ಕರ್ನಾಟಕ

karnataka

ETV Bharat / state

ಇಷ್ಟು ಸಣ್ಣ ವಿಷಯಕ್ಕೆ ತಂದೆ-ಮಗನ ಮೇಲೆ ಚಾಕು ಇರಿತ.. - ಹುಬ್ಬಳ್ಳಿ ಕ್ರೈಮ್​ ಲೆಟೆಸ್ಟ್ ನ್ಯೂಸ್

ಪಂಚರ್ ಅಂಗಡಿಗೆ ಬಂದ ಇಬ್ಬರು ವ್ಯಕ್ತಿಗಳು ಪಂಚರ್​ ತೆಗೆದು ಕೊಡಲಿಲ್ಲ ಎಂದು ಅಂಗಡಿಯಲ್ಲಿದ್ದ ತಂದೆ ಹಾಗೂ ಮಗನ ಮೇಲೆ ಚಾಕುವಿನಿಂದ ಹಲ್ಲೆ ನಡೆಸಿರುವ ಘಟನೆ ನಗರದಲ್ಲಿ ನಡೆದಿದೆ.

Unknown persons attacked a father and son at Hubli
ಕ್ಷುಲ್ಲಕ ಕಾರಣಕ್ಕೆ ತಂದೆ -ಮಗನ ಮೇಲೆ ಚಾಕು ಇರಿತ

By

Published : Feb 3, 2020, 7:32 PM IST

ಹುಬ್ಬಳ್ಳಿ:ಯುವಕರ ಗುಂಪೊಂದು ಕ್ಷುಲಕ ಕಾರಣಕ್ಕೆ ತಂದೆ ಮತ್ತು ಮಗನ ಮೇಲೆ ಹಲ್ಲೆ ಮಾಡಿ ಪರಾರಿಯಾದ ಘಟನೆ ಮಂಟೂರ ರಸ್ತೆಯ ಕಸ್ತೂರ ಬಾ ನಗರದಲ್ಲಿ ನಡೆದಿದೆ.

ಹಲ್ಲೆಗೊಳಗಾಗಿ ಚಿಕಿತ್ಸೆ ಪಡೆಯುತ್ತಿರುವ ತಂದೆ ಹಾಗೂ ಮಗ..

ಫುಡ್​ ಇನ್‌ಸ್ಪೆಕ್ಟರ್​ ಎ ಎ ಕತಿಬ್ (48), ಇವರ ಮಗ ಸಯ್ಯದ್ ಮಹಮ್ಮದ್ ಅದ್ನಾನ್ (20) ಹಲ್ಲೆಗೊಳಗಾದವರು. ಇವರು ಪಂಚರ್ ಅಂಗಡಿ ನಡೆಸುತ್ತಿದ್ದಾರೆ. ನಿನ್ನೆ ಅಂಗಡಿಗೆ ಬಂದ ಫಸಲ್ ಪುಣೆವಾಲೆ, ಮೋಸಿನ್ ಥಾಸ್ ವಾಲೆ ಎಂಬುವರು ಪಂಚರ್​ ತೆಗೆದು ಕೊಡುವಂತೆ ಕೇಳಿದ್ದಾರೆ. ಆದರೆ, ಇಂದು ಅಂಗಡಿಗೆ ರಜೆ ಇದೆ. ಪಂಚರ್ ​ತೆಗೆಯುವುದಿಲ್ಲ ಎಂದಿದ್ದಾರೆ. ಇದಕ್ಕೆ ಕೋಪಗೊಂಡ ಅವರಿಬ್ಬರು, ಐದಾರು ಜನರನ್ನು ಕರೆದು ಸಯ್ಯದ್ ಮತ್ತು ಆತನ ಮಗನ ಮೇಲೆ ಚಾಕುವಿನಿಂದ ಹಲ್ಲೆ ಮಾಡಿದ್ದಾರೆ.

ಹಲ್ಲೆಯಲ್ಲಿ ಸಯ್ಯದ್​​ ಮುಖ ಹಾಗೂ ಎಡ ಭಾಗದಲ್ಲಿ ಸಣ್ಣ ಪುಟ್ಟ ಗಾಯಗಳಾಗಿವೆ. ಕತಿಬ್​​ ಬೆನ್ನಿಗೆ, ಕೈ ಬೆರಳುಗಳು, ತಲೆಗೆ ಗಂಭೀರ ಗಾಯವಾಗಿವೆ. ಗಾಯಾಳುಗಳನ್ನ ಕಿಮ್ಸ್ ಆಸ್ಪತ್ರೆಯಲ್ಲಿ ಚಿಕಿತ್ಸೆಗಾಗಿ ದಾಖಲಿಸಲಾಗಿದೆ. ಈ ಕುರಿತು ಬೆಂಡಿಗೇರಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಪೊಲೀಸರು ತನಿಖೆ ಕೈಗೊಂಡಿದ್ದಾರೆ.

ABOUT THE AUTHOR

...view details