಾಜಿನ ಮೂಲಕ, ಕನ್ನಡಕದ ಮೂಲಕ ಗ್ರಹಣ ವೀಕ್ಷಿಸಿದರೆ, ಉಪ್ಪಿನ ಬೆಟಗೇರಿ ಗ್ರಾಮದ ಜನರು ಮಾತ್ರ ಕಣ್ಣಿಗೆ ತೊಂದರೆಯಾಗದ ರೀತಿಯಲ್ಲಿ ಗ್ರಹಣ ವೀಕ್ಷಿಸಿದ್ದಾರೆ.

ABOUT THE AUTHOR

...view details