ಹುಬ್ಬಳ್ಳಿ:ಕೇಂದ್ರ ಸರ್ಕಾರ ಜಾರಿಗೊಳಿಸಿರುವ ಪೌರತ್ವ ಕಾಯ್ದೆ ದಲಿತ ವಿರೋಧಿಯಲ್ಲ ಎಂಬುವುದನ್ನು ಈಗ ಪ್ರಗತಿಪರ ದಲಿತ ಒಕ್ಕೂಟವೇ ಒಪ್ಪಿಕೊಂಡು ಪ್ರಧಾನಿಯವರಿಗೆ ಅಭಿನಂದನೆ ಸಲ್ಲಿಸುತ್ತಿದೆ. ಸಿಎಎ ಹಾಗೂ ಎನ್ಆರ್ಸಿ ಕಾಯ್ದೆಯ ಬಗ್ಗೆ ದಲಿತರನ್ನು ದಾರಿ ತಪ್ಪಿಸುತ್ತಿರುವುದಕ್ಕೆ ಈಗ ದಲಿತ ಮುಖಂಡರು ತಕ್ಕ ಉತ್ತರ ನೀಡಿದ್ದಾರೆ ಎಂದು ಕೇಂದ್ರ ಸಚಿವ ಪ್ರಲ್ಹಾದ್ ಜೋಶಿ ತಿಳಿಸಿದ್ದಾರೆ.
ಪೌರತ್ವ (ತಿದ್ದುಪಡಿ) ದಲಿತ ವಿರೋಧಿಯಲ್ಲ ಎಂದು ದಲಿತ ಒಕ್ಕೂಟವೇ ಒಪ್ಪಿದೆ: ಪ್ರಲ್ಹಾದ್ ಜೋಶಿ - ಕೇಂದ್ರ ಸಚಿವ ಪ್ರಲ್ಹಾದ್ ಜೋಷಿ
ಕೇಂದ್ರ ಸರ್ಕಾರ ಜಾರಿಗೊಳಿಸಿರುವ ಪೌರತ್ವ (ತಿದ್ದುಪಡಿ) ದಲಿತ ವಿರೋಧಿಯಲ್ಲ ಎಂಬುದನ್ನು ಈಗ ಪ್ರಗತಿಪರ ದಲಿತ ಒಕ್ಕೂಟವೇ ಒಪ್ಪಿಕೊಂಡು ಪ್ರಧಾನಿಯವರಿಗೆ ಅಭಿನಂದನೆ ಸಲ್ಲಿಸುತ್ತಿದೆ ಕೇಂದ್ರ ಸಚಿವ ಎಂದು ಪ್ರಲ್ಹಾದ್ ಜೋಶಿ ತಿಳಿಸಿದರು.
![ಪೌರತ್ವ (ತಿದ್ದುಪಡಿ) ದಲಿತ ವಿರೋಧಿಯಲ್ಲ ಎಂದು ದಲಿತ ಒಕ್ಕೂಟವೇ ಒಪ್ಪಿದೆ: ಪ್ರಲ್ಹಾದ್ ಜೋಶಿ Union Minister Pralhad Joshi](https://etvbharatimages.akamaized.net/etvbharat/prod-images/768-512-6059141-thumbnail-3x2-net.jpg)
ನಗರದಲ್ಲಿ ಆಯೋಜಿಸಲಾಗಿದ್ದ ಸಿಎಎ ಅಭಿನಂದನಾ ರ್ಯಾಲಿಯಲ್ಲಿ ಭಾಗವಹಿಸಿ ಮಾತನಾಡಿದ ಅವರು, ಕೆಲವರು ಸಿಎಎ ಕಾಯ್ದೆ ಮುಸ್ಲಿಂ ಹಾಗೂ ದಲಿತ ವಿರೋಧಿಯೆಂದು ಸುಳ್ಳು ಸುದ್ದಿ ಹಬ್ಬಿಸುವ ಮೂಲಕ ಜನರಲ್ಲಿ ಕೋಮುವಾದ ಸೃಷ್ಟಿಸುವ ಕಾರ್ಯ ಮಾಡುತ್ತಿದ್ದರು. ಆದರೆ ಪೌರತ್ವ ತಿದ್ದುಪಡಿ ಕಾಯ್ದೆ ದೇಶ ವಿರೋಧಿ ನೀತಿಯಲ್ಲ ಎಂದು ಜನರು ಒಪ್ಪಿಕೊಂಡು ಪ್ರಧಾನಮಂತ್ರಿ ನರೇಂದ್ರ ಮೋದಿಯವರಿಗೆ ಅಭಿನಂದನಾ ಪತ್ರ ಬರೆದಿರುವುದು ಸ್ವಾಗತಾರ್ಹ ಎಂದರು.
ದೆಹಲಿ ಚುನಾವಣೆಯಲ್ಲಿ ಬಿಜೆಪಿಗೆ ಸ್ವಲ್ಪಮಟ್ಟಿಗೆ ಹಿನ್ನೆಡೆಯಾಗಿದೆ ನಿಜ. ಆದರೆ ಕಾಂಗ್ರೆಸ್ ಪಕ್ಷವನ್ನು ಜನರು ದೆಹಲಿಯಿಂದಲೇ ವಾಷ್ ಔಟ್ ಮಾಡಿದ್ದಾರೆ. ಹಾಗೆಯೇ ದೇಶದಿಂದಲೂ ಕಾಂಗ್ರೆಸ್ ವಾಷ್ ಔಟ್ ಆಗಲಿದೆ ಎಂದು ಅವರು ಕಾಂಗ್ರೆಸ್ ವಿರುದ್ಧ ವಾಗ್ದಾಳಿ ನಡೆಸಿದರು.