ಹುಬ್ಬಳ್ಳಿ: ಜಿಲ್ಲಾ ಪಂಚಾಯಿತಿ ಸದಸ್ಯ ಯೋಗೇಶ್ ಗೌಡ ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ಮಾಜಿ ಸಚಿವ ವಿನಯ ಕುಲಕರ್ಣಿ ಬಂಧನದ ಹಿಂದೆ ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ ಕೈವಾಡವಿದೆ ಎಂದು ವಿನಯ ಕುಲಕರ್ಣಿ ಸಹೋದರ ವಿಜಯ್ ಕುಲಕರ್ಣಿ ಆರೋಪಿಸಿದರು.
ವಿನಯ ಕುಲಕರ್ಣಿ ಬಂಧನದ ಹಿಂದೆ ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ ಕೈವಾಡ: ವಿಜಯ್ ಕುಲಕರ್ಣಿ ಆರೋಪ - Brother Vijay Kulkarni react to Vinay Kulkarni Arrest
ಮಾಜಿ ಸಚಿವ ವಿನಯ ಕುಲಕರ್ಣಿ ಬಂಧನದ ಹಿಂದೆ ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ ಕೈವಾಡವಿದೆ. ನಾವಿಬ್ಬರೂ ರಾಜಕೀಯವಾಗಿ ಬಲಿಷ್ಟರಾಗಿರುವ ಕಾರಣ ಈ ರೀತಿ ಮಾಡುತ್ತಿದ್ದಾರೆ. ಲಿಂಗಾಯತ ಮುಖಂಡರು ಬೆಳೆಯಬಾರದೆಂದು ಪ್ರಹ್ಲಾದ್ ಜೋಶಿ ಈ ರೀತಿಯ ಕುತಂತ್ರ ರಾಜಕೀಯ ಮಾಡುತ್ತಿದ್ದಾರೆ ಎಂದು ಕಿಡಿಕಾರಿದರು.
ಈ ಪ್ರಕರಣದಲ್ಲಿ ರಾಜಕೀಯ ಕೈವಾಡವಿದೆ. ಈ ಪ್ರಕರಣದಲ್ಲಿ ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ ಅವರ ಪಾತ್ರವಿದೆ. ನಮ್ಮನ್ನ ರಾಜಕೀಯವಾಗಿ ಮುಗಿಸುವುದಕ್ಕೆ ಈ ರೀತಿ ಕುತಂತ್ರ ಮಾಡುತ್ತಿದ್ದಾರೆ. ಕಾನೂನು ರೀತಿಯಾಗಿ ನಾವು ಹೋರಾಟ ಮಾಡಲಿದ್ದೇವೆ ಎಂದರು.
ಏನೇ ಬಂದರೂ ನಾವು ಎದುರಿಸಲು ಸಿದ್ಧರಿದ್ದೇವೆ. ರಾಜಕೀಯವಾಗಿ ನಮ್ಮನ್ನ ಮುಕ್ತಾಯಗೊಳಿಸಲು ಈ ಪ್ರಕರಣದಲ್ಲಿ ನಮ್ಮನ್ನ ತಳುಕು ಹಾಕಿದ್ದಾರೆ. ಏನೇ ಕುತಂತ್ರ ಮಾಡಿದರೂ ನಾವು ಕಾನೂನು ರೀತಿ ಹೋರಾಟ ನಡೆಸಲಿದ್ದೇವೆ. ನಾವಿಬ್ಬರೂ ರಾಜಕೀಯವಾಗಿ ಬಲಿಷ್ಠರಾಗಿರುವ ಕಾರಣ ಈ ರೀತಿ ಮಾಡುತ್ತಿದ್ದಾರೆ. ಲಿಂಗಾಯತ ಮುಖಂಡರು ಬೆಳೆಯಬಾರದೆಂದು ಪ್ರಹ್ಲಾದ್ ಜೋಶಿ ಈ ರೀತಿಯ ಕುತಂತ್ರ ರಾಜಕೀಯ ಮಾಡುತ್ತಿದ್ದಾರೆ ಎಂದು ಕಿಡಿಕಾರಿದರು.