ಹುಬ್ಬಳ್ಳಿ:ಜಿಲ್ಲೆಯ ಇಬ್ಬರು ಅಧಿಕಾರಿಗಳನ್ನು ನಿಯುಕ್ತಿಗೊಳಿಸಿ ರಾಜ್ಯ ಸರ್ಕಾರ ಆದೇಶ ಹೊರಡಿಸಿದೆ.
ಎಸ್ಪಿ ಹುದ್ದೆಗೆ ಬಡ್ತಿ ಪಡೆದ ವಿಜಯಕುಮಾರ ಬಿಸ್ನಳ್ಳಿ, ಎಸ್.ಎಂ.ಸಂದಿಗವಾಡ - Hubli latest news
ಧಾರವಾಡ ಭ್ರಷ್ಟಾಚಾರ ನಿಗ್ರಹ ದಳದ ಡಿವೈಎಸ್ಪಿ ವಿಜಯಕುಮಾರ ಬಿಸ್ನಳ್ಳಿ ಹಾಗೂ ಹುಬ್ಬಳ್ಳಿ - ಧಾರವಾಡ ಕಮಿಷನರೇಟ್ ಸಂಚಾರ ವಿಭಾಗದ ಎಸಿಪಿ ಆಗಿದ್ದ ಎಸ್.ಎಂ.ಸಂದಿಗವಾಡ ಅವರನ್ನು ಪೊಲೀಸ್ ಅಧೀಕ್ಷಕ ಹುದ್ದೆಗೆ ಮುಂಬಡ್ತಿ ನೀಡಿ ರಾಜ್ಯ ಸರ್ಕಾರ ಆದೇಶ ಹೊರಡಿಸಿದೆ.
ಧಾರವಾಡ ಭ್ರಷ್ಟಾಚಾರ ನಿಗ್ರಹ ದಳದ ಡಿವೈಎಸ್ಪಿ ವಿಜಯಕುಮಾರ ಬಿಸ್ನಳ್ಳಿ ಹಾಗೂ ಹುಬ್ಬಳ್ಳಿ - ಧಾರವಾಡ ಕಮಿಷನರೇಟ್ ಸಂಚಾರ ವಿಭಾಗದ ಎಸಿಪಿ ಎಸ್.ಎಂ.ಸಂದಿಗವಾಡ ಅವರನ್ನು ಪೊಲೀಸ್ ಅಧೀಕ್ಷಕ (ಸಿವಿಲ್ ಎಸ್.ಪಿ) ಹುದ್ದೆಗೆ ಮುಂಬಡ್ತಿ ನೀಡಿ ರಾಜ್ಯ ಸರ್ಕಾರ ಆದೇಶ ಹೊರಡಿಸಿದೆ.
ಸಂದಿಗವಾಡ ಅವರಿಗೆ ದಾವಣಗೆರೆ ಎಸಿಬಿ ಎಸ್ಪಿ ಸ್ಥಾನಕ್ಕೆ ಸ್ಥಳ ನಿಯುಕ್ತಿ ಮಾಡಲಾಗಿದೆ. ಆದರೆ, ಅವರು ಇಂದೇ ಸೇವೆಯಿಂದ ನಿವೃತ್ತಿಯಾಗಲಿದ್ದಾರೆ. ಒಂದು ದಿನದ ಮಟ್ಟಿಗೆ ಎಸ್ಪಿಯಾಗಿ ಅವರು ಕಾರ್ಯನಿರ್ವಹಿಸುತ್ತಿರುವುದು ವಿಶೇಷವಾಗಿದೆ. ಅಲ್ಲದೇ ಬಿಸ್ನಳ್ಳಿಯವರಿಗೆ ಸ್ಥಳ ನಿಯುಕ್ತಿ ಆದೇಶದಲ್ಲಿದ್ದಾರೆ.