ಧಾರವಾಡ: ಮಾಜಿ ಸಚಿವ ವಿನಯ್ ಕುಲಕರ್ಣಿ ಅವರ ಸಹೋದರ ವಿಜಯ್ ಕುಲಕರ್ಣಿ ಅವರಿಗೆ ಸಿಬಿಐ ಇವತ್ತು ಇಡೀ ದಿನ ಡ್ರಿಲ್ ನಡೆಸಿದೆ.
ಯೋಗೇಶ್ ಗೌಡ ಕೊಲೆ ಪ್ರಕರಣ: ಸಿಬಿಐ ವಿಚಾರಣೆ ಮುಗಿಸಿ ಬಂದ ವಿಜಯ್ ಕುಲಕರ್ಣಿ - CBI inquiry for Vijay Kulkarni
ಯೋಗೇಶ್ ಗೌಡ ಕೊಲೆ ಪ್ರಕರಣದ ಸಿಬಿಐ ವಿಚಾರಣೆ ಸಂಬಂಧ ಬೆಳಗ್ಗೆಯೇ ಧಾರವಾಡ ಉಪನಗರ ಪೊಲೀಸ್ ಠಾಣೆಗೆ ವಿಚಾರಣೆಗಾಗಿ ಆಗಮಿಸಿದ್ದ ವಿಜಯ್ ಕುಲಕರ್ಣಿ ಸಂಜೆ ಹೊತ್ತಿಗೆ ವಿಚಾರಣೆ ಮುಗಿಸಿ ಹೊರ ಬಂದರು.
ಯೋಗೇಶ್ ಗೌಡ ಕೊಲೆ ಪ್ರಕರಣದ ಸಿಬಿಐ ವಿಚಾರಣೆ ಸಂಬಂಧ ಸುಮಾರು 8 ಗಂಟೆಗಳ ಕಾಲ ವಿಜಯ್ ಕುಲಕರ್ಣಿ ಸಿಬಿಐ ಡ್ರಿಲ್ ಎದುರಿಸಿದ್ದಾರೆ. ಬೆಳಗ್ಗೆಯೇ ಧಾರವಾಡ ಉಪನಗರ ಪೊಲೀಸ್ ಠಾಣೆಗೆ ವಿಚಾರಣೆಗಾಗಿ ಆಗಮಿಸಿದ್ದ ವಿಜಯ್ ಕುಲಕರ್ಣಿ ಸಂಜೆ ಹೊತ್ತಿಗೆ ವಿಚಾರಣೆ ಮುಗಿಸಿ ಹೊರ ಬಂದರು.
ಧಾರವಾಡ ಉಪನಗರ ಠಾಣೆಯಲ್ಲಿ ನಡೆದ ವಿಚಾರಣೆಯಲ್ಲಿ ಬೆಳಗ್ಗೆ 11ಕ್ಕೆ ಒಳ ಹೋಗಿದ್ದ ವಿಜಯ್ ಕುಲಕರ್ಣಿ ಇದೀಗ ಹೊರ ಬಂದರು. ವಿಜಯ ಕುಲಕರ್ಣಿ ಜೊತೆಗೆ ವಿನಯ್ ಸೋದರ ಮಾವ ಚಂದ್ರಶೇಖರ ಇಂಡಿ ಕೂಡ ಹೊರ ಬಂದಿದ್ದಾರೆ. ಮಾತನಾಡಿಸಲು ಪ್ರಯತ್ನಿಸಿದ ಮಾಧ್ಯಮದವರಿಗೆ "ಮ್ಯಾಟರ್ ಇನ್ ದಿ ಕೋರ್ಟ್" ಎಂದು ವಿಜಯ್ ಕುಲಕರ್ಣಿ ಹೊರ ನಡೆದರು.