ಕರ್ನಾಟಕ

karnataka

ETV Bharat / state

ತೀರ್ಥ,ಪ್ರಸಾದದ ಬದಲಿಗೆ ವ್ಯಾಕ್ಸಿನ್ : ವಾಣಿಜ್ಯನಗರಿಯಲ್ಲೊಂದು ವಿಶಿಷ್ಟ ಜಾಗೃತಿ! - hubli latest nws

ಹುಬ್ಬಳ್ಳಿ-ಧಾರವಾಡ ಮಹಾನಗರ ಪಾಲಿಕೆಯ ಚಿಟಗುಪ್ಪಿ ಆಸ್ಪತ್ರೆಯ ನೇತೃತ್ವದಲ್ಲಿ ಈ ಕಾರ್ಯ ಮಾಡಲಾಗಿದೆ. ಭಕ್ತರು ಲಸಿಕೆ ಹಾಕಿಸಿಕೊಂಡು ಧಾರ್ಮಿಕ ಕಾರ್ಯದಲ್ಲಿ ಭಾಗಿಯಾಗಿದ್ದಾರೆ.

vaccine-to-people-instead-of-prasad-in-ganesh-festival
ತೀರ್ಥ,ಪ್ರಸಾದದ ಬದಲಿಗೆ ವ್ಯಾಕ್ಸಿನ್

By

Published : Sep 14, 2021, 5:03 PM IST

ಹುಬ್ಬಳ್ಳಿ: ಇಷ್ಟು ದಿನಗಳ ಕಾಲ ಗಣೇಶೋತ್ಸವದಲ್ಲಿ ತೀರ್ಥ ಪ್ರಸಾದ ವಿತರಣೆ ಮಾಡಲಾಗುತ್ತಿತ್ತು. ಆದರೆ, ಕಿಲ್ಲರ್ ಕೊರೊನಾ ವೈರಸ್ ಬಂದಿದ್ದೆ ಬಂದಿದ್ದು, ಆಚರಣೆಗಳೆಲ್ಲವೂ ಅದಲು ಬದಲು ಆಗಿವೆ.

ತೀರ್ಥ,ಪ್ರಸಾದದ ಬದಲಿಗೆ ವ್ಯಾಕ್ಸಿನ್

ವಾಣಿಜ್ಯನಗರಿ ಹುಬ್ಬಳ್ಳಿಯ ಶ್ರೀಕೃಷ್ಣ ನಗರದಲ್ಲಿ ಗಣೇಶ ಚತುರ್ಥಿ ಅಂಗವಾಗಿ ಭಕ್ತರಿಗೆ ಹಾಗೂ ಗಣೇಶ ಮಂಡಳಿಯವರಿಗೆ ಲಸಿಕೆ ಹಾಕಲಾಗಿದೆ. ಈ ಮೂಲಕ ಮೂರ್ತಿ ವಿಸರ್ಜನೆಗೆ ಹೋಗುವವರಿಗೆ ಹಾಗೂ ದರ್ಶನಕ್ಕೆ ಬರುವವರಿಗೆ ಕೊರೊನಾ ವೈರಸ್ ವಿರುದ್ಧ ಹೋರಾಟ ನಡೆಸಲು ವ್ಯಾಕ್ಸಿನ್ ಅಭಿಯಾನ ಕೈಗೊಳ್ಳಲಾಯಿತು.

ಹುಬ್ಬಳ್ಳಿ-ಧಾರವಾಡ ಮಹಾನಗರ ಪಾಲಿಕೆಯ ಚಿಟಗುಪ್ಪಿ ಆಸ್ಪತ್ರೆಯ ನೇತೃತ್ವದಲ್ಲಿ ಈ ಕಾರ್ಯ ಮಾಡಲಾಗಿದೆ. ಭಕ್ತರು ಲಸಿಕೆ ಹಾಕಿಸಿಕೊಂಡು ಧಾರ್ಮಿಕ ಕಾರ್ಯದಲ್ಲಿ ಭಾಗಿಯಾಗಿದ್ದಾರೆ.

ABOUT THE AUTHOR

...view details