ಹುಬ್ಬಳ್ಳಿ: ಪೆಟ್ರೋಲ್ ಬಂಕ್ನಲ್ಲಿ ಲಾರಿ ಚಾಲಕನೊಬ್ಬನಿಗೆ ತಲ್ವಾರ್ ಹಾಗೂ ರಾಡಿನಿಂದ ಇರಿದು ದುಷ್ಕರ್ಮಿಗಳು ಪರಾರಿಯಾಗಿರುವ ಘಟನೆ ತಾಲೂಕಿನ ಅಂಚಟಗೇರಿ ಬಳಿ ನಡೆದಿದೆ.
ಪೆಟ್ರೋಲ್ ಬಂಕ್ನಲ್ಲಿ ತಲ್ವಾರ್ನಿಂದ ಲಾರಿ ಚಾಲಕನ ಮೇಲೆ ಹಲ್ಲೆ: ಆಸ್ಪತ್ರಗೆ ದಾಖಲು - ಹುಬ್ಬಳ್ಳಿಯಲ್ಲಿ ಲಾರಿ ಚಾಲಕನ ಮೇಲೆ ಹಲ್ಲೆ
ಹುಬ್ಬಳ್ಳಿ ತಾಲೂಕಿನ ಅಂಚಟಗೇರಿಯ ಪೆಟ್ರೋಲ್ ಬಂಕ್ನಲ್ಲಿ ಲಾರಿ ಚಾಲಕನ ಮೇಲೆ ಕಿಡಿಗೇಡಿಗಳು ತಲ್ವಾರ್ನಿಂದ ಹಲ್ಲೆ ಮಾಡಿ ಪರಾರಿಯಾಗಿದ್ದಾರೆ.
![ಪೆಟ್ರೋಲ್ ಬಂಕ್ನಲ್ಲಿ ತಲ್ವಾರ್ನಿಂದ ಲಾರಿ ಚಾಲಕನ ಮೇಲೆ ಹಲ್ಲೆ: ಆಸ್ಪತ್ರಗೆ ದಾಖಲು Unknown persons attacked lorry driver with talwar](https://etvbharatimages.akamaized.net/etvbharat/prod-images/768-512-14078564-thumbnail-3x2-bngjpg.jpg)
ಹುಬ್ಬಳ್ಳಿಯಲ್ಲಿ ಲಾರಿ ಚಾಲಕನ ಮೇಲೆ ತಲ್ವಾರ್ನಿಂದ ಹಲ್ಲೆ
ಅಂಚಟಗೇರಿಯ ಪರಶುರಾಮ ಪೆಟ್ರೋಲ್ ಬಂಕ್ ಸಮೀಪ ದುರ್ಘಟನೆ ಸಂಭವಿಸಿದ್ದು, ಸುನೀಲ ಚೆಲವರಂ ಎಂಬ ಸರ್ದಾರಜಿಗೆ ಹೊಡೆದು ಹಣವನ್ನು ದೋಚಿ ಪರಾರಿಯಾಗಿದ್ದಾರೆ. ಆದರೆ ಯಾವ ಕಾರಣಕ್ಕೆ ಹಲ್ಲೆ ನಡೆಸಲಾಗಿದೆ ಎಂಬುದರ ಕುರಿತಂತೆ ಮಾಹಿತಿ ಲಭ್ಯವಾಗಿಲ್ಲ.
ಘಟನೆಯಲ್ಲಿ ರಕ್ತಸ್ರಾವದಿಂದ ಬಳಲುತ್ತಿದ್ದ ಗಾಯಾಳುವನ್ನು ಹುಬ್ಬಳ್ಳಿಯ ಕಿಮ್ಸ್ಗೆ ದಾಖಲಿಸಲಾಗಿದ್ದು, ಈ ಕುರಿತು ಹುಬ್ಬಳ್ಳಿ ಗ್ರಾಮೀಣ ಪೊಲೀಸರು ತನಿಖೆ ಕೈಗೊಂಡಿದ್ದಾರೆ.