ಹುಬ್ಬಳ್ಳಿ: ರಾಜ್ಯದಿಂದ ಆಯ್ಕೆಯಾದ ಲೋಕಸಭಾ ಸಂಸದರಿಂದ ರಾಜ್ಯ ಅಭಿವೃದ್ಧಿಯಾಗುತ್ತಿಲ್ಲ ಎಂದು ಆರೋಪಿಸಿ ಲೋಕಸಭಾ ಸಂಸದರನ್ನು ಹರಾಜು ಹಾಕುವುದರ ಮೂಲಕ ವಾಟಾಳ್ ನಾಗಾರಾಜ್ ನಗರದ ಚನ್ನಮ್ಮ ವೃತ್ತದಲ್ಲಿ ವಿನೂತನವಾಗಿ ಪ್ರತಿಭಟನೆ ನಡೆಸಿದರು.
ಉತ್ತರ ಕರ್ನಾಟಕ ಪ್ರವಾಹ, ಅತಿವೃಷ್ಠಿ, ಅನಾವೃಷ್ಠಿಯಿಂದ ತತ್ತರಿಸಿದೆ. ಉತ್ತರ ಕರ್ನಾಟಕವನ್ನು ರಾಜ್ಯ ಸರ್ಕಾರ ಮತ್ತು ಲೋಕಸಭಾ ಸಂಸದರು ಅಭಿವೃದ್ಧಿ ಮಾಡುತ್ತಿಲ್ಲ ಎಂದು ಆರೋಪಿಸಿ ಹರಾಜು ಹಾಕಿ ಪ್ರತಿಭಟಿಸಿದರು.
ಸಂಸದರನ್ನು ಹರಾಜು ಹಾಕಿ ವಾಟಾಳ್ ಪ್ರತಿಭಟನೆ ಈ ಹರಾಜು ಪ್ರಕ್ರಿಯೆಯಲ್ಲಿ ನಿರ್ಮಲಾ ಸೀತಾರಾಮನ್ ಭಾವಚಿತ್ರ 5 ರೂಪಾಯಿ ಹಾಗೂ ಕೊಪ್ಪಳ ಸಂಸದ ಕರಡಿ ಸಂಗಣ್ಣ 1 ರೂಪಾಯಿಗೆ ಬಿಕರಿಯಾಗಿದ್ದಾರೆ. ಉಳಿದಂತೆ ಯಾವೊಬ್ಬ ಸಂಸದರನ್ನು ಜನರು ಖರೀದಿ ಮಾಡಲಿಲ್ಲ. ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸಿತಾರಾಮನ್ ಅವರನ್ನು ಎನ್.ಎಚ್ ಪಾಟೀಲ್ ಎಂಬುವವರು 5 ರೂಪಾಯಿಗೆ ಖರೀದಿ ಮಾಡಿದರೆ, ಕರಡಿ ಸಂಗಣ್ಣ ಅವರನ್ನು ಬಾಲಕನೊಬ್ಬ 1 ರೂಪಾಯಿ ನೀಡಿ ಖರೀದಿಸಿದ್ದು ಕಂಡುಬಂತು.
ಉಳಿದಂತೆ ಕೇಂದ್ರ ಸಚಿವ ಹಾಗೂ ಧಾರವಾಡ ಸಂಸದ ಪ್ರಹ್ಲಾದ ಜೋಶಿ, ಸದಾನಂದ ಗೌಡ, ಜಿ.ಎಂ.ಸಿದ್ದೇಶ್ವರ್, ಬಿ.ವೈ. ರಾಘವೇಂದ್ರ, ತೇಜಸ್ವಿ ಸೂರ್ಯ, ದೇವೆಂದ್ರೆಪ್ಪ, ಅಣ್ಣಾ ಸಾಹೇಬ್ ಜೊಲ್ಲೆ, ಪ್ರತಾಪ್ ಸಿಂಹ, ತುಮಕೂರು ಸಂಸದ ಬಸವರಾಜು, ಬಿ.ಡಿ ನಾಯಕ, ಭಗವಂತ ಖೂಬಾ, ಡಿ.ಕೆ. ಸುರೇಶ್, ಪಿ.ಸಿ.ಗದ್ದಿಗೌಡರ, ಸುಮಲತಾ ಅಂಬರೀಶ್, ಶಿವಕುಮಾರ್ ಉದಾಸಿ, ಪ್ರಜ್ವಲ್ ರೇವಣ್ಣ, ನಳಿನ ಕುಮಾರ್ ಕಟೀಲ್, ಪಿ.ಸಿ. ಮೋಹನ್, ಬಿ.ಎನ್.ಬಚ್ಚೇಗೌಡ, ಶ್ರೀನಿವಾಸ ಪ್ರಸಾದ, ಶೋಭಾ ಕರಂದ್ಲಾಜೆ, ರಮೇಶ ಜಿಗಜಿಣಗಿ, ನಾರಾಯಣ ಸ್ವಾಮಿ ಈ ಸಂಸದರನ್ನು ಯಾರು ಖರೀದಿಸಲು ಮುಂದಾಗಿರಲಿಲ್ಲ.