ಕರ್ನಾಟಕ

karnataka

ETV Bharat / state

ಹೊರಟ್ಟಿ ಬಿಜೆಪಿ ಸೇರ್ಪಡೆ ವಿಚಾರ: ಸೂಕ್ತ ಸಮಯದಲ್ಲಿ ಸೂಕ್ತವಾದ ನಿರ್ಧಾರ ಎಂದ ಜೋಶಿ - ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ

ಬಸವರಾಜ ಹೊರಟ್ಟಿ ಅವರ ಬಗ್ಗೆ ಅಂತಿಮ ಪಕ್ಷ ವಿಚಾರ ಮಾಡುತ್ತೆ. ನನಗೆ ಒಗಟಾಗಿ ಮಾತನಾಡಲು ಬರಲ್ಲ ಎಂದು ಕೇಂದ್ರ ಸಚಿವ ಜೋಶಿ ಪ್ರತಿಕ್ರಿಯಿಸಿದ್ದಾರೆ.

Union Minister Pralhad Joshi
ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ

By

Published : Apr 30, 2022, 9:30 PM IST

Updated : Apr 30, 2022, 10:45 PM IST

ಧಾರವಾಡ:ವಿಧಾನ ಪರಿಷತ್ ಸಭಾಪತಿ ಬಸವರಾಜ ಹೊರಟ್ಟಿ ಅವರು ಬಿಜೆಪಿ ಸೇರ್ಪಡೆ ಕುರಿತಂತೆ ಪಕ್ಷದ ರಾಜ್ಯಾಧ್ಯಕ್ಷರು ಚರ್ಚೆ ಮಾಡುತ್ತಾರೆ. ಜತೆಗೆ ಮುಖ್ಯಮಂತ್ರಿಗಳೊಂದಿಗೆ ಚರ್ಚಿಸಿ ಸೂಕ್ತ ಸಮಯದಲ್ಲಿ ಸೂಕ್ತವಾದ ನಿರ್ಧಾರ ತೆಗೆದುಕೊಳ್ಳುತ್ತೇವೆ‌ ಎಂದು ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ ತಿಳಿಸಿದರು.

ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ

ಹೆಬ್ಬಳ್ಳಿ ಗ್ರಾಮದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಬಿಜೆಪಿ ಸೇರ್ಪಡೆಗೆ ಸಂಬಂಧಿಸಿದಂತೆ ಹೊರಟ್ಟಿ ಏನು ಹೇಳಿದ್ದಾರೋ ಹಾಗೂ ಮೋಹನ ಲಿಂಬಿಕಾಯಿ ಏನು ಹೇಳಿದ್ದಾರೋ ಎಂಬುದನ್ನು ನಾನು ಗಮನಿಸಿಲ್ಲ. ನನಗೆ ಒಗಟಾಗಿ ಮಾತನಾಡಲು ಬರಲ್ಲ. ಹೊರಟ್ಟಿ ಅವರ ಬಗ್ಗೆ ಅಂತಿಮವಾಗಿ ಪಕ್ಷ ವಿಚಾರ ಮಾಡುತ್ತೆ ಎಂದಷ್ಟೇ ಹೇಳಿದರು.

ಇದನ್ನೂ ಓದಿ:ನಾನು ಸ್ಟ್ರಾಂಗ್ ಆಗಿ ಆಡಳಿತ ನಡೆಸಿದ್ರೆ ಡಿಕೆಶಿಗೆ ತಡೆದುಕೊಳ್ಳಲು ಸಾಧ್ಯವಿಲ್ಲ: ಸಿಎಂ ತಿರುಗೇಟು

Last Updated : Apr 30, 2022, 10:45 PM IST

ABOUT THE AUTHOR

...view details