ಹುಬ್ಬಳ್ಳಿ:ಇಲ್ಲಿನ ಹೊಸೂರು ರಾಯ್ಕರ ಮೈದಾನದಲ್ಲಿ ಫೆ.2 ರಂದು ಮಧ್ಯಾಹ್ನ 3 ಗಂಟೆಗೆ ಹು-ಧಾ ಬಿಆರ್ಟಿಎಸ್ ಕಾರಿಡಾರ್ ಯೋಜನೆ ಮತ್ತು ಬಸ್ ನಿಲ್ದಾಣ ಉದ್ಘಾಟನೆ ಸಮಾರಂಭ ನಡೆಯಲಿದ್ದು, ಉಪರಾಷ್ಟ್ರಪತಿ ವೆಂಕಯ್ಯನಾಯ್ಡು ಉದ್ಘಾಟನೆ ಮಾಡಲಿದ್ದು, ಚಿಗರಿ ಬಸ್‌ನಲ್ಲಿ ನವ ನಗರದವರೆಗೆ ಸಂಚಾರ ಮಾಡುವ ಮೂಲಕ ಕಾರಿಡಾರ್ ವೀಕ್ಷಣೆ ಮಾಡಲಿದ್ದಾರೆ.
ಉಪ ರಾಷ್ಟ್ರಪತಿಯಿಂದ ಫೆ. 2 ಕ್ಕೆ ಹು-ಧಾ ಬಿಆರ್ಟಿಎಸ್ ಕಾರಿಡಾರ್ ಯೋಜನೆ ಉದ್ಘಾಟನೆ
ಹೊಸೂರು ರಾಯ್ಕರ ಮೈದಾನದಲ್ಲಿ ಫೆ.2 ರಂದು ಮಧ್ಯಾಹ್ನ 3 ಗಂಟೆಗೆ ಹು-ಧಾ ಬಿಆರ್ಟಿಎಸ್ ಕಾರಿಡಾರ್ ಯೋಜನೆ ಮತ್ತು ಬಸ್ ನಿಲ್ದಾಣ ಉದ್ಘಾಟನೆ ಸಮಾರಂಭ ನಡೆಯಲಿದ್ದು, ಉಪರಾಷ್ಟ್ರಪತಿ ವೆಂಕಯ್ಯನಾಯ್ಡು ಉದ್ಘಾಟನೆ ಮಾಡಲಿದ್ದಾರೆ.
ರಾಯ್ಕರ್ ಗ್ರೌಂಡ್ನಲ್ಲಿ ಸಭಾ ಕಾರ್ಯಕ್ರಮಕ್ಕೆ ಭವ್ಯ ವೇದಿಕೆ ಸಿದ್ದಗೊಂಡಿದ್ದು, ಸಾವಿರಾರು ಜನರು ಪಾಲ್ಗೊಳ್ಳುವ ನಿರೀಕ್ಷೆ ಇದೆ. ಸಭೆಯಲ್ಲಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ, ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ, ಉಪಮುಖ್ಯಮಂತ್ರಿ ಗೋವಿಂದ ಕಾರಜೋಳ, ಲಕ್ಷ್ಮಣ ಸವದಿ ಆಗಮಿಸುತ್ತಿದ್ದು, ಅಧ್ಯಕ್ಷತೆಯನ್ನು ಜಿಲ್ಲಾ ಉಸ್ತುವಾರಿ ಸಚಿವ ಜಗದೀಶ್ ಶೆಟ್ಟರ್ ವಹಿಸಲಿದ್ದಾರೆ.
ಇನ್ನು ಕಾರ್ಯಕ್ರಮದಲ್ಲಿ ಜಿ.ಪಂ. ಅಧ್ಯಕ್ಷೆ ವಿಜಯಲಕ್ಷ್ಮಿ ಪಾಟೀಲ್, ಮುಖ್ಯಮಂತ್ರಿ ಕಾನೂನು ಸಲಹೆಗಾರ ಮೋಹನ ಲಿಂಬಿಕಾಯಿ, ಶಾಸಕರಾದ ಅರವಿಂದ ಬೆಲ್ಲದ, ವಿಧಾನ ಪರಿಷತ್ ಸದಸ್ಯರುಗಳಾದ ಬಸವರಾಜ ಹೊರಟ್ಟಿ, ಎಸ್.ವಿ.ಸಂಕನೂರ ಹಾಗೂ ಜಿಲ್ಲಾಧಿಕಾರಿ ದೀಪಾ ಚೋಳನ್ ಸೇರಿದಂತೆ ಮೊದಲಾದವರು ಭಾಗಿಯಾಗಲಿದ್ದಾರೆ.