ಕರ್ನಾಟಕ

karnataka

ETV Bharat / state

ನಾಳೆ ಹುಬ್ಬಳ್ಳಿಗೆ ಉಪ ರಾಷ್ಟ್ರಪತಿ ಎಂ. ವೆಂಕಯ್ಯನಾಯ್ಡು ಭೇಟಿ - The Hon. Venkayanayodu at hubli

ಹುಬ್ಬಳ್ಳಿಗೆ ನಾಳೆ ಉಪರಾಷ್ಟ್ರಪತಿಗಳಾದ ಎಂ. ವೆಂಕಯ್ಯನಾಯ್ಡು ಅವರು ಭೇಟಿ ನೀಡಲಿದ್ದು, ವಿವಿಧ ಕಾರ್ಯಕ್ರಮಗಳಲ್ಲಿ ಭಾಗವಹಿಸಲಿದ್ದಾರೆ.

Vice President M Venkaiah Naidu
Vice President M Venkaiah NaiduVice President M Venkaiah Naidu

By

Published : Feb 1, 2020, 4:46 PM IST

ಹುಬ್ಬಳ್ಳಿ:ನಾಳೆ (ಫೆ.2) ರಂದು ಹುಬ್ಬಳ್ಳಿಗೆ ಉಪ ರಾಷ್ಟ್ರಪತಿಗಳಾದ ಎಂ. ವೆಂಕಯ್ಯನಾಯ್ಡು ಅವರು ಭೇಟಿ ನೀಡಲಿದ್ದು, ವಿವಿಧ ಕಾರ್ಯಕ್ರಮಗಳಲ್ಲಿ ಭಾಗವಹಿಸಲಿದ್ದಾರೆ.

ಉಪರಾಷ್ಟ್ರಪತಿಗಳ ಕಾರ್ಯಕ್ರಮದ ವಿವರ ಹೀಗಿದೆ.

ಬೆಳಗ್ಗೆ 7 ಗಂಟೆಗೆಹುಬ್ಬಳ್ಳಿ ರೈಲ್ವೆ ಮೈದಾನದಲ್ಲಿಯೋಗ ಗುರು ಬಾಬಾ ರಾಮದೇವ ಅವರ ನೇತೃತ್ವದಲ್ಲಿನಡೆಯುತ್ತಿರುವ ಯೋಗ ಶಿಬಿರದಲ್ಲಿ ಭಾಗವಹಿಸಲಿರುವ ವೆಂಕಯ್ಯ ನಾಯ್ಡು, ಸಾರ್ವಜನಿಕ ಸಭೆಯನ್ನುದ್ದೇಶಿಸಿ ಮಾತನಾಡಲಿದ್ದಾರೆ.

ನಂತರ ಬೆಳಗ್ಗೆ 7.35 ಕ್ಕೆ ಸರ್ಕ್ಯೂಟ್ ಹೌಸ್ ತಲುಪಿ, ಬೆಳಗ್ಗೆ 10 ಗಂಟೆಗೆ ಕರ್ನಾಟಕ ರೈತ ಸೇನೆಯ ನಿಯೋಗವನ್ನು ಭೇಟಿ ಮಾಡಲಿದ್ದಾರೆ. ನಂತರ 10:50 ಕ್ಕೆ ದೇಶಪಾಂಡೆ ಕೌಶಲ್ಯ ಅಭಿವೃದ್ಧಿ ಕೇಂದ್ರ ತಲುಪಲಿರುವ ಉಪರಾಷ್ಟ್ರಪತಿಗಳು, ಬೆಳಗ್ಗೆ 11 ಗಂಟೆಯಿಂದ ಮಧ್ಯಾಹ್ನ 12 ಗಂಟೆಯವರೆಗೆ ದೇಶಪಾಂಡೆ ಫೌಂಡೇಶನ್​ನ ವಾರ್ಷಿಕ ಕಾರ್ಯಕ್ರಮದಲ್ಲಿ ಭಾಗವಹಿಸುವರು.

ತದನಂತರ ಮಧ್ಯಾಹ್ನ 12:15 ಕ್ಕೆ ಸರ್ಕ್ಯೂಟ್ ಹೌಸ್​ಗೆ ತೆರಳಲಿದ್ದಾರೆ. ಮಧ್ಯಾಹ್ನ 2:30 ಕ್ಕೆ ಹೊಸೂರ, ಬಿಆರ್​ಟಿಎಸ್ ಪ್ರಾದೇಶಿಕ ಬಸ್ ನಿಲ್ದಾಣದಲ್ಲಿ ಬಸ್ ನಿಲ್ದಾಣ ಉದ್ಘಾಟಿಸಿ, ನಂತರ ಚಿಗರಿ ಬಸ್​ಗಳಿಗೆ ಹಸಿರು ನಿಶಾನೆ ತೋರುವರು.

ಮಧ್ಯಾಹ್ನ 2:50ಕ್ಕೆ ಚಿಗರಿ ಬಸ್ ಮೂಲಕ ನವನಗರ ನಿಲ್ದಾಣಕ್ಕೆ ತೆರಳುವರು. ಮಧ್ಯಾಹ್ನ 3 ಗಂಟೆಯಿಂದ ಸಂಜೆ 4 ರವರೆಗೆ ಹೊಸೂರ ಪ್ರಾದೇಶಿಕ ಬಸ್ ನಿಲ್ದಾಣದ ಬಳಿ ನಡೆಯುವ ಸಾರ್ವಜನಿಕ ಕಾರ್ಯಕ್ರಮದಲ್ಲಿ ಭಾಗವಹಿಸಿ, ಸಂಜೆ 4. 20 ಕ್ಕೆ ವಿಶೇಷ ವಿಮಾನದ ಮೂಲಕ ದೆಹಲಿಗೆ ಮರು ಪ್ರಯಾಣ ಬೆಳೆಸಲಿದ್ದಾರೆ.

ABOUT THE AUTHOR

...view details