ಧಾರವಾಡ:ಈರುಳ್ಳಿ ಮಾರಾಟ ಮಾಡಿ ಹಣ ಪಡೆದು ವಾಪಸ್ ಆಗುತ್ತಿದ್ದ ರೈತನ ಬಳಿಯಿದ್ದ ಹಣ ಕಿತ್ತುಕೊಂಡು ಹೋಗುತ್ತಿದ್ದ ಕಳ್ಳರನ್ನು ಗ್ರಾಮಸ್ಥರು ಥಳಿಸಿ ಪೊಲೀಸರಿಗೊಪ್ಪಿಸಿದ ಘಟನೆ ತಾಲೂಕಿನ ಹೆಬ್ಬಳ್ಳಿ ಗ್ರಾಮದಲ್ಲಿ ತಡರಾತ್ರಿ ನಡೆದಿದೆ.
ಈರುಳ್ಳಿ.. ಈರುಳ್ಳಿ... ರೈತನ ಬೆನ್ನಟ್ಟಿದ ಕಳ್ಳರು: ಸಿಕ್ಕಾಕಿಕೊಂಡ ಖದೀಮರಿಗೆ ಆದ ಗತಿ ಏನು? - ಧಾರವಾಡ ಕ್ರೈಂ ಲೆಟೆಸ್ಟ್ ನ್ಯೂಸ್
ಕೆಲ ದಿನಗಳಿಂದ ಈರುಳ್ಳಿ ಬೆಲೆ ಗಗನಕ್ಕೇರಿದ್ದು, ಇದರ ಜೊತೆಗೆ ಕಳ್ಳರ ಕಾಟ ಕೂಡ ಹೆಚ್ಚಾಗಿದೆ. ಈರುಳ್ಳಿ ಮಾರಾಟ ಮಾಡಿ ಹಣ ಪಡೆದುಕೊಂಡು ಬರುತ್ತಿದ್ದ ರೈತನನ್ನು ತಡೆದು ಹಣ ದೋಚಿ ಪರಾರಿಯಾಗುತ್ತಿದ್ದ ಖದೀಮರನ್ನು ಗ್ರಾಮಸ್ಥರು ಹಿಡಿದು ಥಳಿಸಿ ಪೊಲೀಸರಿಗೊಪ್ಪಿಸಿರುವ ಘಟನೆ ಧಾರವಾಡದಲ್ಲಿ ನಡೆದಿದೆ.
ಆರೋಪಿಗಳು
ಧಾರವಾಡದಿಂದ ವನಹಳ್ಳಿಗೆ ಹೊರಟ ರೈತನನ್ನು ಇಬ್ಬರು ಹಿಂಬಾಲಿಸಿದ್ದು, ನಿರ್ಜನ ಪ್ರದೇಶದಲ್ಲಿ ರೈತನಿಗೆ ಹೊಡೆದು ಅವರ ಬಳಿಯಿದ್ದ 10 ಸಾವಿರ ರೂ. ಕಿತ್ತುಕೊಂಡು ಕಳ್ಳರು ಪರಾರಿಯಾಗುತ್ತಿದ್ದರು. ಇದನ್ನು ಕಂಡು ಅನುಮಾನಗೊಂಡ ಹೆಬ್ಬಳ್ಳಿ ಗ್ರಾಮಸ್ಥರು ಈ ಇಬ್ಬರನ್ನು ತಡೆದು ವಿಚಾರಣೆ ನಡೆಸಿದಾಗ ರೈತನ ಹಣ ಕಿತ್ತುಕೊಂಡು ಹೋಗುತ್ತಿರುವ ಬಗ್ಗೆ ಖಚಿತ ಮಾಹಿತಿ ಪಡೆದಿದ್ದಾರೆ. ಬಳಿಕ ಈ ಖದೀಮರಿಗೆ ಥಳಿಸಿದ ಗ್ರಾಮಸ್ಥರು ಪೊಲೀಸರಿಗೆ ಒಪ್ಪಿಸಿದ್ದಾರೆ.
ಈ ಸಂಬಂಧ ಧಾರವಾಡ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಪ್ರಕರಣ ದಾಖಲಾಗಿದ್ದು, ತನಿಖೆ ಮುಂದುವರೆದಿದೆ.
Last Updated : Nov 30, 2019, 1:37 PM IST