ಕರ್ನಾಟಕ

karnataka

ETV Bharat / state

ಅಕಾಲಿಕ ಮಳೆ ತಂದ ಆಪತ್ತು: ಕುಂದಗೋಳದಲ್ಲಿ 34.682 ಹೆಕ್ಟೇರ್​ ಬೆಳೆ ನಾಶ - Kundagola crop demolished survey

ಅಕಾಲಿಕ ಮಳೆಯ ಪರಿಣಾಮ ಹುಬ್ಬಳ್ಳಿಯ ಕುಂದಗೋಳ ತಾಲೂಕು ಒಂದರಲ್ಲೇ 34.682 ಹೆಕ್ಟೇರ್​ ಬೆಳೆ ನಾಶವಾಗಿದೆ.

unseasonal rain demolishes 34.682 hectares crop  in Kundagola
34.682 ಹೆಕ್ಟೇರ್​ ಬೆಳೆ ನಾಶ

By

Published : Nov 23, 2021, 7:58 PM IST

ಹುಬ್ಬಳ್ಳಿ:ಅಕಾಲಿಕ ಮಳೆಯ ಆರ್ಭಟಕ್ಕೆ ರೈತರ ಬದುಕು ಅಕ್ಷರಶಃ ಮೂರಾಬಟ್ಟೆಯಾಗಿದ್ದು, ಒಂದೆಡೆ ಕೃಷಿ ಭೂಮಿ ಜಲಾವೃತವಾಗಿ ಬೆಳೆ ನಾಶವಾಗಿದ್ರೆ, ಅದೆಷ್ಟೋ ಮನೆಗಳು ಧರೆಗುರುಳಿವೆ.

ಕುಂದಗೋಳ ತಾಲೂಕಿನ ಬೆಣ್ಣೆ ಹಳ್ಳದ ಸುತ್ತಮುತ್ತ ಸೇರಿದಂತೆ 57 ಹಳ್ಳಿಗಳಲ್ಲೂ ಮಹಾಮಳೆ ಸುರಿದಿದೆ. ಕುಂದಗೋಳ ಹೋಬಳಿ ವ್ಯಾಪ್ತಿಯಲ್ಲಿನ ಹಳ್ಳಿಗಳಲ್ಲಿ ನ.22ರ ದಾಖಲೆ ಅನುಸಾರ, 148 ವಾಸದ ಮನೆಗಳಿಗೆ ಹಾನಿಯಾಗಿದೆ. ಸಂಶಿ ಹೋಬಳಿ ಮಟ್ಟದ ಹಳ್ಳಿಗಳಲ್ಲಿ 132 ಮನೆಗಳು ಬಿದ್ದಿವೆ.

ಅಕಾಲಿಕ ಮಳೆಯಿಂದ 34.682 ಹೆಕ್ಟೇರ್​ ಬೆಳೆ ನಾಶ.. ರೈತರು ಕಂಗಾಲು

ಕೃಷಿ ಅಧಿಕಾರಿಗಳು ಹಾಗೂ ಕಂದಾಯ ಅಧಿಕಾರಿಗಳ ಜಂಟಿ ಸರ್ವೆ ಪ್ರಕಾರ ಒಟ್ಟು 34.682 ಹೆಕ್ಟೇರ್ ಕೃಷಿ ಭೂಮಿ ಮಳೆಗೆ ಹಾನಿಯಾಗಿದೆ. ಆ ಪೈಕಿ 4300 ಹೆಕ್ಟೇರ್ ಮೆಣಸಿನಕಾಯಿ, 10.500 ಹೆಕ್ಟೇರ್ ಹತ್ತಿ, 10.252 ಹೆಕ್ಟೇರ್ ಕಡಲೆ, 2771 ಹೆಕ್ಟೇರ್ ಗೋಧಿ, 647 ಹೆಕ್ಟೇರ್ ಕುಸುಬೆ, 3987 ಹೆಕ್ಟೇರ್ ಹಿಂಗಾರು ಜೋಳ, 2100 ಹೆಕ್ಟೇರ್ ಗೋವಿನಜೋಳ, 120 ಹೆಕ್ಟೇರ್ ಭತ್ತದ ಬೆಳೆ ಹಾನಿಯಾದ ಬಗ್ಗೆ ಈಗಾಗಲೇ ಸರ್ಕಾರಕ್ಕೆ ದಾಖಲೆ ಸಲ್ಲಿಸಿರುವ ಅಧಿಕಾರಿಗಳು ಸರ್ವೇ ಕಾರ್ಯ ಮುಂದುವರಿಸಿದ್ದಾರೆ.

ಇದನ್ನೂ ಓದಿ:ಜಲಾವೃತವಾದ ಬೆಂಗಳೂರು ಕೇಂದ್ರೀಯ ವಿಹಾರ ಅಪಾರ್ಟ್​ಮೆಂಟ್.. 3 ಸಾವಿರಕ್ಕೂ ಹೆಚ್ಚು ನಿವಾಸಿಗಳಿಗೆ 3 ದಿನದಿಂದ ನರಕಯಾತನೆ

ABOUT THE AUTHOR

...view details