ಕರ್ನಾಟಕ

karnataka

ETV Bharat / state

ಉಣಕಲ್ ಕೆರೆಯಲ್ಲಿ ಅಪರಿಚಿತ ವ್ಯಕ್ತಿ ಶವ ಪತ್ತೆ.. - ಶವ ಪತ್ತೆ

ಇದು ಕೊಲೆಯೋ ಅಥವಾ ಆತ್ಮಹತ್ಯೆಯೋ ಎಂಬುದರ ಬಗ್ಗೆ ಪೊಲೀಸರು ತನಿಖೆ ನಡೆಸುತ್ತಿದ್ದಾರೆ..

body found
ಶವ ಪತ್ತೆ

By

Published : Dec 16, 2020, 1:00 PM IST

ಹುಬ್ಬಳ್ಳಿ :ನಗರದ ಉಣಕಲ್ ಕೆರೆಯಲ್ಲಿ ಅಪರಿಚಿತ ವ್ಯಕ್ತಿಯ ಶವ ಪತ್ತೆಯಾಗಿದೆ. ಸುಮಾರು 25-30 ವರ್ಷದ ಆಸುಪಾಸು ವ್ಯಕ್ತಿಯ ಶವ ಕೆರೆಯಲ್ಲಿ ತೇಲಾಡುವುದನ್ನು ನೋಡಿದ ಜನರು ಆತಂಕಗೊಂಡಿದ್ದರು.

ಯುವಕನ ಶವವನ್ನ ನೋಡಿದ ವಾಕಿಂಗ್ ಮಾಡುವವರು ಗಾಬರಿಯಾಗಿ ವಿದ್ಯಾನಗರ ಠಾಣೆ ಪೊಲೀಸರಿಗೆ ಮಾಹಿತಿ ನೀಡಿದ್ದಾರೆ.

ಕೆರೆಯಲ್ಲಿ ತೇಲುತ್ತಿದ್ದ ಯುವಕನ ಶವದ ಬಗ್ಗೆ ಮಾಹಿತಿ ಪಡೆದ ತಕ್ಷಣವೇ ಸ್ಥಳಕ್ಕೆ ಆಗಮಿಸಿರುವ ವಿದ್ಯಾನಗರ ಠಾಣೆಯ ಪೊಲೀಸರು, ಶವವನ್ನ ಹೊರಗೆ ತೆಗೆದಿದ್ದು, ಕಿಮ್ಸ್ ಶವಾಗಾರಕ್ಕೆ ಮೃತದೇಹ ರವಾನಿಸಿದ್ದಾರೆ.

ಇದು ಕೊಲೆಯೋ ಅಥವಾ ಆತ್ಮಹತ್ಯೆಯೋ ಎಂಬುದರ ಬಗ್ಗೆ ಪೊಲೀಸರು ತನಿಖೆ ನಡೆಸುತ್ತಿದ್ದಾರೆ.

ಓದಿ...ಹತ್ಯೆಗೆ ಸ್ಕೆಚ್ ಹಾಕುವ ಬದಲು ಸ್ವಲ್ಪ ವಿಷ ನೀಡಿದ್ರೆ ಆಗ್ತಿತ್ತು ..

ABOUT THE AUTHOR

...view details