ಧಾರವಾಡ: ಜನರು ಮನೆಯೊಳಗೆ ಇದ್ದಾಗಲೇ ಯಾರೋ ಕಿಡಿಗೇಡಿಗಳು ಹೊರಗಿನಿಂದ ಬೀಗ ಹಾಕಿ ಪರಾರಿಯಾದ ಘಟನೆ ಧಾರವಾಡದ ಆಕಾಶವಾಣಿ ಸಿಬ್ಬಂದಿ ಕಾಲೋನಿಯಲ್ಲಿ ನಡೆದಿದೆ.
ಧಾರವಾಡ ಕೆಸಿಡಿ ಕಾಲೇಜ್ ಬಳಿ ಇರುವ ಆಕಾಶವಾಣಿ ಸಿಬ್ಬಂದಿ ಕಾಲೋನಿಯಲ್ಲಿ ಮನೆ ಮಾಲೀಕರು ಒಳಗಡೆ ಮಲಗಿದ್ದಾಗ ಹೊರಗಡೆಯಿಂದ ಯಾರೋ ಬೀಗ ಹಾಕಿಕೊಂಡು ಹೋಗಿದ್ದಾರೆ. ಸುಮಾರು 8 ಮನೆಗಳಿಗೆ ಬೀಗ ಜಡಿದಿದ್ದು, ಕಳ್ಳತನ ಮಾಡಲು ಬಂದು ಹೀಗೆ ಮಾಡಿರಬಹುದು ಎಂಬ ಶಂಕೆ ವ್ಯಕ್ತವಾಗಿದೆ.