ನವದೆಹಲಿ: ದಿನಕ್ಕೊಂದು ಹೊಸ ಚಾಲೆಂಜ್ ಟಿಕ್ ಟಾಕ್ ಮೂಲಕ ಸೃಷ್ಟಿಯಾಗುತ್ತಿವೆ. ಇಲ್ಲೊಬ್ಬಳು ಯುವತಿ ದೆಹಲಿ ಸಾರಿಗೆ ನಿಗಮ(ಡಿಟಿಸಿ)ದ ಬಸ್ನೊಳಗೆ ಸಿಬ್ಬಂದಿಯೊಂದಿಗೆ ಮಾಡಿದ ಡ್ಯಾನ್ಸ್ ವಿಡಿಯೋ ಟಿಕ್ಟಾಕ್ನಲ್ಲಿ ವೈರಲ್ ಆಗಿದೆ.
ಈ ವಿಡಿಯೋ ಈಗ ಬಸ್ ಸಿಬ್ಬಂದಿಯನ್ನ ಸಂಕಷ್ಟಕ್ಕೆ ಸಿಲುಕಿಸಿದೆ. ಡಿಟಿಸಿಯ ಹರಿನಗರ ಡಿಪೋದ ಡ್ರೈವರ್, ಕಂಡಕ್ಟರ್ ಹಾಗೂ ಕ್ಲೀನರ್ ಇದೇ ಜುಲೈ 12ರಂದು ಜನಕ್ಪುರಿಯಲ್ಲಿ ಬಸ್ ನಿಲ್ಲಿಸಿದ್ದಾರೆ. ಆಗ ಕಂಡಕ್ಟರ್-ಡ್ರೈವರ್‌ಗೆ ಸ್ನೇಹಿತೆ ಎಂದು ಹೇಳಲಾಗಿರುವ ಯುವತಿಯೊಬ್ಬಳು ಅವರೊಂದಿಗೆ ಡ್ಯಾನ್ಸ್ ಮಾಡುತ್ತಾ ಟಿಕ್ ಟಾಕ್ ವಿಡಿಯೋ ಮಾಡಿದ್ದಾಳೆ. ಈ ವಿಡಿಯೋ ಎಲ್ಲೆಡೆ ವೈರಲ್ ಆಗಿದೆ.